newsics.com
ಸೋಶಿಯಲ್ ಮೀಡಿಯಾವೇ ಹಾಗೆ, ಜನಸಾಮಾನ್ಯರನ್ನು ರಾತ್ರಿ ಬೆಳಗಾಗುವಷ್ಟರಲ್ಲಿ ಫೇಮಸ್ ಮಾಡಿ ಬಿಡುತ್ತದೆ. ಇತ್ತೀಚಿಗಷ್ಟೇ ತನ್ನ ಕಣ್ಣುಗಳ ಸೌಂದರ್ಯ ಮೂಲಕವೇ ಕುಂಭಮೇಳದ ಮೊನಾಲಿಸಾ ದಿನಬೆಳಗಾಗುವುದರೊಳಗೆ ಭಾರಿ ಜನಪ್ರಿಯತೆ ಪಡೆದಿದ್ದಳು.
ಇದೀಗ ಯುವತಿಯೊಬ್ಬಳುಕನ್ನಡ ಸಿನಿಮಾದ ಹಾಡೊಂದನ್ನು ತನ್ನದೇ ದಾಟಿಯಲ್ಲಿ ಹಾಡಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾಳೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಎಲ್ಲಿ ನೋಡಿದ್ರೂ ಈ ಯುವತಿಯ ವಿಡಿಯೋಗಳದ್ದೇ ಹವಾ.
ಈ ವಿಡಿಯೋದಲ್ಲಿ ಯುವತಿಯೊಬ್ಬಳು ಹೂವಿನ ಬಾಣದಂತೆ ಹಾಡನ್ನು ಹಾಡುವುದನ್ನು ನೋಡಬಹುದು. ತನ್ನ ಅಕ್ಕ ಪಕ್ಕದಲ್ಲಿ ನಿಂತಿರುವ ಸ್ನೇಹಿತರು ಈಕೆ ಹಾಡು ಹಾಡುವ ರೀತಿಗೆ ನಕ್ಕಿದ್ದಾರೆ. ಆದರೆ ಈಕೆ ಮಾತ್ರ ಹಾಡು ಹಾಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಿಲ್ಲ. ಈ ವಿಡಿಯೋದ ಕೊನೆಗೆ ಎಲ್ಲರೂ ಚಪ್ಪಾಳೆ ತಟ್ಟಿ ಹುರಿದುಂಬಿಸಿ ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಕಾಣಬಹುದು.
https://www.instagram.com/reel/DOafkfBgJO8/?igsh=MWF6bzE1YmJiaGppNg==