newsics.com
ಬೆಂಗಳೂರು : ಬಿಎಂಟಿಸಿ ಬಸ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿದ ಘಟನೆ ರೇಷ್ಮೆ ಸಂಸ್ಥೆ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ.
ಹಿಂದಿನಿಂದ ಬೈಕ್ ಗೆ BMTC ಬಸ್ ಡಿಕ್ಕಿಯಾಗಿ ಹಿಂಬದಿ ಕುಳಿತಿದ್ದ ಸವಾರ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಬಸ್ ಕೆ ಆರ್ ಮಾರ್ಕೆಟ್ ನಿಂದ ಹಂಚಿಪುರ ಕಾಲೋನಿಗೆ ತೆರಳುತಿತ್ತು. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
https://www.newsics.com/2025/07/22/gold-and-silver-prices-rise-again/