newsics.com
ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ಬರ್ತ್ಡೇ ಹಿಂದಿನ ದಿನ ಪ್ರೆಸ್ಮೀಟ್ ಮಾಡಿದ್ದಾರೆ
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್, ರಾಜಕೀಯಕ್ಕೆ ಬರುವ ಯೋಚನೆ ಇಲ್ಲ. ಆದರೆ ಆಗಾಗ ರಾಜಕೀಯಕ್ಕೆ ಬರುವ ಹಾಗೆ ಕೆಲವರು ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ.ಸದ್ಯಕ್ಕೆ ರಾಜಕೀಯಕ್ಕೆ ಬರುವ ಅಲೋಚನೆ ನನಗೆ ಇಲ್ಲ. ಅಗಾಗ ಕೆಲವರು ರಾಜಕೀಯದ ಬಗ್ಗೆ ಯೋಚನೆ ಮಾಡುವಂತೆ ಮಾಡುತ್ತಾರೆ ಎಂದು ಕಿಚ್ಚ ನೀಡಿದ ಹೇಳಿಕೆ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
ಒಂದು ವೇಳೆ ನಾನು ರಾಜಕೀಯಕ್ಕೆ ಬಂದ್ರೂ ಬದಲಾಗಲ್ಲ. ನಾನು ಬದಲಾಗದ ಹಾಗೆ ನನ್ನ ನಟ್ಟು ಟೈಟ್ ಮಾಡಿಕೊಳ್ತೀನಿ. ಕೆಲವೊಮ್ಮೆ ರಾಜಕೀಯಕ್ಕೆ ಬರಬೇಕು ಅನ್ನಿಸುತ್ತೆ. ಆದರೆ ರಾಜಕೀಯಕ್ಕೆ ಬರಬೇಕು ಅಮ್ತೇನೂ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.