newsics.com
ಆ್ಯಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಈಚೆಗೆ ಭಾರಿ ಸುದ್ದಿಯಾಗುತ್ತಿದೆ. ಇದೇ ಆಗಸ್ಟ್ 28ರಂದು ಅನುಶ್ರೀ ಅವರ ವಿವಾಹವು ರೋಷನ್ ಎಂಬುವವರ ಜೊತೆಗೆ ನಡೆಯಲಿದೆ ಎಂಬುದು ಸುದ್ದಿ ಹರಡುತ್ತಿದೆ. ಇದರ ಬೆನ್ನಲ್ಲೇ ಅನುಶ್ರೀ ಪೊಸ್ಟ್‌ವೊಂದನ್ನ ಶೇರ್ ಮಾಡಿಕೊಂಡಿದ್ದಾರೆ.
ಡಾ.ರಾಜ್‌ಕುಮಾರ್ ಅವರ ಹಳೆಯ ಸಿನಿಮಾವೊಂದರ ಡೈಲಾಗ್ ಇರುವ ವಿಡಿಯೋವೊಂದನ್ನು ಅನುಶ್ರೀ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಏನಿದೆ? “ಈ ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕೋದಕ್ಕೆ ನಮ್ಮಿಂದ ಸಾಧ್ಯವಿಲ್ಲ. ಒಳ್ಳಯವರಾಗಿದ್ರೂ ಆಡ್ಕೋತಾರೆ, ಕೆಟ್ಟವರಾಗಿದ್ರೂ ಆಡ್ಕೋತಾರೆ. ಈ ಆಡ್ಕೋಳೋದು, ಅನ್ನೋದು ಮನುಷ್ಯನಿಗೆ ಒಂಥರಾ ಕಾಯಿಲೆ ಇದ್ದಹಾಗೆ. ಇದಕ್ಕೆ ಔಷಧಿನೇ ಇಲ್ಲ”- ಸಂಭಾಷಣೆ ಇರುವ ವಿಡಿಯೋವನ್ನು ಶೇರ್ ಅನುಶ್ರೀ ಮಾಡಿದ್ದಾರೆ
ಮುಂದಿನ ತಿಂಗಳು ಆಗಸ್ಟ್-28 ರಂದು ಅನುಶ್ರೀ ಮತ್ತು ರೋಷನ್ ವಿವಾಹ ಆಗುತ್ತಿದ್ದಾರೆ ಅನ್ನೋದೇ ಸದ್ಯ ಸಿಕ್ಕಿರೋ ಮಾಹಿತಿ ಆಗಿದೆ.
ಇದೇ ವೇಳೆ ಅನುಶ್ರೀ ಮದುವೆಯಾಗುತ್ತಿರುವ ಹುಡುಗ ಯಾರು ಎನ್ನುವ ಗುಸುಗುಸು ಶುರುವಾಗಿದ್ದು, ಕಳೆದ ತಿಂಗಳು ಅನುಶ್ರೀ ತಮ್ಮನ ಹೋಟೆಲ್ ಪಾರುಸ್ ಕಿಚೆನ್ ಓಪನಿಂಗ್ ನಲ್ಲಿ ಇಬ್ಬರು ಒಟ್ಟಿಗೆ ಪೂಜೆ ಮಾಡಿದ್ದಾರೆ ಈ ಸಂಬಂಧ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು ಅವರೇ ಆಂಕರ್ ಅನು ಕೈ ಹಿಡಿಯುವ ಹುಡುಗ ಎನ್ನಲಾಗುತ್ತಿದೆ.
https://www.instagram.com/reel/DMSxK_etGFL/?igsh=a2k0dWh6enRkNTc4