newsics.com
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯವಾಗುತ್ತದೆ. ಮಳೆ ನೀರಿನ ಸಂಪರ್ಕದಿಂದಾಗಿ, ಚರ್ಮದ ಸೋಂಕು ಸಂಭವಿಸುತ್ತದೆ. ಮಳೆಯ ದಿನಗಳಲ್ಲಿ ನೀವು ಹೊರಾಂಗಣದಲ್ಲಿ ಅಥವಾ ರಸ್ತೆಯಲ್ಲಿ ನಡೆದರೆ, ಮಳೆ ನೀರಿನಿಂದ ಸೋಂಕಿನ ಅಪಾಯವು ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ಫಂಗಲ್ ಸೋಂಕಿನಿಂದ ಪಾದಗಳಲ್ಲಿ ತುರಿಕೆ, ಉರಿ, ಕೆಂಪಾಗುವುದು, ಊತ, ತೀವ್ರ ನೋವು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಳೆ ನೀರಿನಲ್ಲಿ ಹಾನಿಕಾರಕ ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳು ಇರಬಹುದು. ಇವು ನಿಮ್ಮ ಪಾದಗಳಲ್ಲಿ ಸೋಂಕನ್ನು ಉಂಟುಮಾಡುತ್ತವೆ.
ಮಳೆಗಾಲದ ದಿನಗಳಲ್ಲಿ ಹೆಚ್ಚಿನವರು ಚಪ್ಪಲಿ ಅಥವಾ ಬೂಟುಗಳನ್ನು ಧರಿಸದೆ ಮನೆಯಂಗಳದಲ್ಲಿ ಓಡಾಡುತ್ತಾರೆ. ಈ ಅಭ್ಯಾಸವನ್ನು ತಪ್ಪಿಸಬೇಕು. ವಿಶೇಷವಾಗಿ ನೀವು ಹೊರಗೆ ಹೋಗುತ್ತಿರುವಾಗ. ಮಾನ್ಸೂನ್ ಸಮಯದಲ್ಲಿ, ಕೀಟಗಳು ಪಾದಗಳಿಗೆ ಅಂಟಿಕೊಳ್ಳುತ್ತವೆ ಮತ್ತು ಸೋಂಕನ್ನು ಉಂಟುಮಾಡಬಹುದು. ಮಳೆಗಾಲದ ದಿನಗಳಲ್ಲಿ ಶೂಗಳನ್ನು ಮಾತ್ರ ಬಳಸಬೇಕು. ಶೂಗಳು ಪಾದಗಳಿಗೆ ಸಂಪೂರ್ಣ ರಕ್ಷಣೆ ನೀಡುತ್ತವೆ ಮತ್ತು ಸೋಂಕಿನ ಅಪಾಯವಿರುವುದಿಲ್ಲ.
ಮಾನ್ಸೂನ್ ಸಮಯದಲ್ಲಿ ಶಿಲೀಂಧ್ರಗಳ ಸೋಂಕನ್ನು ತಪ್ಪಿಸಲು, ಕೈ ಮತ್ತು ಕಾಲುಗಳ ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ, ನಿಯಮಿತವಾಗಿ ಕತ್ತರಿಸುತ್ತಿರಿ. ಧೂಳು ಮತ್ತು ಕೊಳಕುಗಳಿಂದ ಪಾದಗಳನ್ನು ರಕ್ಷಿಸಿ. ಮಾನ್ಸೂನ್ ಸಮಯದಲ್ಲಿ ನಿಮ್ಮ ಉಗುರುಗಳನ್ನು ಟ್ರಿಮ್ ಮಾಡುವುದನ್ನು ಮುಂದುವರಿಸಿ. ಮಳೆಗಾಲದಲ್ಲಿ ಕೃತಕ ಉಗುರುಗಳು ಮತ್ತು ಉಗುರು ಬಣ್ಣವನ್ನು ಬಳಸಬಾರದು. ನೇಲ್ ಪಾಲಿಷ್ ಉಗುರುಗಳಲ್ಲಿ ತೇವಾಂಶ ಉಳಿಯುವಂತೆ ಮಾಡುತ್ತದೆ, ಇದು ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು.
ಅರಶಿನದಲ್ಲಿ ಆಂಟಿ ಬ್ಯಾಕ್ಟಿರಿಯಾ ಗುಣ ಇರುವುದರಿಂದ ಅರಿಶಿನಕ್ಕೆ ತೆಂಗಿನೆಣ್ಣೆ ಬೆರೆಸಿ ತಯಾರಿಸಿದ ಪೇಸ್ಟ್ ಅನ್ನು ಹಿಮ್ಮಡಿಗೆ ಮತ್ತು ಬೆರಳುಗಳ ಮಧ್ಯಕ್ಕೆ ಹಚ್ಚುತ್ತಿದ್ದರೆ ಕಾಲಿನ ನಂಜು ಕಡಿಮೆಯಾಗುತ್ತದೆ.
ಮೆಹಂದಿ ಗಿಡದ ಎಲೆಗಳನ್ನು ಚೆನ್ನಾಗಿ ತೊಳೆದು ರುಬ್ಬಿ ಪೇಸ್ಟ್ ಮಾಡಿ ಕಾಲು ಬೆರಳುಗಳ ಮಧ್ಯೆ ಮತ್ತು ಪಾದದ ಸುತ್ತ ಹಚ್ಚಿಕೊಳ್ಳಿ. ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯುತ್ತ ಬಂದರೆ ಗುಣಮುಖ ಕಾಣುತ್ತದೆ.
ಅಡುಗೆ ಮನೆಯಲ್ಲಿರುವ ವಿನೆಗರ್ ಬಳಸುವುದರಿಂದ ಚರ್ಮದ ಬಹುತೇಕ ಕಾಯಿಲೆಗಳು ಗುಣಮುಖವಾಗುತ್ತವೆ. ಅದರಲ್ಲೂ ಕಾಲಿನಲ್ಲಾದ ಫಂಗಲ್ ಇನ್ಫೆಕ್ಷನ್ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಬೆಚ್ಚಗಿನ ನೀರಿನಲ್ಲಿ ವಿನೆಗರ್ ಮಿಶ್ರಣ ಮಾಡಿ ಕಾಲನ್ನು ನೆನೆಸಿಡುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ
https://www.newsics.com/2025/07/28/son-escapes-after-murdering-parents-and-sister/