Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬೆಂಗಳೂರಲ್ಲಿಂದು ಮೋದಿ ಹವಾ, ಪ್ರಧಾನಿ ಜತೆ ಸಿಎಂ ಡಿಸಿಎಂ, ಡಿಕೆ ಆಪ್ತ ಮಾತು
ಕರ್ನಾಟಕದೇಶಪ್ರಮುಖ

ಬೆಂಗಳೂರಲ್ಲಿಂದು ಮೋದಿ ಹವಾ, ಪ್ರಧಾನಿ ಜತೆ ಸಿಎಂ ಡಿಸಿಎಂ, ಡಿಕೆ ಆಪ್ತ ಮಾತು

Share
2 Min Read
SHARE

newsics.com

ಬೆಂಗಳೂರು: ಪ್ರಧಾನಿ ಮೋದಿ ಭಾನುವಾರ ನಾಲ್ಕು ಗಂಟೆಗಳ ಅವಧಿಯಲ್ಲಿ ಮೂರು ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ವಂದೇ ಭಾರತ್‌ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಬಳಿಕ ಮೆಟ್ರೋ ಹಳದಿ ಮಾರ್ಗ ಉದ್ಘಾಟಿಸಿದರು. ಮೆಟ್ರೋ ಮೂರನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಎಲೆಕ್ಟ್ರಾನಿಕ್‌ ಸಿಟಿಯ ಐಐಐಟಿ ಅಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಬ್ಬರೂ ಪ್ರಧಾನಿ ಮೋದಿಯವರ ಜತೆಗೇ ಇದ್ದರು.

ಐಐಐಟಿ ಆಡಿಟೋರಿಯಂನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ಇಬ್ಬರೂ ಪ್ರತ್ಯೇಕವಾಗಿ ಪ್ರಧಾನಿ ಮೋದಿ ಅವರಿಗೆ ನೆನಪಿನ ಕಾಣಿಕೆಯನ್ನು ಕೊಟ್ಟರು. ವೇದಿಕೆ ಬಂದ ನಂತರ ಮೊದಲು ಸಿಎಂ ಸಿದ್ದರಾಮಯ್ಯನವರು ಒಂದು ಗಣಪತಿ ಪ್ರತಿಮೆಯನ್ನು ಮೋದಿಯವರಿಗೆ ನೀಡಿ ಕೈಕುಲುಕಿ, ಸ್ವಾಗತ ಕೋರಿದರು. ಅದಾದ ಮೇಲೆ ಡಿ.ಕೆ.ಶಿವಕುಮಾರ್‌ ಅವರು ಮತ್ತೊಂದು ಬೆಳ್ಳಿ ಲೇಪನವಿರುವ ಗಣೇಶನ ವಿಗ್ರಹವನ್ನು ಪ್ರಧಾನಿ ಮೋದಿಯವರಿಗೆ ಕೊಟ್ಟರು. ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಇಬ್ಬರೂ ಪ್ರತ್ಯೇಕವಾಗಿ ಎರಡು ಗಣೇಶನ ವಿಗ್ರಹವನ್ನು ಪ್ರಧಾನಿ ಮೋದಿಯವರಿಗೆ ಕೊಟ್ಟಿದ್ದು ವಿಶೇಷ.

ಮೆಟ್ರೋ ಕಾಮಗಾರಿ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ಮೋದಿಯವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿ ವಿಷಯಗಳನ್ನೂ ವಿವರಿಸುತ್ತಿದ್ದರು. ಮೆಟ್ರೋ ಉದ್ಘಾಟನೆ ಮಾಡುವಾಗ, ಮೆಟ್ರೋ ರೈಲಲ್ಲಿ ಪ್ರಯಾಣ ಮಾಡುವಾಗೆಲ್ಲ ಅವರು ಪ್ರಧಾನಿ ಜತೆಗೇ ಇದ್ದರು. ಮೆಟ್ರೋ ರೈಲಲ್ಲಿ ಪ್ರಧಾನಿ ಮೋದಿ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಮಧ್ಯೆ ಕುಳಿತು ಪ್ರಯಾಣ ಮಾಡಿದರೆ, ಬಿಜೆಪಿ ಸಂಸದರೆಲ್ಲ ಎದುರಿನ ಸೀಟ್‌ನಲ್ಲಿ ಕೈಕಟ್ಟಿಕೊಂಡು ಕುಳಿತಿದ್ದರು. ಮೆಟ್ರೋ ರೈಲಲ್ಲಿ ಹೋಗುವಾಗ ಪ್ರಧಾನಿ ಮೋದಿ ಏನೋ ಜೋಕ್‌ ಮಾಡಿದ್ದಕ್ಕೆ, ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಇಬ್ಬರೂ ಜೋರಾಗಿ ನಕ್ಕರು..

ಐಐಐಟಿ ಆಡಿಟೋರಿಯಂನಲ್ಲಿ ಪ್ರಧಾನಿ ಮೋದಿಯವರ ಪಕ್ಕ ಸಿಎಂ ಸಿದ್ದರಾಮಯ್ಯ ಕುಳಿತಿದ್ದರು. ಆದರೆ ಸಿದ್ದರಾಮಯ್ಯನವರು ಭಾಷಣಕ್ಕೆಂದು ಎದ್ದು ಹೋಗುತ್ತಿದ್ದಂತೆ, ಡಿ.ಕೆ.ಶಿವಕುಮಾರ್‌ ಅವರು ಬಂದು ಮೋದಿ ಪಕ್ಕ ಕುಳಿತರು. ಅತ್ತ ಸಿಎಂ ಮಾತಾಡುತ್ತಿದ್ದರೆ, ಇತ್ತ ಡಿ.ಕೆ.ಶಿವಕುಮಾರ್‌ ಅವರು ಮೋದಿಯವರ ಜತೆ ಬೇರೇನೋ ಡೀಪ್‌ ಡಿಸ್ಕಸ್‌ ಮಾಡುತ್ತಿದ್ದರು. ಮೋದಿಯವರು ಕೂಡ ಅದಕ್ಕೆ ಸ್ಪಂದಿಸುತ್ತಿದ್ದರು.

ಬೆಂಗಳೂರು ಮಹಾನಗರದ ಸಮಗ್ರ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳಿಗೆ ಸಮರ್ಪಕ ಅನುದಾನ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಡಿ.ಕೆ.ಶಿವಕುಮಾರ್‌ ಅವರು ಮನವಿ ಸಲ್ಲಿಸಿದ್ದಾರೆ.

ಸಾಮಾನ್ಯವಾಗಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರನ್ನು ಟೀಕಿಸುತ್ತಿರುತ್ತಾರೆ. ಆದರೆ ಮೋದಿ ಕರ್ನಾಟಕಕ್ಕೆ ಬಂದಾಗ ಅಥವಾ ಸಿದ್ದರಾಮಯ್ಯ ದೆಹಲಿಗೆ ಹೋಗಿ ಇಬ್ಬರೂ ಭೇಟಿಯಾದಾಗ ಇವರಿಬ್ಬರ ಮಧ್ಯೆ ಒಂದು ಆತ್ಮೀಯತೆ ಕಾಣುತ್ತದೆ ಎಂಬುದು ಹಲವರ ಅಭಿಪ್ರಾಯ. ಇನ್ನು ಡಿ.ಕೆ.ಶಿವಕುಮಾರ್‌ ಅವರು ಸಾರ್ವಜನಿಕವಾಗಿ ಪ್ರಧಾನಿ ಮೋದಿಯವರನ್ನು ಟೀಕಿಸುವುದು, ಬೈಯುವುದು ವಿರಳ. ಬಿಜೆಪಿ ವಿರುದ್ಧವಷ್ಟೇ ಕಿಡಿಕಾರುತ್ತಾರೆ.

Waterlogging at Yallammadevi temple ಧಾರಾಕಾರ ಮಳೆ: ಯಲ್ಲಮ್ಮದೇವಿ ದೇಗುಲಕ್ಕೆ ಜಲದಿಗ್ಬಂಧನ

Modi inaugurates Yellow Metro ಹಳದಿ‌ ಮೆಟ್ರೋಗೆ ಮೋದಿ ಚಾಲನೆ: ನಾಳೆಯಿಂದ ಸಂಚಾರ ಆರಂಭ

TAGGED:DCM DK has a close talk with the Prime MinisterModi vibes in Bengaluru today
Share This Article
Facebook Twitter Copy Link Print
Previous Article Waterlogging at Yallammadevi temple ಧಾರಾಕಾರ ಮಳೆ: ಯಲ್ಲಮ್ಮದೇವಿ ದೇಗುಲಕ್ಕೆ ಜಲದಿಗ್ಬಂಧನ
Next Article ಮೆಜೆಸ್ಟಿಕ್ ಸೇರಿದಂತೆ ಹಲವು ಕಡೆ ಧಾರಾಕಾರ ಮಳೆ : ವಾಹನ ಸವಾರರ ಪರದಾಟ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?