newsics.com
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ 2024 ಆಗಸ್ಟ್ 11ರಂದು ನಡೆದಿದೆ. ಇನ್ನು ಕೆಲವೇ ದಿನಗಳಲ್ಲಿ ಜೋಡಿ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ತಿದೆ.ಮೊದಲನೇ ವಿವಾಹ ವಾರ್ಷಿಕೋತ್ಸವ ಯಾವಾಗಲೂ ಸ್ಪೆಷಲ್ ಆಗಿರುತ್ತದೆ. ತರುಣ್ ಹಾಗೂ ಸೋನಲ್ಗೂ ದಂಪತಿಗೂ ಈ ದಿನ ಸಾಕಷ್ಟು ವಿಶೇಷ ಆಗಿದೆ. ಪತಿಗೆ ಎಂದೂ ಮರೆಯಲಾರದ ಗಿಫ್ಟ್ನ ನೀಡಿದ್ದಾರೆ ಸೋನಲ್. ಈ ವಿಡಿಯೋ ವೈರಲ್ ಆಗಿದೆ.
ಈ ಪ್ರೋಮೋವನ್ನು ಜೀ ಕನ್ನಡ ತನ್ನ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಶೇರ್ ಮಾಡಿಕೊಂಡಿದೆ. ಪ್ರೋಮೋ ಕೊನೆಯಲ್ಲಿ ತುರುಣ್ ಸುಧೀರ್ ಪತ್ನಿ ಸೋನಲ್ಗೆ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ನೀಡಿದ್ದಾರೆ. ಮಹಾನಟಿ ಸೀಸನ್ 2’ ನಡೆಯುತ್ತಿದೆ. ಜಡ್ಜ್ ಸ್ಥಾನದಲ್ಲಿ ತರುಣ್ ಸುಧೀರ್ ಕೂಡ ಇದ್ದಾರೆ. ರಮೇಶ್ ಅರವಿಂದ್, ಪ್ರೇಮಾ, ನಿಶ್ವಿಕಾ ನಾಯ್ಡುಜೊತೆ ಅವರಿಗೂ ಈ ಪ್ಯಾನಲ್ನಲ್ಲಿ ಅವಕಾಶ ಸಿಕ್ಕಿದೆ. ಜೀ ಕನ್ನಡ ವಾಹಿನಿಯವರು ಮಹಾನಟಿ ವೇದಿಕೆ ಮೇಲೆ ಈ ದಂಪತಿಯ ವಿವಾಹ ವಾರ್ಷಿಕೋತ್ಸವ ಆಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ತರುಣ್ ಸುಧೀರ್ಗೆ ಸೋನಲ್ ಮೇಲೆ ವಿಶೇಷ ಪ್ರೀತಿ ಇದೆ. ಅವರು ವೇದಿಕೆ ಮೇಲೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. 12 ತಿಂಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಈ ಹೂವಿನಂತೆ ನಮ್ಮ ಜೀವನ ಅರಳಲಿ. ನೀನು ನನ್ನ ಕುಟುಂಬವನ್ನು ಕಾಪಾಡ್ತೀಯಾ ಎಂಬ ನಂಬಿಕೆ ನನಗೆ ಇದೆ. ಹಿಂದಿನದ್ದನ್ನು ನಾನು ಯೋಚನೆ ಮಾಡುವುದಿಲ್ಲ. ಈ ಸಮಯವನ್ನು ಖುಷಿಯಾಗಿ ಇಡುತ್ತೇನೆ’ ಎಂದು ತರುಣ್ ಪ್ರಾಮಿಸ್ ಮಾಡಿದರು. ಜೊತೆಗೆ ಹೂಗುಚ್ಛ, ಸೀರೆ ಮತ್ತಿತ್ಯಾದಿ ಉಡುಗೊರೆ ನೀಡಿದರು.
https://www.instagram.com/reel/DNAN7kAM56a/?igsh=MXc0bGo2Yjg5YWd0dw==