newsics.com
ಕನ್ನಡ ಕಿರುತೆರೆಯ ಪಾರ, ಬಿಗ್ ಬಾಸ್ ಸೀಸನ್ 11ರ ಟಾಪ್ 5ನೇ ಫೈನಲಿಸ್ಟ್ ಮೋಕ್ಷಿತಾ ಪೈ . ಸೋಷಿಯಲ್ ಮೀಡಿಯಾ ಸಿಕ್ಕಾಪಟ್ಟೆ ಌಕ್ಟೀವ್ ಆಗಿರೋ ನಟಿ ಮೋಕ್ಷಿತಾ ಪೈ ಈಗ ರಾಧೆಯ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲೂ ಭಾಗವಹಿಸಿ, ಕನ್ನಡಿಗರ ಮನ ಗೆದ್ದಿದ್ದಾರೆ. ದೊಡ್ಮನೆಯೊಳಗೆ ತಮ್ಮ ಸೌಂದರ್ಯ, ಬೋಲ್ಡ್ ಆಗಿ ಆಟವಾಡುವ ರೀತಿ ಹಾಗೂ ನೇರವಾದ ಮಾತುಗಳಿಂದಲೇ ಜನರಿಗೆ ಇಷ್ಟವಾಗಿದ್ದರು.ಇದೀಗ ಪಾರು ಸೀರಿಯಲ್ ಹಾಗೂ ಬಿಗ್ ಬಾಸ್ ಮೂಲಕ ಗಮನ ಸೆಳೆದಿರುವ ಮೋಕ್ಷಿತ ಪೈ ಈಗ ಮಿಡಲ್ ಕ್ಲಾಸ್ ರಾಮಾಯಣ ಸಿನಿಮಾ ಮೂಲಕ ಬೆಳ್ಳಿತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.
ಕೃಷ್ಣ ಜನ್ಮಾಷ್ಟಮಿಯಂದು ಇನ್ಸ್ಟಾಗ್ರಾಮ್ನಲ್ಲಿ ಮೋಕ್ಷಿತಾ ಪೈ ಅವರು ರಾಧೆಯ ಗೆಟಪ್ವನ್ನು ವಿಡಿಯೋ ಶೂಟ್ ಹಾಗೂ ಫೋಟೋಶೂಟ್ ಮಾಡಿದ್ದಾರೆ.
ನಟಿ ಮೋಕ್ಷಿತಾ ಪೈ ಅವರು, ಈ ಶೂಟ್ ನನಗೆ ತುಂಬಾ ಸ್ಪೆಷಲ್. ಇದು ಸಂಪೂರ್ಣವಾಗಿ ಯೋಜಿತವಲ್ಲ, ಆದರೆ ಎಲ್ಲಾನು ಕೃಷ್ಣ ಲೀಲಾ ತರಾ ಪರಿಪೂರ್ಣವಾಗಿ ಆಗಿದೆ ಎಂದು ಬರೆದುಕೊಂಡಿದ್ದಾರೆ.
https://www.instagram.com/p/DNf1UvsPGeG/?igsh=MXE3ZHV4cWF4cDl0eg==