newsics.com
ವಾಷಿಂಗ್ಟನ್: ಅಮೆರಿಕದಲ್ಲಿ ಪತ್ನಿ, ಮಗನ ಮುಂದೆ ಭಾರತೀಯನ ತಲೆ ಕಡಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಚಂದ್ರಮೌಳಿ ನಾಗಮಲ್ಲಯ್ಯ(50) ಅವರನ್ನು ಕೊಲೆ ಮಾಡಲಾಗಿದೆ.
ಆರೋಪಿ ಮಾರ್ಟಿನೆಜ್ ಎಂಬಾತ ವಿಕೃತಿ ಮೆರೆದಿದ್ದು, ಚಂದ್ರಮೌಳಿಯ ತಲೆ ಕಡಿದು ತಲೆಯನ್ನು ಕಾಲಿನಿಂದ ಒದ್ದಿದ್ದಾನೆ. ಆರೋಪಿ ಮಾರ್ಟಿನೆಜ್ ನನ್ನು ಡಲ್ಲಾಸ್ ಪೊಲೀಸರು ಬಂಧಿಸಿದ್ದಾರೆ.
ಅಮೆರಿಕದ ಮೋಟೆಲ್‌ನಲ್ಲಿ ನಡೆದ ವಾಗ್ವಾದದ ನಂತರ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಮಚ್ಚಿನಿಂದ ಶಿರಚ್ಛೇದ ಮಾಡಲಾಗಿದೆ. ಸೆಪ್ಟೆಂಬರ್ 10 ರಂದು ಡಲ್ಲಾಸ್ ಮೋಟೆಲ್‌ನಲ್ಲಿ ನಡೆದ ಆಘಾತಕಾರಿ ದಾಳಿಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ಕ್ರೂರವಾಗಿ ಕೊಲ್ಲಲ್ಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.