newsics.com
ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಕೇರಳದ ಮಹಿಳೆಯೊಬ್ಬಳು ಒಂದೂವರೆ ವರ್ಷದ ಮಗುವಿನ ಜೀವ ತೆಗೆದು ತಾನೂ ಕೂಡ ಸಾ*ವಿಗೆ ಶರಣಾಗಿರುವ ಘಟನೆ ಯುನೈಟೆಡ್ ಅರಬ್ ಎಮಿರೇಟ್ಸ್ನ ಶಾರ್ಜಾದಲ್ಲಿ ನಡೆದಿದೆ.
ವರದಕ್ಷಿಣೆಗಾಗಿ ವಿಪಂಜಿಕಾ ಅವರಿಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತಾಯಿ ನೀಡಿದ ದೂರಿನ ಪ್ರಕಾರ.. ಕೊಟ್ಟ ವರದಕ್ಷಿಣೆ ಸಾಕಾಗುವುದಿಲ್ಲ ಎಂದು ಹೇಳಿ ವಿಪಂಜಿಕಾಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿದ್ದರು. ಆಕೆ ತುಂಬಾ ಸುಂದರವಾಗಿದ್ದು, ಆಕೆಯ ಗಂಡನ ಬಣ್ಣ ಕಪ್ಪು. ಹೀಗಾಗಿ ಆಕೆಯೂ ಕೂಡ ಕೆಟ್ಟದ್ದಾಗಿ ಕಾಣಬೇಕೆಂದು ಆಕೆಯ ತಲೆ ಬೋಳಿಸಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಫೇಸ್ಬುಕ್ನಲ್ಲಿ ಡೆತ್ನೋಟ್ ಬರೆಯಲಾಗಿದ್ದು ತನಗೆ ನೀಡುತ್ತಿದ್ದ ಕ್ರೂರ ಶಿಕ್ಷೆಯ ಬಗ್ಗೆ ಬರೆದುಕೊಂಡಿದ್ದಾಳೆ. ಮಾವ ತನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಲೈಂಗಿಕವಾಗಿ ಕಿರುಕುಳ ಕೊಟ್ಟಿರೋದ್ರ ಬಗ್ಗೆ ಹೇಳಿದ್ದಾಳೆ. ನೀನು ನನಗೆ ಮಾತ್ರವಲ್ಲ ನನ್ನ ಅಪ್ಪನಿಗೂ ಸಹಕಾರ ನೀಡ್ಬೇಕು ಅಂತ ಅಶ್ಲೀಲ ವಿಡಿಯೋ ತೋರಿಸಿ ಬೆಡ್ನಲ್ಲಿ ಇದೇ ರೀತಿ ಮಾಡ್ಬೇಕು ಅಂತಿದ್ದನಂತೆ. ನನಗೆ ನಾಯಿ ತರಹ ಹೊಡೆಯುತ್ತಿದ್ದ. ಈ ಹಿಂಸೆಯನ್ನೂ ಸಹಿಸಲಾಗದು. ಅವರನ್ನೂ ಬಿಡಬೇಡಿ ತಕ್ಕ ಶಿಕ್ಷೆ ಕೊಡಿಸಬೇಕು ಅಂತ ಗೃಹಿಣಿ ನೋಟ್ ಬರೆದಿದ್ದಾಳೆ. ಖಲೀಜಾ ಟೈಮ್ಸ್ ವರದಿ ಪ್ರಕಾರ, ಮಹಿಳೆಯೇ ತನ್ನ ಕೈಯಾರೆ ಮಲಯಾಳಿ ಭಾಷೆಯಲ್ಲಿ ಬರೆದಿದ್ದಾಳೆ.
https://www.newsics.com/2025/07/16/why-did-india-say-no-to-non-veg-milk/