newsics.com
ಸ್ಟಾರ್ ನಟಿ ಶೃತಿ ಹಾಸನ್ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.ಶ್ರುತಿ ಹಾಸನ್ ಸತತ ಸಿನಿಮಾಗಳಲ್ಲಿ ಬ್ಯುಸಿ ಆಗಿರುವುದು ಗೊತ್ತೇ ಇದೆ. ಖ್ಯಾತ ನಟ ಹೀರೋ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಚಿತ್ರರಂಗಕ್ಕೆ ಕಾಲಿಟ್ಟು ಖ್ಯಾತಿ ಗಳಿಸಿದರು. ಪವನ್ ಕಲ್ಯಾಣ್, ಮಹೇಶ್ ಬಾಬು, ಎನ್.ಟಿ.ಆರ್, ಪ್ರಭಾಸ್, ರಾಮ್ ಚರಣ್, ಅಲ್ಲು ಅರ್ಜುನ್ ಮುಂತಾದ ಟಾಪ್ ಹೀರೋಗಳ ಜೊತೆ ತೆಲುಗಿನಲ್ಲಿ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಶೃತಿ ಹಾಸನ್ ವೈಯಕ್ತಿಕ ಜೀವನ, ಡೇಟಿಂಗ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿರುತ್ತವೆ.ತನ್ನ ದೀರ್ಘಕಾಲದ ಗೆಳೆಯನೊಂದಿಗೆ ಬ್ರೇಕಪ್ ಆಗಿದ್ದು, ಹಾಗೂ ಮುಂದೆ ಮದುವೆ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಿದ್ದಾರೆ.
ಇಬ್ಬರು ವ್ಯಕ್ತಿಗಳ ಮಧ್ಯೆ ರಿಲೆಷನ್ ಷಿಪ್ ಇದ್ರೆ ಅದು ಮದುವೆಗೆ ದಾರಿಯಾಗುತ್ತಾ? ಆ ಸಂಬಂಧ ತಪ್ಪು ಎಂದೆನಿಸಿದರೇ ಮದುವೆ ಆಗ್ಬೇಕಾ? ಒಬ್ಬ ವ್ಯಕ್ತಿಯ ಜೊತೆಗಿನ ಬಂಧ ಮದುವೆಗೆ ದಾರಿಯಾಗಬಾರದು. ರಿಲೆಷನ್ ಷಿಪ್ ನಲ್ಲಿ ನನಗೆ ಅಂತ ಒಂದು ಅಭಿಪ್ರಾಯ ಇರುತ್ತೆ. ರಿಲೆಷನ್ ಅನ್ನೋದು ಸ್ವಚ್ಛ ಮನಸ್ಸಿನಿಂದ ಇರಬೇಕು. ನನಗೆ ಇಷ್ಟವಾದ ವ್ಯಕ್ತಿಯನ್ನ ನಾನು ಕೋರಿಕೊಳ್ಳುತ್ತೇನೆ ಎಂದು ಶ್ರುತಿ ಹಾಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಮದುವೆ ಅಂದ್ರೆನೇ ನನಗೆ ಭಯ. ಇಬ್ಬರು ವ್ಯಕ್ತಿಗಳು ಒಂದಾಗಲು ಮದುವೆ ಅಥವಾ ಕಾಗದದ ಮೂಲಕ ಒಪ್ಪಂದ ಮಾಡಿಕೊಳ್ಳುವುದು ನನಗೆ ಭಯ ಹುಟ್ಟಿಸುತ್ತದೆ. ಆದರೆ ಬದ್ಧತೆ, ನಿಷ್ಠೆಯ ಮೇಲೆ ನನಗೆ ನಂಬಿಕೆ ಇದೆ. ಹಿಂದೊಮ್ಮೆ ಮದುವೆಯವರೆಗೂ ಹೋಗಿದ್ದೆ. ಆದರೆ ಸರಿ ಹೋಗಲಿಲ್ಲ.ನಾನು ಅದರಲ್ಲಿ ಪ್ರವೇಶಿಸಲು ಎಂದಿಗೂ ಇಚ್ಛಿಸುವುದಿಲ್ಲ ಎಂದಿದ್ದಾರೆ ಶ್ರುತಿ. ಮದುವೆ ಉದ್ದೇಶಿಸಿರುವ ಮೌಲ್ಯಗಳನ್ನು ನಾನು ಸಂಪೂರ್ಣವಾಗಿ ಅಳವಡಿಸಿಕೊಳ್ಳುತ್ತೇನೆ. ಆದರೆ ಅವುಗಳನ್ನು ಮೌಲ್ಯೀಕರಿಸಲು ನನಗೆ ಕಾನೂನು ದಾಖಲೆಯ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.
‘ನನ್ನ ಜೀವನದಾದ್ಯಂತ ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಬಹಳಷ್ಟು ಶ್ರಮಪಟ್ಟಿದ್ದೇನೆ. ಸ್ವಾತಂತ್ರ್ಯ ಮತ್ತು ವೈಯಕ್ತಿಕತೆ ತುಂಬಾ ಮುಖ್ಯ. ಈ ನಿರ್ಧಾರದಲ್ಲಿ ಪಶ್ಚಾತ್ತಾಪವಿಲ್ಲ. ನಾನು ನನಗೆ ಬೇಕಾದ ಜೀವನವನ್ನು ಕಟ್ಟಿಕೊಂಡಿರುವುದಕ್ಕೆ ಸಂತೋಷವಿದೆ. ಸಂಬಂಧಗಳಿಗೆ ಮಹತ್ವ ಕೊಡುತ್ತೇನೆ. ಆದರೆ ಸಂತೋಷ ಅಥವಾ ತೃಪ್ತಿಗೆ ವಿವಾಹ ಅವಶ್ಯಕವಿಲ್ಲ’ ಎಂದು ಶ್ರುತಿ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.