Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ವಿಮಾನದ ಮೂಲಕ ಜಪಾನ್‌ಗೆ ಹೊರಟ 4 ಬನ್ನೇರುಘಟ್ಟದ ಆನೆಗಳು
ಕರ್ನಾಟಕವಿದೇಶ

ವಿಮಾನದ ಮೂಲಕ ಜಪಾನ್‌ಗೆ ಹೊರಟ 4 ಬನ್ನೇರುಘಟ್ಟದ ಆನೆಗಳು

Share
3 Min Read
SHARE

newsics.com

ಬೆಂಗಳೂರು: ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಬನ್ನೇರುಘಟ್ಟ ಜೈವಿಕ ಉದ್ಯಾನದ ನಾಲ್ಕು ಆನೆಗಳನ್ನು ವಿಮಾನದ ಮೂಲಕ ಜಪಾನ್‌ಗೆ ಕಳುಹಿಸಿಕೊಡಲಾಯಿತು.

”ಬನ್ನೇರುಘಟ್ಟ ಉದ್ಯಾನವು ಜಪಾನ್‌ನ ಹಿಮೇಜಿ ಸೆಂಟ್ರಲ್‌ ಪಾರ್ಕ್ನೊಂದಿಗೆ ಪ್ರಾಣಿ ವಿನಿಮಯ ಒಪ್ಪಂದ ಮಾಡಿಕೊಂಡಿದೆ.
ಸುರೇಶ್‌ (8 ವರ್ಷ), ಗೌರಿ (9 ವರ್ಷ), ಶ್ರುತಿ (7 ವರ್ಷ) ಮತ್ತು ತುಳಸಿ (5 ವರ್ಷ) ಎಂಬ ಆನೆಗಳನ್ನು ಜಪಾನ್‌ನ ಹಿಮೇಜಿ ಸೆಂಟ್ರಲ್‌ ಪಾರ್ಕ್ಗೆ ಕೊಡಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಹಿಮೇಜಿ ಸೆಂಟ್ರಲ್‌ ಪಾರ್ಕ್ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತಲಾ ನಾಲ್ಕು ಚಿರತೆಗಳು, ಜಾಗ್ವಾರ್‌ಗಳು, ಪೂಮಾಗಳು, ಮೂರು ಚಿಂಪಾಂಜಿಗಳು ಮತ್ತು ಎಂಟು ಕ್ಯಾಪುಚಿನ್‌ ಕೋತಿಗಳನ್ನು ಹಸ್ತಾಂತರಿಸಲಿದೆ,” ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ಅಧಿಕಾರಿ ವಿಶಾಲ್‌ ಸೂರ್ಯ ಸೇನ್‌ ತಿಳಿಸಿದ್ದಾರೆ.

ಒಟ್ಟು 20 ಗಂಟೆ ಪ್ರಯಾಣ :

ಆನೆಗಳನ್ನು ಕ್ರಾಲ್‌ನಲ್ಲಿ ಇರಿಸಿ ಲಾರಿಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿಸಲಾಯಿತು. ರಾತ್ರಿ 8 ಗಂಟೆ ಸುಮಾರಿಗೆ ಕತಾರ್‌ ಏರ್‌ವೇಸ್‌ನ ಸರಕು ಸಾಗಣೆ ವಿಮಾನದಲ್ಲಿಆನೆಗಳನ್ನು ಕೊಂಡೊಯ್ಯಲಾಯಿತು. ವಿಮಾನದಲ್ಲಿ 8 ಗಂಟೆ ಪ್ರಯಾಣ ಬೆಳೆಸಿ ಆನೆಗಳು ಜಪಾನ್‌ನ ಒಸಾಕಾದ ಕನ್ಸಾಯ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿವೆ. ಅಲ್ಲಿಂದ ಹಿಮೇಜಿ ಸೆಂಟ್ರಲ್‌ ಪಾರ್ಕ್ಗೆ ರಸ್ತೆ ಮಾರ್ಗದಲ್ಲಿ ತಲುಪಲಿವೆ. ಒಟ್ಟಾರೆ 20 ಗಂಟೆಗಳ ಕಾಲ ಪ್ರಯಾಣದ ಮೂಲಕ ಆನೆಗಳನ್ನು ತಲುಪಿಸುವ ಗುರಿ ಹೊಂದಲಾಗಿದೆ.

ಆರು ತಿಂಗಳಿಂದ ತರಬೇತಿ:

ಹಿಮೇಜಿ ಸೆಂಟ್ರಲ್‌ ಪಾರ್ಕ್ನ ಇಬ್ಬರು ಪಶುವೈದ್ಯರು ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನದ ಇಬ್ಬರು ಪಶು ವೈದ್ಯಕೀಯ ಅಧಿಧಿಕಾರಿಗಳು, ನಾಲ್ವರು ಪಾಲಕರು, ಒಬ್ಬ ಮೇಲ್ವಿಚಾರಕ ಮತ್ತು ಒಬ್ಬರು ಜೀವಶಾಸ್ತ್ರಜ್ಞೆ ಸೇರಿದಂತೆ ಒಟ್ಟು ಎಂಟು ಮಂದಿ ಆನೆಗಳೊಂದಿಗೆ ಪ್ರಯಾಣ ಬೆಳೆಸಿದ್ದಾರೆ. ಬನ್ನೇರುಘಟ್ಟದ ತಂಡವು ಎರಡು ವಾರಗಳ ಕಾಲ ಹಿಮೇಜಿ ಸೆಂಟ್ರಲ್‌ ಪಾರ್ಕ್ನಲ್ಲಿತಂಗಿ, ಆನೆಗಳು ಹೊಸ ಪರಿಸರಕ್ಕೆ ಹೊಂದಿಕೊಳ್ಳುವಂತೆ ತರಬೇತಿ ನೀಡಲಿದೆ.

ಸುದೀರ್ಘ ಅವಧಿಯ ಪ್ರಯಾಣ ಅಗತ್ಯವಿರುವುದರಿಂದ ಕಳೆದ ಆರು ತಿಂಗಳಿಂದ ಆನೆಗಳಿಗೆ ತರಬೇತಿ ನೀಡಲಾಗಿತ್ತು. ಹಿಮೇಜಿ ಸೆಂಟ್ರಲ್‌ ಪಾರ್ಕ್ನಿಂದ ಆಗಮಿಸಿದ್ದ ಆನೆ ಪಾಲಕರು ಕೂಡ ಮೇ 12 ರಿಂದ 25ರವರೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿತರಬೇತಿ ಪಡೆದಿದ್ದರು. ಹಿಂದಿ ಭಾಷೆಗೆ ಹೊಂದಿಕೊಂಡಿದ್ದ ಆನೆಗಳಿಗೆ ಇಂಗ್ಲಿಷ್‌ ಭಾಷಾ ಸಂವಹನದ ಮೂಲಕ ತರಬೇತಿ ನೀಡಿ ಪಳಗಿಸಲಾಗಿದೆ.

ಕ್ರಾಲ್‌ಗಳಲ್ಲಿ ಇರಿಸಿಯೇ ಸರಕು ಸಾಗಣೆ ವಿಮಾನದಲ್ಲ ಆನೆಗಳನ್ನು ಸಾಗಿಸಲಾಗುತ್ತದೆ. ವಿಮಾನ ಪ್ರಯಾಣ ಆರಂಭವಾಗುವವರೆಗೂ ಆನೆಗಳಿಗೆ ಆಹಾರ ಕೊಡಲು ಅವಕಾಶವಿದೆ. ಅನ್ನ, ಪೊಂಗಲ್‌, ಹಣ್ಣು ಕೊಟ್ಟಿದ್ದೇವೆ. ವಿಮಾನ ಪ್ರಯಾಣದ 8 ಗಂಟೆ ಅವಧಿಯಲ್ಲಿ ಯಾವುದೇ ಆಹಾರ ಕೊಡಲಾಗುವುದಿಲ್ಲ ಎಂದು ಆನೆ ಮೇಲ್ವಿಚಾರಕ ಸುರೇಶ್‌ ತಿಳಿಸಿದ್ದಾರೆ.
ಮೈಸೂರಿನಿಂದಲೂ ಕಳುಹಿಸಲಾಗಿತ್ತು

2021ರಲ್ಲಿ ಮೈಸೂರು ಮೃಗಾಲಯದಿಂದ ಜಪಾನ್‌ನ ಟೊಯೊಹಾಶಿ ಮೃಗಾಲಯಕ್ಕೆ ಮೂರು ಆನೆಗಳನ್ನು ಕಳುಹಿಸಲಾಗಿತ್ತು. ಎರಡನೇ ಬ್ಯಾಚ್‌ನಲ್ಲಿ ಆನೆಗಳನ್ನು ಈಗ ಕಳುಹಿಸಿಕೊಡಲಾಗುತ್ತಿದೆ.

ಬನ್ನೇರುಘಟ್ಟಕ್ಕೆ ಬರಲಿವೆ ಕ್ಯಾಪುಚಿನ್‌ ಕೋತಿ, ಪೂಮಾ

ಪ್ರಾಣಿ ವಿನಿಮಯ ಯೋಜನೆಯಡಿ ಪೂಮಾ (ಬೆಕ್ಕಿನ ಜಾತಿಯ ಪ್ರಾಣಿ, ಮೌಂಟೇನ್‌ ಲಯನ್‌) ಬನ್ನೇರುಘಟ್ಟ ಉದ್ಯಾನಕ್ಕೆ ಬರಲಿದ್ದು, ಹೊಸ ಆಕರ್ಷಣೆಯಾಗಲಿವೆ.

ಉತ್ತರ ಮತ್ತು ದಕ್ಷಿಣ ಅಮೆರಿಕದ ಬೆಟ್ಟಗಳಲ್ಲಿ ಹೆಚ್ಚಾಗಿ ಕಾಣಸಿಗುವ ಪೂಮಾ ಅಳವಿನಂಚಿನಲ್ಲಿರುವ ಪ್ರಾಣಿಯಾಗಿದೆ. ಸಾಮಾನ್ಯವಾಗಿ ಬೆಕ್ಕುಗಳಿಗಿಂತ ದೊಡ್ಡ ಗಾತ್ರದಲ್ಲಿ ಹುಲಿ, ಸಿಂಹಗಳಿಗಿಂತ ಚಿಕ್ಕ ಗಾತ್ರ ಹೊಂದಿರುತ್ತದೆ. ಪೂಮಾ ರಾಜ್ಯದ ಯಾವ ಮೃಗಾಲಯದಲ್ಲೂ ಇಲ್ಲ. ಅಮೆರಿಕ, ಅರ್ಜೆಂಟೀನಾದಲ್ಲಿ ಕಾಣಸಿಗುವ ಕ್ಯಾಪುಚಿನ್‌ ಕೋತಿಗಳು ಬುದ್ಧಿವಂತಿಕೆಗೆ ಹೆಸರಾಗಿವೆ.

”ಪ್ರಾಣಿ ವಿನಿಮಯ ಯೋಜನೆಯಡಿ ಪೂಮಾ, ಕ್ಯಾಪುಚಿನ್‌ ಕೋತಿ ಸೇರಿದಂತೆ ಇತರೆ ಪ್ರಾಣಿಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕರೆ ತರಲು ಸಿದ್ಧತೆ ನಡೆಸಲಾಗಿದೆ. ಅಕ್ಟೋಬರ್‌, ನವೆಂಬರ್‌ ವೇಳೆಗೆ ಎಂಟು ಕ್ಯಾಪುಚಿನ್‌ ಕೋತಿಗಳನ್ನು ಕರೆತರಲಾಗುವುದು,” ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಅಧಿಧಿಕಾರಿಗಳು ತಿಳಿಸಿದ್ದಾರೆ.

ದೇವಸ್ಥಾನಕ್ಕಾಗಿ ಥೈಲ್ಯಾಂಡ್- ಕಾಂಬೋಡಿಯಾ ನಡುವೆ ಯುದ್ಧ?; ಸಂಘರ್ಷ ಮತ್ತೆ ಪ್ರಾರಂಭವಾಗಿದ್ದು ಹೇಗೆ?

TAGGED:4 elephants from Bannerghatta leave for Japan by plane
Share This Article
Facebook Twitter Copy Link Print
Previous Article ದೇವಸ್ಥಾನಕ್ಕಾಗಿ ಥೈಲ್ಯಾಂಡ್- ಕಾಂಬೋಡಿಯಾ ನಡುವೆ ಯುದ್ಧ?; ಸಂಘರ್ಷ ಮತ್ತೆ ಪ್ರಾರಂಭವಾಗಿದ್ದು ಹೇಗೆ?
Next Article ಆನೆ ದಾಳಿಗೆ ಬಹುಕೋಟಿ ಕಂಪನಿ ಒಡೆಯ ಬಲಿ

Popular Posts

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

You Might Also Like

Crimeಕರ್ನಾಟಕ

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read
ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ವಿದೇಶ

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read
ಕರ್ನಾಟಕಪ್ರಮುಖ

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Social Networks

Facebook-f Instagram Twitter
Welcome Back!

Sign in to your account

Lost your password?