newsics.com
ಬೆಂಗಳೂರು : ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಅವರ ನಟನೆಯ ‘ಬಿಲ್ಲ ರಂಗ ಭಾಷಾ: ದಿ ಫಸ್ಟ್ ಬ್ಲಡ್’ ಸಿನಿಮಾದ ಸುದೀಪ್ ಅವರ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ನಿರ್ದೇಶಕ ಅನೂಪ್ ಭಂಡಾರಿ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಕಿಚ್ಚ ಸುದೀಪ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಪೋಸ್ಟರ್ ನಲ್ಲಿ ನಟ ಸುದೀಪ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಈಗ ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ ಸುದೀಪ್ ಅವರು ವಾರಿಯರ್ ರೀತಿ ಕಾಣುತ್ತಿದ್ದಾರೆ. ಕೈಯಲ್ಲಿ ರಾಕೆಟ್ ಲಾಂಚರ್ ಹಿಡಿದಿದ್ದಾರೆ. ಬೆನ್ನಿಗೆ ಕತ್ತಿ ಸಿಕ್ಕಿಸಿಕೊಂಡಿದ್ದಾರೆ. ಹಣೆಗೆ ಧರಿಸಿರುವ ಕನ್ನಡಕ ಈ ಸಿನಿಮಾ 40-50ರ ದಶಕದ ಕತೆ ಇರಬಹುದೆಂಬ ಅನುಮಾನ ಮೂಡಿಸುತ್ತಿದೆ. ಸುದೀಪ್ ಅವರ ಜೊತೆಗೆ ಪೋಸ್ಟರ್ನಲ್ಲಿರುವ ಬಾವುಟವೊಂದು ಸಹ ಗಮನ ಸೆಳೆಯುತ್ತಿದೆ.
ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಮ್ಯಾಕ್ಸ್ ಸಿನಿಮಾದ ನಂತರ ಸುದೀಪ್ ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.