Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ಆನೆ ದಾಳಿಗೆ ಬಹುಕೋಟಿ ಕಂಪನಿ ಒಡೆಯ ಬಲಿ
ವಿದೇಶವೈರಲ್

ಆನೆ ದಾಳಿಗೆ ಬಹುಕೋಟಿ ಕಂಪನಿ ಒಡೆಯ ಬಲಿ

Share
2 Min Read
SHARE

newsics.com

ದಕ್ಷಿಣ ಆಫ್ರಿಕಾ; ಗೋಂಡ್ವಾನ ಖಾಸಗಿ ಗೇಮ್ ರಿಸರ್ವ್‌ನ ಮಾಲೀಕನನ್ನು ಆನೆಯೊಂದು ತುಳಿದು ಸಾಯಿಸಿ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

39 ವರ್ಷದ ಬಹುಕೋಟ್ಯಾಧಿಪತಿ ಫ್ರಾಂಕೋಯಿಸ್ ಕ್ರಿಶ್ಟಿಯಾನ್ ಕಾರ್ನಾಡಿ ಎಂಬುವವರು ತಮ್ಮದೇ ಗೇಮ್ ರಿಸರ್ವ್‌ನಲ್ಲಿ ಆನೆ ದಾಳಿಗೆ ಬಲಿಯಾಗಿದ್ದಾರೆ. ಪ್ರವಾಸಿಗರಿದ್ದ ಲಾಡ್ಜ್‌ಗಳ ಬಳಿಯಿಂದ ಆನೆಗಳನ್ನು ಬೇರೆಡೆ ಸಾಗುವುದಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾಗ ಆನೆಯೊಂದು ಕೋಪಗೊಂಡು ಈತನನ್ನು ತುಳಿದು ಸಾಯಿಸಿದೆ.

ವರದಿಗಳ ಪ್ರಕಾರ ಫ್ರಾಂಕೋಯಿಸ್ ಅವರನ್ನು ನೆಲಕ್ಕೆ ಕೆಡವಿದ ಆನೆ ಬಳಿಕ ಹಲವು ಬರೀ ತುಳಿದು ಸಾಯಿಸಿ ಬಿಟ್ಟಿದೆ. ಫ್ರಾಂಕೋಯಿಸ್ ಅವರನ್ನು ಬದುಕಿಸಲು ಅಲ್ಲೇ ಇದ್ದ ರೇಂಜರ್ಸ್‌ಗಳ ಪ್ರಯತ್ನಪಟ್ಟರು, ಉಗ್ರರೂಪಿ ಆನೆಯ ಮುಂದೆ ಅವರ ಪ್ರಯತ್ನವೆಲ್ಲಾ ಧೂಳೀಪಟವಾಗಿದೆ.

ಫ್ರಾಂಕೋಯಿಸ್ ಅವರನ್ನು ಆನೆಗಳು ತಿವಿದು, ಪೊದೆಯೊಳಗೆ ಎಳೆದುಕೊಂಡು ಹೋಗಿ, ದೇಹದ ಅಂಗಾಂಗಗಳನ್ನು ತುಂಡು ಮಾಡಿವೆ. ಈ ದಾಳಿ ವೇಲೆ ಬೋನಿ ಎಂಬ ಮಾಜಿ ಸರ್ಕಸ್ ಆನೆಯೂ ಇತ್ತು ಎಂದು ವರದಿಯಾಗಿದೆ.

ಫ್ರಾಂಕೋಯಿಸ್ ಅವರು ಸೈಲಿಕ್ಸ್ ಗ್ರೂಪ್ ಸ್ಪೋರ್ಟ್ಸ್‌ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮಾಲೀಕರು ಕೂಡ ಆಗಿದ್ದರು. ಅವರಿಗೆ ಆನೆಗಳು ಹಾಗೂ ಪರಿಸರ ಬಗ್ಗೆ ಅತೀವವಾದ ಆಸಕ್ತಿ ಇತ್ತು. ಅವುಗಳ ಫೋಟೊಗಳನ್ನು ತೆಗೆಯುವುದಕ್ಕಾಗಿ ಅವರು ಆಗಾಗ ಅವುಗಳ ಬಳಿ ಹೋಗುತ್ತಿದ್ದರು. ಜೀವಶಾಸ್ತ್ರದಲ್ಲಿ ಅವರು ಡಿಗ್ರಿ ಪಡೆದಿದ್ದು, ಪ್ರಾಣಿಗಳ ಅಧ್ಯಯನ, ಕಾಮರ್ಸ್ ಹಾಗೂ ಮಾರ್ಕೆಟಿಂಗ್‌ನಲ್ಲಿಯೂ ಅವರು ತರಬೇತಿ ಪರಿಣಿತರಾಗಿದ್ದರು. ಮಹತ್ವಾಕಾಂಕ್ಷಿ ಉದ್ಯಮಿಯಾಗಿದ್ದ ಅವರು ಪರಿಸರ ಬಗ್ಗೆ ಅತೀವವಾದ ಆಸಕ್ತಿಯನ್ನು ಹೊಂದಿದ್ದರು ಎಂದು ಅವರ ಸಂಸ್ಥೆಯ ಸಿಬ್ಬಂದಿ ಹೇಳಿಕೊಂಡಿದ್ದಾರೆ.

ಫ್ರಾಂಕೋಯಿಸ್ ಅವರ ಹಠಾತ್ ಸಾವಿನಿಂದ ಅವರ ಸಂಸ್ಥೆಯ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಆಘಾತಗೊಂಡಿದ್ದಾರೆ. ಫ್ರಾಂಕೋಯಿಸ್ ಅವರು ಓರ್ವ ನಾಯಕನಿಗಿಂತ ಹೆಚ್ಚಾಗಿ ಅವರೊಬ್ಬ ಮೆಂಟರ್ ಆಗಿದ್ದರು. ಅವರ ಈ ಹಠಾತ್ ಸಾವು ಆಘಾತ ನೀಡಿದೆ ಮೂವರು ಮಕ್ಕಳ ತಂದೆ ಹಾಗೂ ಪತ್ನಿಗೆ ಒಳ್ಳೆಯ ಗಂಡನಾಗಿದ್ದ ಅವರು ಒಬ್ಬ ಅತ್ಯುತ್ತಮ ವ್ಯಕ್ತಿಯಾಗಿದ್ದರು ಎಂದು ಅವರ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ದಕ್ಷಿಣ ಆಫ್ರಿಕಾದ ಪ್ರಸಿದ್ಧ ಗಾರ್ಡನ್ ರೂಟ್‌ನಲ್ಲಿರುವ ಮಾಸೆಲ್ ಕೊಲ್ಲಿಯ ಬಳಿಯಿರುವ ಐಷಾರಾಮಿ ಪಂಚತಾರಾ ಸಫಾರಿ ಲಾಡ್ಜ್ ಆದ ಗೊಂಡ್ವಾನಾ ಪ್ರೈವೇಟ್ ಗೇಮ್ ರಿಸರ್ವ್, ಬಿಗ್ ಫೈವ್ ಅನುಭವಗಳನ್ನು ಬಯಸುವ ಸೆಲೆಬ್ರಿಟಿಗಳು ಮತ್ತು ಪ್ರವಾಸಿಗರಿಗೆ ಜನಪ್ರಿಯ ತಾಣವಾಗಿದೆ. ಇಲ್ಲಿ ಪ್ರತಿ ಜೋಡಿಯಿಂದ ಪ್ರತಿ ರಾತ್ರಿಗೆ ಸುಮಾರು 900 ಪೌಂಡ್‌ ದರ ಪಡೆಯಲಾಗುತ್ತದೆ. ಈ ಘಟನೆ ನಡೆದ ಸಂದರ್ಭದಲ್ಲಿ ಈ ಗೊಂಡ್ವಾನಾ ರಿಸರ್ವ್ ಸಂಪೂರ್ಣವಾಗಿ ಬುಕ್ ಆಗಿತ್ತು ಎಂದು ತಿಳಿದು ಬಂದಿದೆ.

ಅಂದಹಾಗೆ ಈ ಘಟನೆಯೂ ಇದೇ ಮೊದಲಲ್ಲ, ಇದು ಕೇವಲ ಒಂದು ವರ್ಷದಲ್ಲಿ ಇಲ್ಲಿ ನಡೆದ ಎರಡನೇ ಮಾರಕ ಆನೆ ದಾಳಿಯಾಗಿದೆ. ಮಾರ್ಚ್ ಇದಕ್ಕೂ ಮೊದಲು 36 ವರ್ಷದ ಸಿಬ್ಬಂದಿ ಸದಸ್ಯ ಡೇವಿಡ್ ಕಾಂಡೇಲಾ ಎಂಬುವವರು ಇಕೋ ಟೆಂಟ್ ಲಾಡ್ಜ್ ಪ್ರದೇಶದ ಮೂಲಕ ಆನೆ ಹಿಂಡನ್ನು ಮುನ್ನಡೆಸುತ್ತಿದ್ದಾಗ ಆನೆ ದಾಳಿಗೆ ಬಲಿಯಾಗಿದ್ದರು.

TAGGED:Multi-crore company owner killed in elephant attack
Share This Article
Facebook Twitter Copy Link Print
Previous Article ವಿಮಾನದ ಮೂಲಕ ಜಪಾನ್‌ಗೆ ಹೊರಟ 4 ಬನ್ನೇರುಘಟ್ಟದ ಆನೆಗಳು
Next Article ಆಕ್ಷೇಪಾರ್ಹ ಜಾಹೀರಾತುಗಳನ್ನು ಪ್ರದರ್ಶಿಸುತ್ತಿರುವ ಅಪ್ಲಿಕೇಶನ್ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ

Popular Posts

Flood ಮೇಘಸ್ಫೋಟಕ್ಕೆ ಭೀಕರ ಪ್ರವಾಹ; ಒಂದೇ ದಿನ 21 ಬಲಿ, ಸಂಕಷ್ಟದಲ್ಲಿ 5.64 ಲಕ್ಷ ಜನ

2 Min Read

BP Harish ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮೊಟ್ಟೆ ಏಟು

1 Min Read

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

You Might Also Like

ದೇಶವೈರಲ್

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read
ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ವಿದೇಶ

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read
ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?