newsics.com
ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಹಾಗೂ ಪತ್ನಿ ಮಿಲನಾ ನಾಗರಾಜ್ ಫ್ಯಾಮಿಲಿ ಕೋರ್ಟ್ ನಲ್ಲಿ ಕಾಣಿಸಿಕೊಂಡಿದ್ದು, ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.
ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರು ಫ್ಯಾಮಿಲಿ ಕೋರ್ಟ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾಸ್ಕ್ ಧರಿಸಿ ಕೋರ್ಟ್ ಆವರಣದಲ್ಲಿ ಡಾರ್ಲಿಂಗ್ ಕೃಷ್ಣ ನಡೆದುಕೊಂಡು ಹೋಗುತ್ತಿರುವ ಫೋಟೋ ಇದಾಗಿದೆ. ಈ ಫೋಟೋ ಅಭಿಮಾನಿಗಳಲ್ಲಿ ಆತಂಕವನ್ನ ಉಂಟುಮಾಡಿತು. ಕೆಲವರು ಈ ಜೋಡಿ ವಿಚ್ಛೇದನಕ್ಕೆ ಮುಂದಾಗಿದ್ದಾರೆಯೇ ಎಂದು ಊಹಾಪೋಹ ಮಾಡಿದರು. ಆದರೆ, ಸತ್ಯವು ಬೇರೆನೇ ಇದೆ.
ಡಾರ್ಲಿಂಗ್ ಕೃಷ್ಣ ಮಾಸ್ಕ್ ಧರಿಸಿ ಫ್ಯಾಮಿಲಿ ಕೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗುರುತು ಸಿಗಬಾರದೆಂದು ಮಾಸ್ ಧರಿಸಿದ್ದರೂ ಅವರು ಡಾರ್ಲಿಂಗ್ ಕೃಷ್ಣ ಎಂಬುದು ಗೊತ್ತಾಗಿದೆ. ಡಾರ್ಲಿಂಗ್ ಕೃಷ್ಣ ಕೋರ್ಟ್ ನಲ್ಲಿ ಕಾಣಿಸಿಕೊಂಡಿರುವುದು ಸಿನಿಮಾ ವಿಚಾರಕ್ಕೆ ಎನ್ನಲಾಗಿದೆ.
ಡಾರ್ಲಿಂಗ್ ಕೃಷ್ಣ ನಟನಾಗಿ, ನಿರ್ದೇಶಕನಾಗಿ ‘ಲವ್ ಮಾಕ್ಟೇಲ್’ ಸಿನಿಮಾ ಮಾಡಿದ್ದಾರೆ. ಲವ್ ಮಾಕ್ಟೇಲ್, ಲವ್ ಮಾಕ್ಟೇಲ್ -2 ಸಿನಿಮಾ ನಿರ್ದೇಶನ ಮಾಡಿದ್ದಲ್ಲದೇ ಕೃಷ್ಣ ಹಾಗೂ ಮಿಲನಾ ಅವರೇ ಸಿನಿಮಾಗೆ ಬಂಡವಾಳವನ್ನೂ ಹೂಡಿದ್ದರು. ಇದೀಗ ಲವ್ ಮಾಕ್ಟೇಲ್-೩ ಕೂಡ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ಫ್ಯಾಮಿಲಿ ಕೋರ್ಟ್ ನ ದೃಶ್ಯಗಳು ಇರುತ್ತವಂತೆ. ಅದೇ ಕಾರನಕ್ಕೆ ಕೌಟುಂಬಿಕ ನ್ಯಾಯಾಲಯ ಹೇಗಿರುತ್ತದೆ ಎಂಬುದನ್ನು ನೋಡಲು ಸ್ವತಃ ಡಾರ್ಲಿಂಗ್ ಕೃಷ್ಣ ಕೋರ್ಟ್ ಗೆ ತೆರಳಿ ವೀಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ