newsics.com
ಹೊಸದಿಲ್ಲಿ: ಖ್ಯಾತ ಉದ್ಯಮಿ, ದಿವಂಗತ ಸುಂಜಯ್ ಕಪೂರ್ ಅವರ ಸಾವಿನ ಬೆನ್ನಲ್ಲೇ ಅವರ ಕುಟುಂಬದಲ್ಲಿ ಸೋನಾ ಕಾಮ್ಸ್ಟಾರ್’ ಕಂಪನಿಯಲ್ಲಿ ಅಧಿಕಾರಕ್ಕಾಗಿ ಪೈಪೋಟಿ ನಡೆಯುತ್ತಿದೆ.
ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಅವರ ಮಾಜಿ ಪತಿ, ಬಿಲಿಯನೇರ್ ಉದ್ಯಮಿ ಸಂಜಯ್ ಕಪೂರ್ ಲಂಡನ್ನಲ್ಲಿ ಪೋಲೋ ಆಡುತ್ತಿದ್ದಾಗಲೇ ನಿಧನರಾಗಿದ್ದರು
ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ ಅವರ ಮರಣದ ನಂತರ, ಅವರ ಆಸ್ತಿಯ ಬಗ್ಗೆ ವಿವಾದ ಪ್ರಾರಂಭವಾಗಿದೆ. ಸಂಜಯ್ ಅವರ ಮರಣದ ಒಂದು ತಿಂಗಳ ನಂತರ, ಅವರ ತಾಯಿ ರಾಣಿ ಕಪೂರ್ ಅವರು ಸೋನಾ ಕಾಮ್ಸ್ಟಾರ್ ಕಂಪನಿ ಮತ್ತು ಸೆಬಿಗೆ ಪತ್ರ ಬರೆದಿದ್ದಾರೆ.
ನನ್ನ ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದಾಗ, ಮುಚ್ಚಿದ ಬಾಗಿಲುಗಳ ಹಿಂದೆ ನನ್ನಿಂದ ಬಲವಂತವಾಗಿ ದಾಖಲೆಗಳಿಗೆ ಸಹಿ ಹಾಕಿಸಿಕೊಳ್ಳಲಾಗಿದೆ,” ಎಂದು ದೂರಿದ್ದಾರೆ. ಈ ಸಂಬಂಧ ಆಡಳಿತ ಮಂಡಳಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಜೂನ್ನಲ್ಲಿ ಇಂಗ್ಲೆಂಡ್ನಲ್ಲಿ ನಿಧನರಾದ ತಮ್ಮ ಮಗನ ಅಗಲಿಕೆಯ ನೋವಿನಲ್ಲಿರುವಾಗಲೇ, ತಮಗೆ ಯಾವುದೇ ವಿವರ ನೀಡದೆ ವಿವಿಧ ಕಾಗದಪತ್ರಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು ಎಂದು ರಾಣಿ ಕಪೂರ್ ಗಂಭೀರ ಆರೋಪ ಮಾಡಿದ್ದಾರೆ. ಸೋನಾ ಗ್ರೂಪ್ ಮತ್ತು ಸೋನಾ ಕಾಮ್ಸ್ಟಾರ್ನ ಬಹುಪಾಲು ಷೇರುದಾರಳು ತಾನೇ ಆಗಿದ್ದೇನೆ. ಆದರೂ ತನ್ನನ್ನು ಕಡೆಗಣಿಸಲಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಶತ್ರುಗಳು, ನಾನು ನನ್ನ ಮಗನ ಅಗಲಿಕೆಯ ದುಃಖದಲ್ಲಿರುವಾಗಲೇ ಕುಟುಂಬದ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಕುಟುಂಬದ ಪ್ರತಿನಿಧಿಗಳ ನೇಮಕದ ಬಗ್ಗೆ ತಮ್ಮೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
https://www.newsics.com/2025/07/25/rape-case-court-dismisses-prajwal-revannas-bail-application/