newsics.com
ಶ್ರೀನಗರ: ವೈಷ್ಣೋದೇವಿ ಯಾತ್ರೆಯನ್ನು ಮತ್ತೆ ಈ ಯಾತ್ರೆಯನ್ನು ಮುಂದೂಡಲಾಗಿದೆ ಎಂದು ದೇವಾಲಯ ಮಂಡಳಿ ಪ್ರಕಟಿಸಿದೆ.
ಜೈ ಮಾತಾ ದಿ! ಭವನ ಮತ್ತು ಟ್ರ್ಯಾಕ್‌ನಲ್ಲಿ ನಿರಂತರ ಮಳೆಯಿಂದಾಗಿ ಸೆಪ್ಟೆಂಬರ್ 14ರಿಂದ ನಿಗದಿಯಾಗಿದ್ದ ಶ್ರೀ ಮಾತಾ ವೈಷ್ಣೋದೇವಿ ಯಾತ್ರೆಯ ಆರಂಭವನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆಯ ನಂತರ ಆಗಸ್ಟ್ 26ರಂದು ವೈಷ್ಣೋದೇವಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಅದೇ ದಿನ ಯಾತ್ರೆಯ ಮಾರ್ಗದಲ್ಲಿ ದೊಡ್ಡ ಭೂಕುಸಿತ ಸಂಭವಿಸಿ 34 ಜನರು ಸಾವನ್ನಪ್ಪಿದರು ಮತ್ತು 20 ಜನರು ಗಾಯಗೊಂಡಿದ್ದರು. ನಂತರ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಯಾತ್ರೆ ಮಾರ್ಗದಲ್ಲಿ ಅಧ್ಕುವಾರಿ ಬಳಿ ಸಂಭವಿಸಿದ ಭೂಕುಸಿತ ಘಟನೆಯ ತನಿಖೆಗಾಗಿ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದರು.