Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Microsoft ಈ ಕಂಪನಿ ಮನುಷ್ಯರ ಮಲ, ಮೂತ್ರ ಖರೀದಿಸುತ್ತಿದೆ; ಯಾಕೆ?
ದೇಶಪ್ರಮುಖ

Microsoft ಈ ಕಂಪನಿ ಮನುಷ್ಯರ ಮಲ, ಮೂತ್ರ ಖರೀದಿಸುತ್ತಿದೆ; ಯಾಕೆ?

Share
1 Min Read
SHARE

newsics.com

ನವದೆಹಲಿ: ಮನುಷ್ಯರ ಮಲ ಮೂತ್ರ ತ್ಯಾಜ್ಯಗಳನ್ನು ಹಣ ಕೊಟ್ಟು ಜಾಗತಿಕ ಟೆಕ್ ಕಂಪನಿ ಮೈಕ್ರೋಸಾಫ್ಟ್ ಖರೀದಿಸುತ್ತಿದೆ. ಒಂದು ಟನ್ ತ್ಯಾಜ್ಯವನ್ನು 350 ಡಾಲರ್, ಅಂದರೆ ಸುಮಾರು 30,000 ರುಪಾಯಿಗೆ ಖರೀದಿ ಮಾಡುತ್ತಿದೆ.

‘ವೋಲ್ಟೆಡ್ ಡೀಪ್’ ಎನ್ನುವ ಕಂಪನಿ ಜೊತೆ 12 ವರ್ಷಕ್ಕೆ ಡೀಲ್ ಮಾಡಿಕೊಂಡಿದೆ. ಒಟ್ಟು 4.9 ಎಂಎಂಟಿ ಸಾವಯವ ತ್ಯಾಜ್ಯವನ್ನು ಪಡೆಯುತ್ತಿದೆ. ಇದಕ್ಕಾಗಿ ಅದು ಒಟ್ಟು 1.7 ಬಿಲಿಯನ್ ಡಾಲರ್ ಅಥವಾ 14-15 ಸಾವಿರ ಕೋಟಿ ರೂ ವ್ಯಯಿಸಲಿದೆ. ಸಾಫ್ಟ್ವೇರ್ ಕಂಪನಿಯಾದ ಮೈಕ್ರೋಸಾಫ್ಟ್ ಗೋಬರ್ ಗ್ಯಾಸ್ ಬ್ಯುನಿನೆಸ್ಗೆ ಇಳಿದಿದೆಯಾ ಎಂದು ಅನುಮಾನ ಬರಬಹುದು. ಆದರೆ, ತ್ಯಾಜ್ಯ ಖರೀದಿಸುವ ಹಿಂದಿನ ಉದ್ದೇಶ ಬೇರೆ ಇದೆ.

ಮೈಕ್ರೋಸಾಫ್ಟ್ ಸಂಸ್ಥೆಯ ಎಐ ಚಟುವಟಿಕೆಗಳಿಂದ ಸಾಕಷ್ಟು ಇಂಗಾಲ ಅನಿಲವು ವಾತಾವರಣವನ್ನು ಸೇರುತ್ತಿದೆ. 2020ರಿಂದ 2024ರ ಅವಧಿಯಲ್ಲಿ ಕಂಪನಿಯು 75.5 ಮಿಲಿಯನ್ ಟನ್ ಕಾರ್ಬನ್ ಎಮಿಷನ್ಗೆ ಕಾರಣವಾಗಿದೆ. ಜಾಗತಿಕ ಪರಿಸರ ನಿಯಮಾವಳಿಗಳ ಪ್ರಕಾರ ಕಂಪನಿಗಳು ವಾಯು ಮಾಲಿನ್ಯ ಹೊರ ಹಾಕಿದಷ್ಟೂ ಮಾಲಿನ್ಯ ನಿವಾರಣೆಯ ಕಾರ್ಯವನ್ನೂ ಮಾಡಬೇಕು. ಅಂತೆಯೇ, ಮೈಕ್ರೋಸಾಫ್ಟ್ ಸಂಸ್ಥೆ 2030ರಷ್ಟರಲ್ಲಿ ಕಾರ್ಬನ್ ನೆಗಟಿವ್ ಆಗುವ ಗುರಿ ಹೊಂದಿದೆ. ಆ ನಿಟ್ಟಿನಲ್ಲಿ ವೋಲ್ಟೆಡ್ ಡೀಪ್ ಕಂಪನಿಯನ್ನು ಕೈಜೋಡಿಸಿಕೊಂಡಿದೆ.

ವಾಲ್ಟೆಡ್ ಡೀಪ್ ಕಂಪನಿಯು ಮರುಬಳಕೆ ಮಾಡಲು ಕಷ್ಟಸಾಧ್ಯವಂತಹ ಜೈವಿಕ ತ್ಯಾಜ್ಯವನ್ನು ಸಂಗ್ರಹಿಸಿ, ಭೂಮಿಯಿಂದ 5,000 ಅಡಿ ಕೆಳಗೆ ಪೈಪ್ ಮೂಲಕ ತಳ್ಳುತ್ತದೆ. ಆಗ ಈ ಬಯೋವರ್ಜಕಗಳು ಡೀಕಾಂಪೋಸ್ ಆಗುವ ಪ್ರಕ್ರಿಯೆ ನಿಲ್ಲುತ್ತದೆ. ಇದರಿಂದ ಮೀಥೇನ್ ಹಾಗೂ ಕಾರ್ಬನ್ ಡೈ ಆಕ್ಸೈಡ್ ವಾತಾವರಣಕ್ಕೆ ಬಿಡುಗಡೆ ಆಗದಂತೆ ನಿಯಂತ್ರಣವಾಗುತ್ತದೆ. ಈ ಮೂಲಕ ಪರಿಸರ ಮಾಲಿನ್ಯ ನಿಯಂತ್ರ ಸಾಧ್ಯವಾಗುತ್ತದೆ.

ಮೈಕ್ರೋಸಾಫ್ಟ್ ಇತ್ಯಾದಿ ಆಧುನಿಕ ಟೆಕ್ ಕಂಪನಿಗಳು ಕಾರ್ಯನಿರ್ವಹಿಸಬೇಕಾದರೆ ಪರಿಸರ ಮಾಲಿನ್ಯವಾಗುವಂತಹ ಪ್ರಕ್ರಿಯೆಗಳು ಅನಿವಾರ್ಯ. ಅಲ್ಲಿ ತುಂಬಿದ ಪಾಪವನ್ನು ಬೇರೆಡೆ ನಿವಾರಿಸುವ ಕೆಲಸವನ್ನು ಅನೇಕ ಕಂಪನಿಗಳು ಮಾಡುತ್ತವೆ. ಅದಕ್ಕಾಗೆಂದೇ ಕಾರ್ಬನ್ ಕ್ರೆಡಿಟ್ ವ್ಯವಸ್ಥೆ ಇದೆ. ಪರಿಸರಸ್ನೇಹಿ ಕಾರ್ಯಗಳಿಗೆ ಹಣ ವಿನಿಯೋಗಿಸಿ ಕಾರ್ಬನ್ ಕ್ರೆಡಿಟ್ ಸಂಪಾದಿಸಬಹುದು.

ಕೊಡಗಿನಲ್ಲಿ ಮಳೆ ಆರ್ಭಟ: 60ಕ್ಕೂ ಹೆಚ್ಚು ಕುಟುಂಬಗಳು ತತ್ತರ

TAGGED:000 per tonMicrosoft: This company is buying human feces and urine; Rs 30
Share This Article
Facebook Twitter Copy Link Print
Previous Article ಕೊಡಗಿನಲ್ಲಿ ಮಳೆ ಆರ್ಭಟ: 60ಕ್ಕೂ ಹೆಚ್ಚು ಕುಟುಂಬಗಳು ತತ್ತರ
Next Article ನೆಪ್ಚೂನ್ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಚಿತ್ರ ವಸ್ತು ಪತ್ತೆ

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?