newsics.com
ಸೊಲ್ಲಾಪುರ: ಕನಸಿನಲ್ಲಿ ಮೃತ ನನ್ನ ತಾಯಿ ಬಂದು ಕರೆಯುತ್ತಿದ್ದಾಳೆ, ಅವಳ ಬಳಿ ಹೋಗುತ್ತೇನೆ ಎಂದು ಬರೆದ ಡೆತ್‌ನೋಟ್ ಬರೆದಿಟ್ಟು 16 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ.
ಶಿವಶರಣ್ ಭೂತಾಲಿ ತಲ್ಕೋಟಿ ಎಂಬಾತ ಮೃತ ಬಾಲಕ. ಈಗ ತನ್ನ ಮಾವನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಇನ್ನು ಕಳೆದ ಮೂರು ತಿಂಗಳ ಹಿಂದೆ ಬಾಲಕನ ತಾಯಿ ನಿಧನರಾಗಿದ್ದರು.
ಮೃತ ಬಾಲಕನ ಡೆತ್‌ನೋಟ್ “ನಾನು ಶಿವಶರಣ್. ನಾನು ಬದುಕಲು ಇಷ್ಟವಿಲ್ಲದ ಕಾರಣ ನಾನು ಸಾಯುತ್ತಿದ್ದೇನೆ. ನನ್ನ ತಾಯಿ ಹೋದಾಗ ನಾನು ಹೋಗಬೇಕಿತ್ತು, ಆದರೆ ನಾನು ನನ್ನ ಚಿಕ್ಕಪ್ಪ ಮತ್ತು ಅಜ್ಜಿಯ ಮುಖಗಳನ್ನು ನೋಡುತ್ತಾ ಜೀವಂತವಾಗಿದ್ದೆ. ನನ್ನ ಸಾವಿಗೆ ಕಾರಣ ನಿನ್ನೆ ನನ್ನ ತಾಯಿ ನನ್ನ ಕನಸಿನಲ್ಲಿ ಬಂದರು. ನಾನು ಯಾಕೆ ತುಂಬಾ ಬೇಜಾರಾಗಿದ್ದೇನೆ ಎಂದು ನನ್ನನ್ನು ಕೇಳಿದರು. ತನ್ನ ಬಳಿಗೆ ಬರಲು ಹೇಳಿದರು. ಹಾಗಾಗಿ, ನಾನು ಸಾಯುವ ಬಗ್ಗೆ ಯೋಚಿಸಿದೆ. ನನ್ನ ಚಿಕ್ಕಪ್ಪ ಮತ್ತು ಅಜ್ಜಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಏಕೆಂದರೆ, ಅವರು ನನಗೆ ತುಂಬಾ ಬೆಂಬಲ ಕೊಟ್ಟರು, ನನ್ನನ್ನು ತುಂಬಾ ಮುದ್ದಿಸಿದರು,” ಎಂದು ಬರೆದಿದ್ದಾನೆ.
ಅಧಿಕಾರಿಗಳು ಆತ್ಮಹತ್ಯೆ ಪತ್ರವನ್ನು ಕಂಡುಕೊಂಡು ತನಿಖೆ ನಡೆಸುತ್ತಿದ್ದಾರೆ.