newsics.com
ಬಿಹಾರದಲ್ಲಿ ನಾಗಪಂಚಮಿ ಹಬ್ಬ ನಡೆಯುತ್ತಿದ್ದು ಮಿಥಿಲಿಯಾ ಪ್ರಾಂತ್ಯದಲ್ಲಿ ಹಬ್ಬದ ಪ್ರಯುಕ್ತ ಜನರು ಹಾವುಗಳನ್ನು ಕೈಯಿಂದ ಹಿಡಿದು, ತಲೆ ಮೇಲೆ ಇಟ್ಟುಕೊಂಡು ಮೆರವಣಿಗೆ ಹೋಗುತ್ತಾರೆ. ಬೇಗುಸರಾಯ್, ಸಮಸ್ಟಿಪುರ, ಸಹಸ್ರಾ, ಮುಜಾಫರಪುರ, ಕಾಗಾರಿಯಾ ಜಿಲ್ಲೆಯಲ್ಲಿ ಈ ವಿಶೇಷ ನಾಗ ಪಂಚಮಿ ಹಬ್ಬ ಆಚರಿಸಲಾಗುತ್ತಿದೆ.
ಸಮಸ್ಟಿಪುರದ ಸಿಂಘಿಯಾ ಘಾಟ್ನಲ್ಲಿ ನೂರಾರು ಮಂದಿ ಭಕ್ತರು ನಾಗರ ಪಂಚಮಿ ಹಬ್ಬದಲ್ಲಿ ಭಾಗಿಯಾಗಿದ್ದರು. ಧಾರ್ಮಿಕ ಸಂಪ್ರದಾಯದ ಭಾಗವಾಗಿ ಜೀವಂತ ಹಾವುಗಳನ್ನೇ ಹಿಡಿದುಕೊಂಡು ಧಾರ್ಮಿಕ ಆಚರಣೆ ಮಾಡಿದರು. ಸಿಂಘಿಯಾ ಬಜಾರ್ನಲ್ಲಿರುವ ತಾಯಿ ಭಗವತಿ ದೇವಾಲಯದಿಂದ ವಾರ್ಷಿಕ ಜಾತ್ರೆ ಆರಂಭವಾಗುತ್ತೆ.
ಬಳಿಕ ಬುದ್ದಿ ಗಂಡಕ್ ನದಿ ದಡಕ್ಕೆ ಭಕ್ತರು ಹೋಗುತ್ತಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾವುಗಳನ್ನು ಹಿಡಿದುಕೊಂಡು ಮೆರವಣಿಗೆ ಹೋಗುತ್ತಾರೆ. ಜನರ ಕುತ್ತಿಗೆಯ ಸುತ್ತ ಹಾವು ಇರುತ್ತೆ ಇಲ್ಲವೇ ಕೈಯಲ್ಲಿ ಹಾವು ಇರುತ್ತೆ. ಕೆಲವರು ತಲೆಯ ಮೇಲೆ ಹಾವು ಇಟ್ಟುಕೊಂಡರೇ, ಇನ್ನೂ ಕೆಲವರು ಕೈಯ ಮೇಲೆ ಹಾವು ಹಿಡಿದುಕೊಂಡು ಮೆರವಣಿಗೆ ಹೋಗುತ್ತಾರೆ. ಹಾವುಗಳ ಬಗ್ಗೆ ಯಾವುದೇ ಭಯವಿಲ್ಲದೇ ಜನರು, ಮಕ್ಕಳು, ಹುಡುಗರು ಹಾವುಗಳನ್ನು ಹಿಡಿದುಕೊಂಡು ಹಬ್ಬ ಆಚರಣೆ ಮಾಡುತ್ತಾರೆ.