Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಗ್ಯಾಸ್‌ ಗೀಜರ್‌ ಬಳಸ್ತಿದ್ರೆ ಕೂಡಲೇ ಈ ರೀತಿ ಮಾಡಿ; ವೈದ್ಯರು ಹೇಳಿದ್ದೇನು?
ಆರೋಗ್ಯಪ್ರಮುಖ

ಗ್ಯಾಸ್‌ ಗೀಜರ್‌ ಬಳಸ್ತಿದ್ರೆ ಕೂಡಲೇ ಈ ರೀತಿ ಮಾಡಿ; ವೈದ್ಯರು ಹೇಳಿದ್ದೇನು?

Share
2 Min Read
SHARE

newsics.com

ಕಡಿಮೆ ಗ್ಯಾಸ್‌ ಇದ್ದರೆ ಸಾಕು, ಬಿಸಿಬಿಸಿ ಸ್ನಾನ ಮಾಡಬಹುದಾಗಿರುವ ಕಾರಣ, ಹಲವು ಮನೆಗಳಲ್ಲಿ ಗ್ಯಾಸ್‌ ಗೀಜರ್‌ ಇಟ್ಟುಕೊಳ್ಳಲಾಗುತ್ತಿದೆ. ಆದರೆ ಗ್ಯಾಸ್‌ ಗೀಜರ್‌ನಿಂದ ಇದಾಗಲೇ ಹಲವರ ಪ್ರಾಣ ಹೋಗಿದೆ. ಇದಕ್ಕೆ ಕಾರಣ, ಕಾರ್ಬನ್ ಮಾನಾಕ್ಸೈಡ್ ಅನಿಲ. ಇದು ಅತ್ಯಂತ ವಿಷಕಾರಿಯಾಗಿದ್ದು, ಉಸಿರಾಟದ ಸಮಸ್ಯೆ ತಂದೊಡ್ಡು ಪ್ರಾಣವನ್ನೇ ತೆಗೆಯಬಲ್ಲದು.
ಹಾಗೆಂದು ಹೆದರುವ ಅಗತ್ಯವಿಲ್ಲ. ಒಂದು ವೇಳೆ ನಿಮ್ಮ ಮನೆಯಲ್ಲಿ ಗ್ಯಾಸ್‌ ಗೀಜರ್‌ ಇದ್ದರೆ, ಈ ಟಿಪ್ಸ್‌ ಫಾಲೋ ಮಾಡಿ. ವೈದ್ಯೆ ಡಾ.ರಿಚಾ ತಿವಾರಿ ಹೇಳಿರುವ ಪ್ರಕಾರ, ನೀವೇನು ಮಾಡಬಹುದು ಎನ್ನುವ ಮೊದಲು ಇದು ಏಕೆ ಅಪಾಯಕಾರಿ, ಪ್ರಾಣಕ್ಕೆ ಏಕೆ ಕುತ್ತು ಬರುತ್ತದೆ ಎನ್ನುವುದನ್ನು ಒಮ್ಮೆ ತಿಳಿದುಕೊಳ್ಳಬೇಕು. ಏಕೆಂದರೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಬಿಸಿಬಿಸಿ ನೀರಿಗಾಗಿ ಇದರ ಅಗತ್ಯ ಹೆಚ್ಚು ಕಂಡುಬರುತ್ತದೆ. ಮನೆಗಳಲ್ಲಿ ಮಾತ್ರವಲ್ಲದೇ ಹೋಟೆಲ್‌ಗಳ ಬಾತ್‌ರೂಮ್‌ನಲ್ಲಿಯೂ ಇದನ್ನು ಇಡಲಾಗುತ್ತದೆ. ಆದರೆ ಸ್ವಲ್ಪವೇ ಎಡವಟ್ಟಾದರೂ, ಜೀವಕ್ಕೇ ಅಪಾಯ ಆಗಬಹುದು. ಉಸಿರು ಕಟ್ಟುತ್ತಿರುವುದು ತಿಳಿದರೂ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಹೊರಗಡೆ ಬರಲು ಅಂಜಿ (ಅದರಲ್ಲಿಯೂ ಹೆಚ್ಚಾಗಿ ಸ್ತ್ರೀಯರು) ಸ್ನಾನದ ಮನೆಯಲ್ಲಿಯೇ ಉಸಿರುಚೆಲ್ಲುತ್ತಿದ್ದಾರೆ.
ಮೊದಲೇ ಹೇಳಿದಂತೆ ಇದಕ್ಕೆ ಗ್ಯಾಸ್‌ನಿಂದ ಹೊರ ಸೂಸುವ ವಿಷಕಾರಿ ಅನಿಲ ಕಾರಣ. ಆದ್ದರಿಂದ ನೀವು ಮಾಡಬೇಕಾದದ್ದು ಇಷ್ಟೇ. ಗ್ಯಾಸ್‌ ಇದ್ದರೆ ಅದಕ್ಕೆ ಸಾಕಷ್ಟು ಸ್ಥಳಾವಕಾಶ ಇರಬೇಕು. ಗ್ಯಾಸ್ ಇಡುವ ಕೋಣೆಯಲ್ಲಿ ಗ್ಯಾಸ್‌ ಹೊರಗೆ ಹೋಗಲು ಕಿಟಕಿ ಅಥವಾ ವೆಂಟಿಲೇಟರ್‌ ಇರಲೇಬೇಕು. ಅದ್ಯಾವುದೂ ಇಲ್ಲದಿದ್ದರೆ ವಿಷಕಾರಿ ಅಂಶವು ಬಾತ್‌ರೂಮ್‌ನಲ್ಲಿಯೇ ಸುತ್ತಾಡಿ ಉಸಿರುಕಟ್ಟಿಸುತ್ತದೆ. ಇನ್ನೊಂದು ಮುಖ್ಯ ಆಗಿರುವ ವಿಷಯ ಏನೆಂದರೆ, ಸ್ನಾನ ಮಾಡುವ ಸಮಯದಲ್ಲಿ ಗೀಸರ್‌ ಆಫ್‌ ಮಾಡಿಕೊಂಡು ಬಿಡಿ. ಎಷ್ಟು ಬೇಕೋ ಅಷ್ಟು ನೀರನ್ನು ಮೊದಲೇ ಬಿಸಿ ಮಾಡಿಕೊಂಡು ಗ್ಯಾಸ್‌ ಆಫ್‌ ಮಾಡಿ ನಂತರ ಸ್ನಾನ ಮಾಡಿ. ತಲೆ ಸ್ನಾನ ಮಾಡಲು ಹೆಚ್ಚು ಹೊತ್ತು ಬಿಸಿ ನೀರು ಬೇಕು ಎನ್ನುವ ಕಾರಣಕ್ಕೆ ಆನ್ ಮಾಡಿಟ್ಟುಕೊಳ್ಳಲೇಬೇಡಿ ಎಂದು ವೈದ್ಯೆ ಎಚ್ಚರ ನೀಡಿದ್ದಾರೆ.
ಗ್ಯಾಸ್ ಗೀಸರ್ ಬಳಸುವಾಗ ಎಕ್ಸಾಸ್ಟ್ ಫ್ಯಾನ್ ಇದ್ದರೆ ಅದನ್ನು ಆನ್‌ ಮಾಡಿಟ್ಟುಕೊಳ್ಳಿ. ಒಂದು ವೇಳೆ ಗ್ಯಾಸ್ ಗೀಸರ್‌ನಿಂದ ಮೊದಲೇ ವಾಸನೆ ಬರುತ್ತಿದ್ದರೆ ಅದನ್ನು ಬಳಸೇಬೇಡಿ. ಹೆಚ್ಚು ಮಂದಿ ಮನೆಯಲ್ಲಿ ಇದನ್ನು ಬಳಸುತ್ತಿದ್ದರೆ, ಒಬ್ಬರಾದ ಮೇಲೆ ಇನ್ನೊಬ್ಬರು ಸ್ವಿಚ್‌ ಆ‌ನ್‌ ಮಾಡುವ ಬದಲು ಸ್ವಲ್ಪ ಟೈಮ್‌ ಗ್ಯಾಪ್‌ ಕೊಡಿ. ಒಂದು ವೇಳೆ ಸ್ನಾನ ಮಾಡುವ ಸಮಯದಲ್ಲಿ ಕೆಮ್ಮು ಬಂದರೆ ಇಲ್ಲವೇ ಉಸಿರುಗಟ್ಟಿದಂತ ಕಂಡರೆ, ನೀವು ಯಾವ ಸ್ಥಿತಿಯಲ್ಲಿ ಇದ್ದರೂ ಪರವಾಗಿಲ್ಲ, ಇದು ಹೆಣ್ಣುಮಕ್ಕಳಿಗೆ ಕಷ್ಟವಾದರೂ ಸರಿ. ಕೂಡಲೇ ಬಾಗಿಲು ತೆರೆದು ಹೊರಗಡೆ ಬನ್ನಿ. ಅಲ್ಲಿಯೇ ಟವಲ್‌ ಇರುತ್ತದಲ್ಲ, ಅದನ್ನಾದರೂ ಮುಚ್ಚಿಕೊಂಡು ಬನ್ನಿ. ಆದರೆ, ಮರ್ಯಾದೆಗೆ ಅಂಜಿ ಹೊರಕ್ಕೆ ಬರದೇ ಇದ್ದರೆ ಸಾವು ಬರುವುದು ಖಂಡಿತ.

https://www.instagram.com/reel/DLmQ49aRiZU/?igsh=andjMDIzYWp1Mzl6

ಧರ್ಮಸ್ಥಳ ಪ್ರಕರಣ: 8 ಅಡಿ ಅಗೆದರೂ ಸಿಕ್ಕಿಲ್ಲ ಕಳೇಬರ

TAGGED:do this immediately: OtherwiseIf you are using a gas geyseryou risk your life - consult a doctor...
Share This Article
Facebook Twitter Copy Link Print
Previous Article ಧರ್ಮಸ್ಥಳ ಪ್ರಕರಣ: 8 ಅಡಿ ಅಗೆದರೂ ಸಿಕ್ಕಿಲ್ಲ ಕಳೇಬರ
Next Article SP ಸಂಸದೆ ಡಿಂಪಲ್‌ ಬಗ್ಗೆ ಅನುಚಿತ ಹೇಳಿಕೆ; News ರೂಂನಲ್ಲೇ Muslim ಮೌಲಾನಗೆ ಕಪಾಳಮೋಕ್ಷ, ವೈರಲ್ ವಿಡಿಯೋ ನೋಡಿ

Popular Posts

Suspected terrorist dies ಪರಪ್ಪನ ಅಗ್ರಹಾರ ಜೈಲಲ್ಲಿ ಮಡಿವಾಳ ಸ್ಫೋಟ ಆರೋಪಿ, ಶಂಕಿತ ಉಗ್ರ ಖಾದರ್ ಸಾವು

1 Min Read

12 ವರ್ಷ ಪೂರೈಸಿದ ಮೋದಿ ಸರ್ಕಾರದ ವಿಶೇಷ ಹಾಡು ಬಿಡುಗಡೆ ಮಾಡಿದ ಬಿಜೆಪಿ ಸಂಸದ ಮನೋಜ್ ತಿವಾರಿ

1 Min Read

Giant Lizard ಅಮೆರಿಕದ ನಿದ್ದೆಗೆಡಿಸಿದ 4 ಅಡಿ ಉದ್ದ, 5 ಕೆಜಿ ತೂಕದ ದೈತ್ಯ ಹಲ್ಲಿ

2 Min Read

ಹುಲಿಕಲ್ ಘಾಟ್‌ ನಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ

1 Min Read

You Might Also Like

ಕರ್ನಾಟಕದೇಶಪ್ರಮುಖ

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್

3 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕದೇಶಪ್ರಮುಖ

CM Vijay to Kollur ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ! ಅರ್ಚಕರಲ್ಲಿ ವಿಜಯ್ ಮಾಡಿದ ಆ ಒಂದು ಸ್ಪೆಷಲ್ ರಿಕ್ವೆಸ್ಟ್ ಏನು?

1 Min Read
ದೇಶಪ್ರಮುಖ

ವೃದ್ಧಾಪ್ಯಕ್ಕೆ ಬ್ರೇಕ್ ಹಾಕುವ ಪ್ರಯೋಗ ಆರಂಭ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?