newsics.com
ನ್ಯೂಯಾರ್ಕ್: ನಯಾಗರಾ ಜಲಪಾತದಿಂದ ನ್ಯೂಯಾರ್ಕ್ ನಗರಕ್ಕೆ 54 ಜನರನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್ ಅಪಘಾತವಾಗಿ, ಐದು ಜನ ಸಾವನ್ನಪ್ಪಿದ್ದು, ಹಲವಾರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಂಟರ್‌ಸ್ಟೇಟ್ 90 ಹೆದ್ದಾರಿಯ ಪೆಂಬ್ರೋಕ್ ಬಳಿ ನಡೆದಿದೆ.
ಭಾರತೀಯರು, ಚೈನೀಸ್, ಮತ್ತು ಫಿಲಿಪಿನೋ ಮೂಲದ 54 ಪ್ರಯಾಣಿಕರು ಬಸ್ ನಲ್ಲಿದ್ದರು.
ಟಬಸ್ ನಿಯಂತ್ರಣ ಕಳೆದುಕೊಂಡು ರಸ್ತೆಯ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದು, ಕೊನೆಗೆ ಬಲಭಾಗದ ಕಂದಕಕ್ಕೆ ಉರುಳಿದೆ, ಇದರಿಂದ ಕಿಟಕಿಗಳು ಒಡೆದು ಹಲವರು ಹೊರಗೆ ಬಿದ್ದಿದ್ದಾರೆ. ಈ ಘಟನೆಯು ನ್ಯೂಯಾರ್ಕ್ ರಾಜ್ಯದ ಪೆಂಬ್ರೋಕ್‌ನಲ್ಲಿ, ಬಫಲೋದಿಂದ ಸುಮಾರು 40 ಕಿಲೋಮೀಟರ್ ಪೂರ್ವಕ್ಕೆ ಸಂಭವಿಸಿದೆ.
https://www.newsics.com/2025/08/23/rains-expected-again-in-the-state-imd-forecast/