newsics.com
ಹೈದರಾಬಾದ್: ಬಹುಭಾಷಾ ಹಿರಿಯ ನಟ ಕೋಟ ಶ್ರೀನಿವಾಸರಾವ್(83) ಹೈದರಾಬಾದಿನ ತಮ್ಮ ನಿವಾಸದಲ್ಲಿ ಕೋಟ ಶ್ರೀನಿವಾಸರಾವ್ ನಿಧನರಾಗಿದ್ದಾರೆ.
ಹಾಸ್ಯ ನಟ ಮತ್ತು ಖಳನಾಯಕನ ಪಾತ್ರದಲ್ಲಿ ಅಭಿನಯಿಸಿದ್ದ ಕೋಟ ಶ್ರೀನಿವಾಸರಾವ್ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಸುಮಾರು 750ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
‘ಸುವರ್ಣ ಸುಂದರಿ’ ಕೋಟ ಶ್ರೀನಿವಾಸರಾವ್ ಅವರ ಕೊನೆಯ ಚಿತ್ರ. ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ, ಭಾಷೆಯ ಚಿತ್ರಗಳಲ್ಲಿ ಕೋಟ ಶ್ರೀನಿವಾಸರಾವ್ ಅಭಿನಯಿಸಿದ್ದಾರೆ.
‘ನಮ್ಮ ಬಸವ’, ‘ರಕ್ತ ಕಣ್ಣೀರು’ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಪದ್ಮಶ್ರೀ, ನಂದಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಬಂದಿವೆ. ಒಮ್ಮೆ ಶಾಸಕರಾಗಿಯೂ ಕೋಟ ಶ್ರೀನಿವಾಸರಾವ್ ಸೇವೆ ಸಲ್ಲಿಸಿದ್ದಾರೆ.