newsics.com
ಬಾಲಿವುಡ್ ನ 3 ಈಡಿಯಟ್ಸ್ ಸಿನಿಮಾದಲ್ಲಿ ಪ್ರಾಧ್ಯಾಪಕನ ಪಾತ್ರದಿಂದ ಪ್ರಸಿದ್ಧರಾದ ಹಿರಿಯ ನಟ ಅಚ್ಯುತ ಪೋತದಾರ್ ಇಂದಿಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ವಯೋಸಹಜ ಅಸ್ವಸ್ಥತೆಯಿಂದ ಅವರನ್ನು ಥಾಣೆಯ ಜುಪಿಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಮಂಗಳವಾರ ಮುಂಜಾನೆ ಕೊನೆಯುಸಿರೆಳೆದರು. ಇಂದು ಸಂಜೆ ಥಾಣೆಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಸಿನಿಮಾದಲ್ಲಿ ತಮ್ಮ ಛಾಪು ಮೂಡಿಸುವ ಮೊದಲು, ಅಚ್ಯುತ ಪೋತದಾರ್ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಇಂಡಿಯನ್ ಆಯಿಲ್ ಕಂಪನಿಯಲ್ಲಿಯೂ ಕೆಲಸ ಮಾಡಿದ್ದರು. ನಟನೆಯ ಮೇಲಿನ ಅವರ ಉತ್ಸಾಹವು 1980 ರ ದಶಕದಲ್ಲಿ ಚಲನಚಿತ್ರಗಳು ಮತ್ತು ದೂರದರ್ಶನಕ್ಕೆ ಪ್ರವೇಶವನ್ನು ನೀಡಿತ್ತು. ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಿನಿಮಾಕ್ಷೇತ್ರದಲ್ಲಿ ದುಡಿದಿದ್ದಾರೆ.
ಪೋತದಾರ್ ಹಿಂದಿ ಮತ್ತು ಮರಾಠಿ ಸಿನಿಮಾದಲ್ಲಿ 125 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆಕ್ರೋಶ್, ಆಲ್ಬರ್ಟ್ ಪಿಂಟೋ ಕೋ ಗುಸ್ಸಾ ಕ್ಯೋಂ ಆತಾ ಹೈ, ಅರ್ಧ ಸತ್ಯ, ತೇಜಾಬ್, ಪರಿಂದಾ, ರಾಜು ಬನ್ ಗಯಾ ಜಂಟಲ್‌ಮ್ಯಾನ್, ದಿಲ್ವಾಲೆ, ರಂಗೀಲಾ, ವಾಸ್ತವ್, ಹಮ್ ಸಾಥ್ ಸಾಥ್ ಹೇ, ಪರಿಣೀತಾ, ಲಗೇ ವೆನ್ ರಹೋ ಮುನ್ನಾಗ್ಗ್ 2 ಮುಂತಾದ ಚಲನಚಿತ್ರಗಳಲ್ಲಿ ವಾರು ಅಭಿನಯಿಸಿದ್ದರು.
ರಾಜ್‌ಕುಮಾರ್ ಹಿರಾನಿಯವರ ಬ್ಲಾಕ್‌ಬಸ್ಟರ್ ಚಲನಚಿತ್ರ 3 ಈಡಿಯಟ್ಸ್‌ನಲ್ಲಿ ಕಟ್ಟುನಿಟ್ಟಾದ ಆದರೆ ಪ್ರೀತಿಯ ಎಂಜಿನಿಯರಿಂಗ್ ಪ್ರಾಧ್ಯಾಪಕನ ಪಾತ್ರವನ್ನು ನಿರ್ವಹಿಸುವ ಮೂಲಕ ಅವರು ಪ್ರಸಿದ್ಧರಾದರು. ಅವರ ‘ಕೆಹ್ನಾ ಕ್ಯಾ ಚಾಹತೇ ಹೋ’ ಎಂಬ ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ಬಹಳ ಫೇಮಸ್ ಆಗಿದ್ದು, ಸೋಷಿಯಲ್ ಮೀಡಿಯಾ ಮತ್ತು ಮೀಮ್‌ಗಳಲ್ಲಿ ಇದನ್ನು ಇನ್ನೂ ಹೆಚ್ಚಾಗಿ ಬಳಸಲಾಗುತ್ತದೆ.
ಚಲನಚಿತ್ರಗಳಲ್ಲದೆ ಪೋತದಾರ್ ದೂರದರ್ಶನದಲ್ಲಿಯೂ ಸಾಕಷ್ಟು ಕೆಲಸ ಮಾಡಿದರು. ಅವರು ‘ವಾಗ್ಲೇ ಕಿ ದುನಿಯಾ’, ‘ಮಜಾ ಹೋಶಿಲ್ ನಾ’, ‘ಮಿಸೆಸ್ ತೆಂಡೂಲ್ಕರ್’ ಮತ್ತು ‘ಭಾರತ್ ಕಿ ಖೋಜ್’ ಮುಂತಾದ ಪ್ರಸಿದ್ಧ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಾಯಬೇಕೆಂದು ನದಿಗೆ ಹಾರಿದ ಮಾಜಿ ಸೈನಿಕ, ಕೊನೇ ಕ್ಷಣದಲ್ಲಿ ಬದುಕಲು ಬಯಸಿ ಕೂಗಿಕೊಂಡ… ಆಮೇಲೇನಾಯ್ತು?