newsics.com
ವಾರಣಾಸಿ ಕ್ಯಾಂಟ್ ರೈಲ್ವೆ ನಿಲ್ದಾಣದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸರು ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ಯುವಕನನ್ನು ಕಂಡು ತಡೆದು ನಿಲ್ಲಿಸಿದ್ರು. ಆ ಯುವಕ ಒಂದು ಕೈಯಲ್ಲಿ ದೊಡ್ಡ ಟ್ರಾಲಿ ಬ್ಯಾಗ್ ಮತ್ತು ಇನ್ನೊಂದು ಬ್ಯಾಗ್ ಅನ್ನು ಭುಜದ ಮೇಲೆ ತೂಗಿಕೊಂಡು ಹೋಗ್ತಿದ್ದ.
ಟ್ರಾಲಿ ಹಿಡಿದ ಕಥಾನಾಯಕನ ಹೆಸರು ಸೋನು. ಹಲವಾರು ವರ್ಷಗಳಿಂದ ಅವನ ಹವಾಲಾ ದಂದೆ ಪರದೆಯ ಹಿಂದೆ ನಡೆಯುತ್ತಿತ್ತು. ಪೊಲೀಸರ ಡ್ರಿಲ್ ಬಳಿಕ ಸೋನು ಒಂದರ ನಂತರ ಒಂದರಂತೆ ದಂಧೆ ಮಾಹಿತಿಯನ್ನ ಬಿಚ್ಚಿಟ್ಟಿದ್ದ.
ಅವನ ಜೇಬಿನಲ್ಲಿ ಕೇವಲ ಒಂದು ನಾಣ್ಯವಿತ್ತು. ಆದರೆ ಅದರ ಮೌಲ್ಯ 35 ಲಕ್ಷ ಅಂದ್ರೆ ನಿಜಕ್ಕೂ ಶಾಕ್ ಆಗುತ್ತೆ. ಅವನ ಜೇಬಿನಲ್ಲಿದ್ದ ಒಂದು ಟೈರಾ ನಾಣ್ಯವು ಇಡೀ ವಹಿವಾಟಿನ ರಹಸ್ಯ ಸಂಕೇತ’ವಾಗಿತ್ತು.
ಈ 35 ಲಕ್ಷ ರೂಪಾಯಿಗಳೊಂದಿಗೆ ಬಿಹಾರದ ಸಸಾರಾಮ್ ಗೆ ತಲುಪಿ ಅಲ್ಲಿನ ನಿರ್ದಿಷ್ಟ ವ್ಯಕ್ತಿಗೆ ನಾಣ್ಯ ಸಂಖ್ಯೆಯನ್ನ ಉಲ್ಲೇಖಿಸಿ ಹಣವನ್ನು ಹಸ್ತಾಂತರಿಸುವುದು ಸೋನುವಿನ ಕೆಲಸವಾಗಿತ್ತು. ಹಣವನ್ನು ಸ್ವೀಕರಿಸಿದ್ದಕ್ಕಾಗಿ ಯಾರೂ ಯಾವುದೇ ದಾಖಲೆಗಳನ್ನು ನೀಡಲಿಲ್ಲ, ನಾಣ್ಯ ಸಂಖ್ಯೆಯನ್ನು ಆಧರಿಸಿಯೇ ಕೋಟ್ಯಂತರ ರೂಪಾಯಿಗಳ ವಿನಿಮಯ ನಡೆದಿದೆ ಎನ್ನಲಾಗ್ತಿದೆ.
.ವಾರಣಾಸಿ ಕಂಟೋನ್ಮೆಂಟ್ ಜಿಆರ್‌ಪಿ ಸಿಒ ಕುನ್ವರ್ ಪ್ರತಾಪ್ ಮಾತನಾಡಿ, ಸೋನು ಅವರನ್ನು ಬಂಧಿಸಲಾಗಿದೆ. ಹಣ ಎಲ್ಲಿಂದ ಬಂತು ಮತ್ತು ಯಾರಿಗೆ ಹೋಗುತ್ತಿದೆ ಎಂಬುದನ್ನು ಕಂಡುಹಿಡಿಯಲು ಆದಾಯ ತೆರಿಗೆ ಇಲಾಖೆಯೂ ತನಿಖೆ ಆರಂಭಿಸಿದ್ದಾರೆ.