newsics.com
ಚಂಡೀಗಢ: ಭಾರೀ ಮಳೆ, ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದಾಗಿ ಸೋಮವಾರ ಸ್ಥಗಿತಗೊಂಡಿದ್ದ ಮಣಿಮಹೇಶ ಯಾತ್ರೆಯ ವೇಳೆ ಹತ್ತು ಯಾತ್ರಿಕರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ಕಾಣೆಯಾಗಿದ್ದಾರೆ.
ಭರ್ಮೋರ್ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಸುಮಾರು 5,000 ಭಕ್ತರನ್ನು ಕಲ್ಸುಯಿನ್‌ನಿಂದ ನೂರ್ಪುರ್ ಮತ್ತು ಪಠಾಣ್‌ಕೋಟ್‌ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ..
ಪಾಂಗ್ ಅಣೆಕಟ್ಟಿನ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಹೆಚ್ಚಿರುವುದರಿಂದ ಧರ್ಮಶಾಲಾ ಮತ್ತು ಮೆಕ್ಲಿಯೋಡ್‌ಗಂಜ್ ಅಪಾಯದಲ್ಲಿವೆ.
ಭೂಕುಸಿತದಿಂದಾಗಿ ಕಿರಾತ್‌ಪುರ-ಮನಾಲಿ ರಾಷ್ಟ್ರೀಯ ಹೆದ್ದಾರಿಯೂ ಮತ್ತೆ ಸ್ಥಗಿತಗೊಂಡಿದೆ.ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಪೊಲೀಸ್ ಸಿಬ್ಬಂದಿ, ಗೃಹರಕ್ಷಕರು, ಸ್ವಯಂಸೇವಕರು, ಎನ್‌ಸಿಸಿ ಕೆಡೆಟ್‌ಗಳು, ಸ್ಥಳೀಯ ನಿವಾಸಿಗಳು ಮತ್ತು ನಾಗರಿಕ ಅಧಿಕಾರಿಗಳನ್ನು ಒಳಗೊಂಡ ಏಳು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ .