newsics.com
ಐಮ್ಯಾಕ್ಸ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಒಬ್ಬ ಡೋಂಗಿ ಬಾಬಾ ವಂಚಿಸಿದ ಘಟನೆ ಬೆಂಗಳೂರಿನ ಹೊರವಲಯವಾದ ಆನೇಕಲ್‌ನಲ್ಲಿ ನಡೆದಿದೆ.
ಐಮ್ಯಾಕ್ಸ್ ಸ್ಟೋರ್‌ನಲ್ಲಿ ಸಂತೋಷ್ ಕುಮಾರ್ ಒಬ್ಬನೇ ಕೆಲಸದಲ್ಲಿದ್ದಾಗ, ಒಬ್ಬ ವ್ಯಕ್ತಿ ತಲೆಯ ಮೇಲೆ ನವಿಲುಗರಿ ಇಟ್ಟುಕೊಂಡು, ಒಂದು ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಅಂಗಡಿಗೆ ಪ್ರವೇಶಿಸಿದ. ಈ ಡೋಂಗಿ ಬಾಬಾ, ಇಪ್ಪತ್ತೈದು ದಿನಗಳಲ್ಲಿ ನಿನ್ನ ಭವಿಷ್ಯ ಬದಲಾಗುತ್ತದೆ ಎಂದು ಸಂತೋಷ್‌ಗೆ ಕಥೆಯೊಡ್ಡಿದ. ಈ ಮಾತಿನಿಂದ ಆಕರ್ಷಿತನಾದ ಸಂತೋಷ್, ಆರಂಭದಲ್ಲಿ ಎರಡು ರೂಪಾಯಿಗಳನ್ನು ದಾನವಾಗಿ ನೀಡಿದ.
ಡೋಂಗಿ ಬಾಬಾ ತನ್ನ ವಂಚನೆಯ ತಂತ್ರವನ್ನು ಮುಂದುವರೆಸಿದ್ದು, ಎರಡು ರೂಪಾಯಿಯನ್ನು ರುದ್ರಾಕ್ಷಿಯಾಗಿ ಪರಿವರ್ತಿಸುವ ಕರಾಮತ್ತನ್ನು ತೋರಿಸಿದ ಬಾಬಾ, ನಂತರ ನೂರು ರೂಪಾಯಿಗಳನ್ನು ಪಡೆದು ಸಾಯಿಬಾಬಾ ವಿಗ್ರಹವೊಂದನ್ನು ಸಂತೋಷ್‌ಗೆ ನೀಡಿದ. ಈ ನಕಲಿ ಪವಾಡದಿಂದ ಆಕರ್ಷಿತನಾದ ಸಂತೋಷ್, ಬಾಬಾನ ಮಾತುಗಳನ್ನು ನಂಬಿದ. ಬಾಬಾ ಮುಂದೆ ತಲೆಯ ಮೇಲೆ ನವಿಲುಗರಿ ಇಟ್ಟು ಬ್ಲಾಕ್ ಮ್ಯಾಜಿಕ್ ಮಾಡುವುದಾಗಿ ಹೇಳಿದ್ದಾನೆ.
ಇದನ್ನು ಬಳಸಿಕೊಂಡ ಬಾಬಾ, ಅಂಗಡಿಯ ಕ್ಯಾಷ್ ಬಾಕ್ಸ್‌ನಿಂದ 1,500 ರೂಪಾಯಿಗಳನ್ನು ಕದ್ದು, ಬಾಬಾ ಮಂತ್ರ ಮಾಡಿ ಕೊಡುವುದಾಗಿ ಹೇಳಿ, ಸಂತೋಷ್‌ನ ಕೈಯಿಂದಲೇ ಫಾಸ್ಟ್ರಾಕ್ ವಾಚ್‌ನ್ನು ಬಿಚ್ಚಿಸಿ, ತನ್ನ ಕೈಗೆ ಧರಿಸಿಕೊಂಡ. ಕೊನೆಗೆ, 1,500 ರೂಪಾಯಿ ಹಣ ಮತ್ತು ಫಾಸ್ಟ್ರಾಕ್ ವಾಚ್‌ನೊಂದಿಗೆ ಡೋಂಗಿ ಬಾಬಾ ಸ್ಥಳದಿಂದ ಪಾರಾರಿಯಾಗಿದ್ದಾನೆ. ಈ ಘಟನೆಯ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಘಟನೆಯ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.newsics.com/2025/08/02/kaffer-dam-collapses-due-to-heavy-rains/