Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > ನಾಗರ ಪಂಚಮಿ ಹಬ್ಬದ ಶುಭಾಶಯಗಳು… ಪೂಜೆಗೆ ಈ ಸಮಯ ಶ್ರೇಷ್ಠ, ಪೂಜಾ ವಿಧಾನ ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ
ಅನಾವರಣಕರ್ನಾಟಕದೇಶಪ್ರಮುಖ

ನಾಗರ ಪಂಚಮಿ ಹಬ್ಬದ ಶುಭಾಶಯಗಳು… ಪೂಜೆಗೆ ಈ ಸಮಯ ಶ್ರೇಷ್ಠ, ಪೂಜಾ ವಿಧಾನ ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ

Share
3 Min Read
SHARE

newsics.com

ನಾಗರ ಪಂಚಮಿ ನಾಡಿಗೆ ದೊಡ್ಡದು ಎಂಬ ಮಾತಿದೆ. ಈ ಹಬ್ಬವು ಹಿಂದೂ ಧರ್ಮದೊಂದಿಗೆ ವಿಶೇಷವಾದ ನಂಬಿಕೆಯನ್ನು ಹೊಂದಿದೆ.

ನಾಗರ ಪಂಚಮಿ ಹಬ್ಬ ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನದಂದು ಆಚರಣೆಗೊಳ್ಳುತ್ತದೆ. ಈ ದಿನ ನಾಗ ದೇವರನ್ನು ಪೂಜಿಸುವುದಕ್ಕಾಗಿ ಮತ್ತು ನಾಗರ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ಒಂದು ಉತ್ತಮ ಸಮಯವೆಂದು ಪರಿಗಣಿಸಲಾಗಿದೆ.

ನಾಗರ ಪಂಚಮಿ ದಿನದಂದು ನಾಗರ ಹಾವುಗಳನ್ನು ಪೂಜಿಸುವುದರಿಂದ ಕಾಳ ಸರ್ಪ ದೋಷ ನಿವಾರಣೆಯಾಗುವುದು. ಹಾವಿಗೆ ಸಂಬಂಧಿಸಿದ ಭಯವು ದೂರಾಗುವುದು. ಹಾವು ಕಡಿತದ ಭಯವು ನಾಶವಾಗುವುದು.

ಈ ವಿಶೇಷ ದಿನದಂದು ನಾಗ ದೇವರ ಭಕ್ತರು ನಾಗಗಳಿಗೆ ಹಾಲನ್ನು ಅರ್ಪಿಸುತ್ತಾರೆ. ಅವುಗಳನ್ನು ಪೂಜಿಸುತ್ತಾರೆ. ಸಮೃದ್ಧಿ, ಸುರಕ್ಷತೆಯನ್ನು ಬೇಡಿಕೊಳ್ಳುತ್ತಾರೆ.

ನಾಗರ ಪಂಚಮಿ ಹಬ್ಬದ ದಿನದಂದು ನಾವು ನಾಗ ದೇವರನ್ನು ಪೂಜಿಸುವುದರಿಂದ, ನಾಗ ದೇವರ ವಿಗ್ರಹಗಳಿಗೆ ಹಾಲು, ಹಣ್ಣು, ಹೂವುಗಳನ್ನು ಅರ್ಪಿಸುವುದರಿಂದ ಕಾಳ ಸರ್ಪ ದೋಷವು ಪರಿಹಾರವಾಗುವುದು ಎನ್ನುವ ನಂಬಿಕೆಯಿದೆ. ಮುಖ್ಯವಾಗಿ ನಾಗರ ಪಂಚಮಿ ಹಬ್ಬವನ್ನು ಹಾವುಗಳ ಮೇಲಿನ ಗೌರವ ಮತ್ತು ರಕ್ಷಣೆಯ ಅಂಗವಾಗಿ ಆಚರಿಸಲಾಗುವ ಹಬ್ಬವಾಗಿದೆ. ಈ ದಿನದಂದು ನಾಗ ದೇವರನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ

ಪಂಚಾಂಗದ ಪ್ರಕಾರ, ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನಾಂಕವು ಈ ಬಾರಿ 2025ರ ಜುಲೈ 28 ರಂದು ಸೋಮವಾರ ಬೆಳಗ್ಗೆ 11:24 ರಿಂದ ಪ್ರಾರಂಭವಾಗುತ್ತದೆ ಮತ್ತು ಈ ದಿನವು ಜುಲೈ 29 ರಂದು ಮಂಗಳವಾರ ಮಧ್ಯಾಹ್ನ 12:46 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯನ್ನು ಗಮನದಲ್ಲಿಟ್ಟುಕೊಂಡು, ಜುಲೈ 29, ಮಂಗಳವಾರ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ.

ನಾಗರ ಪಂಚಮಿ ಪೂಜೆಯನ್ನು ಜುಲೈ 29ರಂದು ಮುಂಜಾನೆ 5:41 ರಿಂದ ಬೆಳಗ್ಗೆ 8:23ರವರೆಗೆ ಮಾಡಬಹುದಾಗಿದೆ. ಇದನ್ನು ಪೂಜೆಗೆ ಶುಭ ಸಮಯವೆಂದು ಪರಿಗಣಿಸಲಾಗುತ್ತದೆ.

ನಾಗರ ಪಂಚಮಿ ದಿನದಂದು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಹೊಸ ಅಥವಾ ಶುದ್ಧವಾದ ಬಟ್ಟೆಯನ್ನು ಧರಿಸಬೇಕು.
ನಂತರ, ದೇವರು ಮತ್ತು ದೇವತೆಗಳ ಬಗ್ಗೆ ಧ್ಯಾನ ಮಾಡಿ. ನಂತರ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ. ಮನೆಯ ಪ್ರತಿ ಮೂಲೆಯಲ್ಲೂ ಗಂಗಾಜಲವನ್ನು ಸಿಂಪಡಿಸಿ.

ಪೂಜೆ ಮಾಡುವ ಸ್ಥಳದಲ್ಲಿ ಒಂದು ಮರದ ಹಾಸನ್ನು ಅಥವಾ ಮಣೆಯನ್ನು ಇಟ್ಟು, ಅದರ ಮೇಲೆ ಸ್ವಚ್ಛವಾದ ಬಿಳಿ ಅಥವಾ ಹಳದಿ ಬಟ್ಟೆಯನ್ನು ಹರಡಿ. ಅದರ ಮೇಲೆ ನಾಗರ ಪ್ರತಿಮೆ ಅಥವಾ ಫೋಟೋವನ್ನು ಪ್ರತಿಷ್ಠಾಪನೆ ಮಾಡಿ. ಒಂದು ವೇಳೆ ಇದು ಲಭ್ಯವಿಲ್ಲದೇ ಇದ್ದರೆ ಜೇಡಿ ಮಣ್ಣಿನಿಂದ ಮಾಡಿದ ನಾಗರ ಪ್ರತಿಮೆಯನ್ನು ಇಟ್ಟು ಪೂಜಿಸಬಹುದು.

ನಂತರ, ನಾಗದೇವತೆಗೆ ಅಕ್ಕಿ, ಕುಂಕುಮ ಮತ್ತು ಅರಿಶಿನವನ್ನು ಅರ್ಪಿಸಿ. ವಿಗ್ರಹದ ಮುಂದೆ ತುಪ್ಪ ಅಥವಾ ಎಳ್ಳೆಣ್ಣೆಯ ದೀಪವನ್ನು ಬೆಳಗಿಸಿ ವಿಧಿ – ವಿಧಾನಗಳ ಪ್ರಕಾರ ಪೂಜಿಸಿ. ಬಳಿಕ ದೇವರಿಗೆ ಆರತಿ ಮಾಡಿ, ನೈವೇದ್ಯ ಅರ್ಪಿಸಿ.

ಹೆಚ್ಚಿನ ಕಡೆಗಳಲ್ಲಿ ಈ ದಿನ ಹತ್ತಿರದ ನಾಗರ ಬನಕ್ಕೆ ಅಥವಾ ನಾಗಗಳ ದೇವಸ್ಥಾನಕ್ಕೆ ಭೇಟಿ ನೀಡಿ ಅರಿಶಿನ, ಕುಂಕುಮ, ಹಾವು, ಹಣ್ಣು, ನೈವೇದ್ಯವನ್ನು ಅರ್ಪಿಸಿ, ಗೆಜ್ಜೆ ವಸ್ತ್ರಗಳಿಂದ ನಾಗರ ಕಲ್ಲನ್ನು ಅಲಂಕರಿಸಿ, ತನುವನ್ನು ಅರ್ಪಿಸಲಾಗುತ್ತದೆ. ಈ ದಿನ ತನು ಅರ್ಪಿಸುವುದು ತುಂಬಾನೇ ಮಹತ್ವದ್ದಾಗಿದೆ. ತನು ಪೂಜೆಯನ್ನು ಮಾಡಲಾಗುತ್ತದೆ. ತನು ಪೂಜೆ ವೇಳೆ ಈ ಮಂತ್ರ ಪಠಿಸಿ.

ಸರ್ವೇ ನಾಗಃ ಪ್ರೀಯಂತಾಂ ಮೇ ಯೇ ಕೇಚಿತ್ ಪೃಥ್ವಿತಲೇ|
ಯೇ ಚ ಹೆಲಿಮರೀಚಿಸ್ಥಾ ಯೇ ಅಂತರೇ ದೇವಿ ಸಂಸ್ಥಿತಾಃ||
ಯೇ ನಾದಿಷು ಮಹಾನಾಗಾ ಯೇ ಸರಸ್ವತಿಗಾಮಿನಃ|
ಯೇ ಚ ವಾಪಿತಡ್ಗೇಷು ತೇಷು ಸರ್ವೇಷು ವೈ ನಮಃ||

– ಅನಂತಂ ವಾಸುಕೀಂ ಶೇಷ ಪದ್ಮನಾಭಂ ಚ ಕಂಬಲಂ|
ಶಡಂಕ ಪಾಲಂ ಧೃತರಾಷ್ಟ್ರಂ ತಕ್ಷಕಂ ಕಾಳಿಯಂ ತಥಾ|
ಏತಾನಿ ನವ ನಾಮಾನಿ ನಾಗಾನಾಂ ಚ ಮಹಾತ್ಮನಾಂ|
ಸಾಯಂಕಾಲೇ ಪಠೇನ್ನಿತ್ಯಂ ಪ್ರಾತಃ ಕಾಲೇ ವಿಶೇಷತಃ|
ತಸ್ಮೇ ವಿಷಭಯಂ ನಾಸ್ತಿ ಸರ್ವತ್ರ ವಿಜಯಂ ಭವೇತ್||

TAGGED:Happy Nagara Panchami festival
Share This Article
Facebook Twitter Copy Link Print
Previous Article Landslide near Kumta ಕುಮಟಾ ಬಳಿ ಮತ್ತೆ ಗುಡ್ಡ ಕುಸಿತ, ವಾಹನ ಸಂಚಾರಕ್ಕೆ ಅಡ್ಡಿ
Next Article Nivedita Gowda ನಿವೇದಿತಾ ಗೌಡ ವಿಡಿಯೋ ನೋಡಿ ಸುಸ್ತಾದ ಪಡ್ಡೆ ಹುಡುಗರು! ಹುಷಾರ್ ಕಣಮ್ಮೀ ಎಂದ ನೆಟ್ಟಿಗರು

Popular Posts

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?