newsics.com
ಚೆನ್ನೈ: ಮದುವೆ ವಿಚಾರವನ್ನು ರಿವೀಲ್ ಮಾಡಿದ ಕೆಲವೇ ಗಂಟೆಗಳಲ್ಲಿ ಖ್ಯಾತ ನಟನ ಪತ್ನಿಯೊಬ್ಬರು ತಾಯಿ ಆಗುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಖ್ಯಾತ ನಟ ಮತ್ತು ಚೆಫ್ ಆಗಿರುವ ಮಾದಂಪಟ್ಟಿ ರಂಗರಾಜ್ ಫ್ಯಾಷನ್ ಡಿಸೈನರ್ ಆಗಿರುವ ಜಾಯ್ ಕ್ರಿಜಿಲ್ಡಾ ಅವರ ಜತೆ ವಿವಾಹವಾದ ವಿಚಾರವನ್ನುಅಧಿಕೃತವಾಗಿ ಘೋಷಿಸಿದ್ದರು.
ಮದುವೆ ವಿಚಾರ ಹೇಳಿದ ಕೆಲವೇ ಗಂಟೆಗಳಲ್ಲಿ ಪ್ರೆಗ್ನೆನ್ಸಿ ಘೋಷಣೆ..!
“ಬೇಬಿ ಲೋಡಿಂಗ್ 2025. ನಾನೀಗ 6 ತಿಂಗಳ ಗರ್ಭಿಣಿ” ಎಂದು ಜಾಯ್ ಕ್ರಿಜಿಲ್ಲಾ ಬರೆದುಕೊಂಡಿದ್ದಾರೆ. ಈ ವಿಚಾರ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
ಮಾದಂಪಟ್ಟಿ ಅವರಿಗ ಇದು ಎರಡನೇ ಮದುವೆಯಾಗಿದ್ದು, ಈಗಾಗಲೇ ಮೊದಲ ಪತ್ನಿಯಿಂದ ಅವರಿಗೆ ಎರಡು ಮಕ್ಕಳಿದ್ದಾರೆ.
ಮಾಧಂಪಟ್ಟಿ ರಂಗರಾಜ್ ಅವರ ಮೊದಲ ಪತ್ನಿ ಶ್ರುತಿ ರಂಗರಾಜ್ ವಕೀಲೆ ಆಗಿದ್ದಾರೆ. ವಕೀಲೆ ಕೆಲವು ವಾರಗಳ ಹಿಂದಿನವರೆಗೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು, ತಮ್ಮ ಪುತ್ರರೊಂದಿಗೆ ಚಿತ್ರಗಳನ್ನು ಸಹ ಪೋಸ್ಟ್ ಮಾಡುತ್ತಿದ್ದರು. ಈಗಲೂ ಶ್ರುತಿ ಮಾಧಂಪಟ್ಟಿ ರಂಗರಾಜ್ ಪತಿ ಎಂದೇ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ.
ಇಬ್ಬರು ವಿಚ್ಛೇದನ ಪಡೆದಿರುವ ಬಗ್ಗೆ ಎಲ್ಲೂ ಮಾಹಿತಿ ಹೊರಬಿದ್ದಿಲ್ಲ. ರಂಗರಾಜ್ ಅವರ ಮೊದಲ ಪತ್ನಿ ಇದುವರೆಗೂ ಈ ಬಗ್ಗೆ ಯಾವುದೇ ರಿಯಾಕ್ಷನ್ ನೀಡಿಲ್ಲ. ಮಾಧಂಪಟ್ಟಿ ರಂಗರಾಜ್ ಕಾಲಿವುಡ್ ನಟ ಆಗಿದ್ದಾರೆ. ಇದರ ಜತೆ ಖ್ಯಾತ ಬಾಣಸಿಗ ಆಗಿಯೂ ಗುರುತಿಸಿಕೊಂಡಿದ್ದಾರೆ.