Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Digital arrest ಬೆಂಗಳೂರಲ್ಲಿ ಮತ್ತೊಂದು ಡಿಜಿಟಲ್ ಅರೆಸ್ಟ್: ಮಹಿಳೆಯರಿಬ್ಬರನ್ನು ಬೆತ್ತಲಾಗಿಸಿ ವಿಡಿಯೋ ಮಾಡಿ, ಹಣ ದೋಚಿದ ಖದೀಮರು!
ಕರ್ನಾಟಕಪ್ರಮುಖ

Digital arrest ಬೆಂಗಳೂರಲ್ಲಿ ಮತ್ತೊಂದು ಡಿಜಿಟಲ್ ಅರೆಸ್ಟ್: ಮಹಿಳೆಯರಿಬ್ಬರನ್ನು ಬೆತ್ತಲಾಗಿಸಿ ವಿಡಿಯೋ ಮಾಡಿ, ಹಣ ದೋಚಿದ ಖದೀಮರು!

Share
2 Min Read
SHARE

newsics.com

ಬೆಂಗಳೂರು: ನಗರದಲ್ಲಿ ಮತ್ತೊಂದು ಡಿಜಿಟಲ್ ಅರೆಸ್ಟ್ ಪ್ರಕರಣ ಬೆಳಕಿಗೆ ಬಂದಿದ್ದು, ನಕಲಿ ಪೊಲೀಸರು ಇಬ್ಬರು ಮಹಿಳೆಯರ ವಿಚಾರಣೆ ನೆಪದಲ್ಲಿ ವಿವಸ್ತ್ರಗೊಳಿಸಿದ್ದಲ್ಲದೆ ವಿಡಿಯೋ ಮಾಡಿದ ಘಟನೆ ನಡೆದಿದೆ.

ಬೆಂಗಳೂರಿನ ಇಬ್ಬರು ಮಹಿಳೆಯರನ್ನು ನಕಲಿ ಪೊಲೀಸರು ‘ಡಿಜಿಟಲ್‌ ಅರೆಸ್ಟ್‌’ ಮಾಡಿ ಆನ್ಲೈನ್ ವೈದ್ಯಕೀಯ ಪರೀಕ್ಷೆ ನೆಪದಲ್ಲಿ ಅವರನ್ನು ನಗ್ನವಾಗಿ ನಿಲ್ಲಿಸಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಬಳಿಕ ಅದೇ ವಿಡಿಯೋ ತೋರಿಸಿ ಬೆದರಿಸಿ 50 ಸಾವಿರಕ್ಕೂ ಹೆಚ್ಚು ಹಣ ಕಸಿದುಕೊಂಡಿದ್ದಾರೆ.

ಈ ಕುರಿತು ಈಸ್ಟ್ ಸಿಇಎನ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಥೈಲ್ಯಾಂಡ್‌ನಲ್ಲಿ ಬೋಧಕಿಯಾಗಿರುವ ಮಹಿಳೆ ತನ್ನ ಸ್ನೇಹಿತೆಯನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಇಬ್ಬರೂ ಈ ಡಿಜಿಟಲ್ ಅರೆಸ್ಟ್ ವಂಚನೆಯ ಜಾಲದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಜುಲೈ 17 ರಂದು ಬೆಳಗ್ಗೆ ರಿಚಾಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದೆ. ತನ್ನ ಸ್ನೇಹಿತೆಗೆ ವಂಚಕರಿಂದ ಕರೆಬಂದಿದ್ದು, ಅವರು ತಾನು ‘ಜೆಟ್ ಏರ್‌ವೇಸ್ ಹಗರಣ’ದಲ್ಲಿ ಭಾಗಿಯಾಗಿದ್ದೇನೆ ಎಂದು ಆರೋಪಿಸಿದ್ದಾರೆ. ವಂಚಕರು ಆಕೆಯನ್ನು ಹಣ ವರ್ಗಾವಣೆ, ಕಳ್ಳಸಾಗಣೆ ಮತ್ತು ಕೊಲೆಯಲ್ಲಿಯೂ ಭಾಗಿಯಾಗಿದ್ದಾಳೆ ಎಂದು ಆರೋಪಿಸಿದ್ದಾರೆ.

ಕರೆ ಮಾಡಿದ ವ್ಯಕ್ತಿ ತನ್ನನ್ನು ಮುಂಬೈನ ಕೊಲಾಬಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು‌, ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರೊಂದಿಗೆ ನೀವು ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವುದಾಗಿ ಆರೋಪಿಸಿದ್ದಾನೆ. ನೀವು ಮಾನವ ಕಳ್ಳಸಾಗಣೆ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿಯೂ ಆರೋಪಿಸಿ ಹೆದರಿಸಿದ್ದಾನೆ.

ಇದರಿಂದ ಆಘಾತಕ್ಕೊಳಗಾದ ರಿಚಾ, ತಾನು ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ. ಈ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆದರೂ ಕರೆ ಮಾಡಿದ ವ್ಯಕ್ತಿ ತಾನು ಬಳಸುತ್ತಿದ್ದ ಡೆಬಿಟ್ ಕಾರ್ಡ್‌ ವಿವರಗಳನ್ನು ಹಂಚಿಕೊಂಡು ಆಕೆಯನ್ನು ಬಂಧಿಸುವುದಾಗಿ ಹೆದರಿಸಿದ್ದಾನೆ.

ನಕಲಿ ಬಂಧನ ವಾರಂಟ್‌ ಮತ್ತು ಕೇಂದ್ರ ತನಿಖಾ ದಳದ ಗುರುತಿನ ಚೀಟಿ ಸೇರಿ ಅಧಿಕೃತವಾಗಿ ಕಾಣುವ ದಾಖಲೆಗಳನ್ನು ತೋರಿಸಿದ್ದರಿಂದ, ಭಯಭೀತರಾದ ಮಹಿಳೆಯರು, ಪೊಲೀಸ್‌ ಠಾಣೆಯಿಂದ ಕರೆ ಬಂದಿದೆ ಎಂದು ನಂಬಿದ ರಿಚಾ ತನ್ನ ಬ್ಯಾಂಕ್ ಖಾತೆಯಿಂದ 58,447 ರೂ.ಗಳನ್ನು ವಂಚಕರಿಗೆ ವರ್ಗಾಯಿಸಿದ್ದಾರೆ.

ಹಣ ಪಡೆದ ನಂತರ ವಂಚಕರು ಸಂತ್ರಸ್ತರಿಗೆ ಕ್ಲಿಯರೆನ್ಸ್ ಪಡೆಯಬೇಕು ಎಂದು ಹೇಳಿದರು. ಇದಕ್ಕಾಗಿ ಅವರು ಆನ್‌ಲೈನ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ. ಮಹಿಳೆಯರನ್ನು ವಿವಸ್ತ್ರವಾಗುವಂತೆ ಸೂಚನೆ ನೀಡಿದ್ದು, ಅದರಂತೆ ಇಬ್ಬರೂ ಮಹಿಳೆಯರು ಕ್ಯಾಮೆರಾ ಮುಂದೆ ವಿವಸ್ತ್ರರಾಗಿದ್ದಾರೆ.

ಬಾಲ್ಯದ ಸ್ನೇಹಿತರಾದ ಈ ಮಹಿಳೆಯರು ಸೈಬರ್ ಅಪರಾಧಿಗಳಿಂದ ಸುಮಾರು 9 ಗಂಟೆ ಕಾಲ ಒತ್ತೆಯಾಳಾಗಿ ಇರಿಸಲ್ಪಟ್ಟಿದ್ದು, ನಂತರ ಮತ್ತೊಬ್ಬ ಸ್ನೇಹಿತನನ್ನು ಸಂಪರ್ಕಿಸಿದಾಗ ತಾವು ಆನ್‌ಲೈನ್ ವಂಚನೆ ಮತ್ತು ಸುಲಿಗೆಗೆ ಬಲಿಯಾಗಿದ್ದೇವೆ ಎಂದು ಅರಿತುಕೊಂಡಿದ್ದಾರೆ. ತೀವ್ರ ಒತ್ತಡ ಮತ್ತು ಕಿರುಕುಳ ಅನುಭವಿಸಿದ ನಂತರ, ರಿಚಾ ಸಹಾಯಕ್ಕಾಗಿ ಸ್ನೇಹಿತೆಯನ್ನು ಸಂಪರ್ಕಿಸಲು ನಿರ್ಧರಿಸಿದಳು. ರಾತ್ರಿ 8 ಗಂಟೆ ಸುಮಾರಿಗೆ ಸ್ನೇಹಿತರಿಗೆ ವಾಟ್ಸ್ಯಾಪ್ ಕರೆ ಮಾಡಿದ್ದಾರೆ. ಕೂಡಲೇ ಆ ಸ್ನೇಹಿತೆ ಎಲ್ಲಾ ಕರೆಗಳ ಸಂಪರ್ಕ ಕಡಿತಗೊಳಿಸುವಂತೆ ಮತ್ತು ಇನ್ನು ಮುಂದೆ ಹಣವನ್ನು ವರ್ಗಾಯಿಸದಂತೆ ಸಲಹೆ ನೀಡಿದ್ದಾರೆ.

ಕರೆ ಸಂಪರ್ಕ ಕಡಿತಗೊಂಡ ನಂತರ, ವಂಚಕರು ಮತ್ತೆ ಮಹಿಳೆಯರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಅವರ ನಗ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ್ದಲ್ಲದೆ, ಅವುಗಳನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಕೆ ಹಾಕಿದರು. ವಂಚಕರ ಈ ಕಿರುಕುಳದಿಂದಾಗಿ ಇಬ್ಬರೂ ಮಹಿಳೆಯರು ಸುಮಾರು ಒಂಬತ್ತು ಗಂಟೆ ಕಾಲ ತೀವ್ರ ಭಯ ಮತ್ತು ಅವಮಾನ ಎದುರಿಸುವಂತಾಗಿತ್ತು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು ವಿವಾಹೇತರ ಸಂಬಂಧ ಇರೋದು ಇಲ್ಲೇ!

TAGGED:Another digital arrest in Bengaluru: Criminals filmed two women naked and robbed them of money!
Share This Article
Facebook Twitter Copy Link Print
Previous Article Kothalavadi Trailer: ರಾಕಿಂಗ್ ಸ್ಟಾರ್ ಯಶ್ ತಾಯಿ ನಿರ್ಮಾಣದ ಕೊತ್ತಲವಾಡಿ ಚಿತ್ರದ ಟ್ರೇಲರ್ ಬಿಡುಗಡೆ
Next Article Today’s prediction ಇಂದಿನ ರಾಶಿ ಭವಿಷ್ಯ, 24-07-2025, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

Popular Posts

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

You Might Also Like

ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read
ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?