newsics.com
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ನಮ್ಮ ಮೆಟ್ರೋ ಮೂರನೇ ಹಂತಕ್ಕೆ, ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ತೆರಳುತ್ತಿದ್ದ ಮಾರ್ಗದಲ್ಲಿ ಯುವಕನೊಬ್ಬ ಬ್ಯಾರಿಕೇಡ್ ಜಂಪ್ ಮಾಡಿದ ಘಟನೆ ನಡೆದಿದೆ.
ಬೆಂಗಳೂರಿನ ಸೌಂತ್ ಎಂಡ್ ಸರ್ಕಲ್ ಬಳಿಯಲ್ಲಿ ಬ್ಯಾರಿಕೇಡ್ ಜಂಪ್ ಮಾಡಲು ಯುವಕ ಯತ್ನಿಸಿದ್ದಾನೆ. ಆದರೆ, ಸ್ಥಳದಲ್ಲಿದ್ದ ಪೊಲೀಸರು ಆತನನ್ನು ತಡೆದಿದ್ದಾರೆ. ಆ ವೇಳೆಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಆ ಸ್ಥಳದಿಂದ ತೆರಳಿದ್ದಾರೆ. ಯುವಕ ದಿಢೀರ್ ಪ್ರಧಾನಿ ಮೋದಿ ಆಗಮನದ ವೇಳೆಯಲ್ಲಿ ಬ್ಯಾರಿಕೇಡ್ ಹಾರಿ, ರಸ್ತೆಗೆ ತೆರಳೋದಕ್ಕೆ ಯತ್ನಿಸಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು.
ಬೆಂಗಳೂರಲ್ಲಿಂದು ಮೋದಿ ಹವಾ, ಪ್ರಧಾನಿ ಜತೆ ಸಿಎಂ ಡಿಸಿಎಂ, ಡಿಕೆ ಆಪ್ತ ಮಾತು