newsics.com
ಮದುವೆ ಎಂದರೆ ಸಂಭ್ರಮ. ಅದರಲ್ಲಿಯೂ ಈಗಿನ ಮದುವೆಯಲ್ಲಿ ವಧು ವರರು ಡಾನ್ಸ್ ಮಾಡುತ್ತಾರೆ. ವರನು ವಧುವನ್ನು ಡಾನ್ಸ್ ಮೂಲಕ ಸ್ವಾಗತಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಆದರೆ ಈಗ ವೈರಲ್ ಆಗಿರುವ ವಿವಾಹದ ವಿಡಿಯೊದಲ್ಲಿ,ವಧು ಮತ್ತು ವರನ ನಡುವಿನ ಸಿಹಿ ಕ್ಷಣವಾಗಿ ಪ್ರಾರಂಭವಾದದ್ದು ಕಹಿಯಾಗಿ ಮಾರ್ಪಟ್ಟಿದೆ.
ವಧು ತನ್ನ ವರನನ್ನು ನೃತ್ಯ ಮಾಡಲು ಎಳೆದುಕೊಂಡು ಬಂದಿದ್ದಾಳೆ. ಮೊದಲಿಗೆ, ವರನು ಸ್ವಲ್ಪ ಹಿಂಜರಿದನು. ಆದರೆ ಮುಗುಳ್ನಗುತ್ತಾ ಜೊತೆಯಾಗಿ ನೃತ್ಯವನ್ನಾಡಿದ್ದಾನೆ. ಆದರೆ ವಧುವಿನ ಕೈಗಳನ್ನು ಬಿಗಿಯಾಗಿ ಹಿಡಿದು ಗಿರಗಿರನೆ ತಿರುಗಿಸಿದ್ದಾನೆ. ವಧು ಮೇಲೆ ವರ ಆಕ್ರಮಣಕಾರಿಯಾಗಿ ವರ್ತಿಸಿದ್ದು, ಆತನ ಪ್ರದರ್ಶನ ಎಷ್ಟು ತೀವ್ರವಾಗಿತ್ತೆಂದರೆ ವಧು ನೆಲಕ್ಕಪ್ಪಳಿಸಿದ್ದಾಳೆ.
ದಿಗ್ಭ್ರಮೆಗೊಂಡ ವಧು ಮತ್ತೆ ಎದ್ದೇಳಲು ಪ್ರಯತ್ನಿಸಿದಳು. ಆದರೆ ಅದು ಅಲ್ಲಿಗೆ ನಿಲ್ಲಲಿಲ್ಲ. ವರನು ಅವಳನ್ನು ಎತ್ತಿಕೊಂಡು ಮತ್ತೆ ಗಿರಗಿರನೆ ತಿರುಗಿಸಿದ್ದಾನೆ. ಪರಿಣಾಮ ವಧು ಮತ್ತೆ ಬಿದ್ದಿದ್ದಾಳೆ. ಆತಂಕಗೊಂಡ ಅತಿಥಿಗಳು ಧಾವಿಸಿ ಬಂದು ಅವನನ್ನು ಪಕ್ಕಕ್ಕೆ ಎಳೆದುಕೊಂಡು ನೃತ್ಯ ಪ್ರದರ್ಶನವನ್ನು ನಿಲ್ಲಿಸಿದ್ದಾರೆ. ವರನ ಈ ವರ್ತನೆ ಕಂಡು ಅಲ್ಲಿದ್ದವರು ದಿಗ್ಭ್ರಮೆಗೊಂಡಿದ್ದಾರೆ.
https://www.instagram.com/reel/DMs_Z-OMLAU/?igsh=NDcyZmN5YXkxdzZ3