newsics.com
ಮುಂಬೈ: ಚಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಗಾಯಕ ಮಕ್ಸೂದ್ ಅಲಿ @ ಲಕ್ಕಿ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ.
2014ರಲ್ಲಿ ಸೈಯದ್ ರಿಜ್ವಾಲ್ ಎಂಬುವವರು ಲಕ್ಕಿ ಅಲಿ ವಿರುದ್ಧ ಖಾಸಗಿ ದೂರು ನೀಡಿದ್ದರು. ಜಮೀನು ಮಾರುವುದಾಗಿ ಹೇಳಿ ಹಣ ಪಡೆದು ಹಿಂತಿರುಗಿಸದೇ ವಂಚಿಸಿದ್ದಾಗಿ ದೂರುದ್ದರು. ೨೭ ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ. ಸಿವಿಲ್ ದಾವೆಯಲ್ಲಿ ರಾಜಿ ಮಾಡಿಕೊಂಡು ಚೆಕ್ ನೀಡಿದ್ದರು. 2002ರ ವ್ಯವಹಾರ ಸಂಬಂಧ 2013ರಲ್ಲಿ ಚೆಕ್ ನೀಡಿದ್ದರು. 92 ಲಕ್ಷದ ಚೆಕ್ ಬೌನ್ಸ್ ಆದ ಕಾರಣ ಕೇಸ್ ಹಾಕಿದ್ದರು.
ಮ್ಯಾಜಿಸ್ಟ್ರೇಟ್ ಕೋರ್ಟ್ ಲಕ್ಕಿ ಅಲಿಗೆ 92.10 ಲಕ್ಷ ದಂಡ ವಿಧಿಸಿತ್ತು. ದಂಡ ಪಾವತಿ ಮಾಡದೊದ್ದರೆ ೬ ತಿಂಗಳ ಸೆರೆವಾಸ ಅನುಭವಿಸುವಂತೆ ಆದೇಶ ನೀಡಿತ್ತು. ಸುಪ್ರೀಂಕೋರ್ಟ್ ಕೂಡ ಈ ಆದೇಶ ರದ್ದುಪಡಿಸಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಲಕ್ಕಿ ಅಲಿ ವಿರುದ್ಧ 6 ತಿಂಗಳು ಸೆರೆವಾಸ ವಾರಂಟ್ ಜಾರಿಯಾಗಿದೆ.