newsics.com
ಲಂಡನ್‌ನಲ್ಲಿರುವ ಕೆನ್ನಿಂಗ್ಟನ್‌ನ ಓವಲ್ ಸ್ಟೇಡಿಯಂನಲ್ಲಿ ನಡೆದ 5ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-2 ರಿಂದ ಭಾರತ- ಇಂಗ್ಲೆಂಡ್ ಸಮಬಲ ಸಾಧಿಸಿವೆ.
ಕೆಲವೇ ಕೆಲವು ಓವರ್ಗಳಲ್ಲಿ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡುವ ಮೂಲಕ ಟೀಂ ಇಂಡಿಯಾ 6 ರನ್ಗಳ ವೀರೋಚಿತ ಗೆಲುವು ಸಾಧಿಸಿತು. ಟೀಂ ಇಂಡಿಯಾದ ಈ ಗೆಲುವಿನ ಶ್ರೇಯ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಸಲ್ಲಬೇಕು.
ನಾಯಕ ಶುಭ್ಮನ್ ಗಿಲ್ ಕೂಡ 21 ರನ್ಗೆ ರನೌಟ್ ಆಗಿದ್ದರು. ಧೃವ್ ಜುರೆಲ್ ಹಾಗೂ ವಾಷಿಂಗ್ಟನ್ ಸುಂದರ್ ಕೆಲ ಸಮಯ ಬ್ಯಾಟಿಂಗ್ ಮಾಡಿದರೂ ಇಂಗ್ಲೆಂಡ್ ದಾಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಇನ್ನೊಬ್ಬ ಕನ್ನಡಿಗ ಕರುಣ್ ನಾಯರ್ ಅವರ ಅಮೋಘವಾದ ಅರ್ಧಶತಕ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 224 ರನ್ಗೆ ಆಲೌಟ್ ಆಗಿತ್ತು.
ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಆರಂಭದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿತ್ತು
ಪ್ರಸಿದ್ಧ್ ಕೃಷ್ಣ, ಜೋಶ್ ಟಂಗ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಇಂಗ್ಲೆಂಡ್ನ 9 ನೇ ವಿಕೆಟ್ ಉರುಳಿಸಿದರು. ಇಂಜುರಿಯ ನಡುವೆಯೂ ಒಂದೇ ಕೈನಲ್ಲಿ ಬ್ಯಾಟ್ ಹಿಡಿದು ಕೊನೆಯ ವಿಕೆಟ್ ಆಗಿ ಕ್ರಿಸ್ಗೆ ಬಂದ ಕ್ರಿಸ್ ವೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಒಟ್ಟಾಗಿ ಇಂಗ್ಲೆಂಡ್ ತಂಡವನ್ನು ಗುರಿಯ ಹತ್ತಿರಕ್ಕೆ ತಂದರು. ಆದರೆ ಕೊನೆಯಲ್ಲಿ ಸಿರಾಜ್ ಅಟ್ಕಿನ್ಸನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಇಂಗ್ಲೆಂಡ್ ತಂಡವನ್ನು 367 ರನ್‌ಗಳಿಗೆ ಆಲೌಟ್ ಮಾಡಿ ಭಾರತ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟಿದೆ.
https://www.newsics.com/2025/08/04/high-court-orders-transport-workers-not-to-strike-tomorrow/