newsics.com
ದರ್ಶನ್ ಅವರು ತಮ್ಮ ಫಾರ್ಮ್ಹೌಸ್ನಲ್ಲಿ ವಿದೇಶಿ ಬಾತುಕೋಳಿ ಸಾಕಿದ್ದು ಕೂಡ ವಿವಾದಕ್ಕೆ ಕಾರಣ ಆಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಎಫ್ಐಆರ್ ದಾಖಲು ಮಾಡಿತ್ತು.
ಆ ಕೇಸ್ ವಿಚಾರಣೆಗೆ ಇಂದು (ಜುಲೈ 4) ಟಿ. ನರಸಿಪುರ ಕೋರ್ಟ್ಗೆ ದರ್ಶನ್ ಹಾಜರಾಗಬೇಕಿತ್ತು. ಕೋರ್ಟ್ನಿಂದ ದರ್ಶನ್-ವಿಜಯಲಕ್ಷ್ಮೀ ದಂಪತಿಯ ವಿಚಾರಣೆ ಮುಂದೂಡಿಕೆ ಆಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿದೇಶಿ ಮೂಲದ ಅಬಾರ್ ಹೆಡೆಡ್ ಗೂಸ್‌ಬಿ ಎಂಬ ಬಾತುಕೋಳಿಗಳನ್ನು ಸಾಕಿದ್ದನ್ನು ಸಂದರ್ಶನವೊಂದರಲ್ಲಿ ತೋರಿಸಿದ್ದರು. ಅರಣ್ಯಾಧಿಕಾರಿಗಳು ದಾಳಿ ಮಾಡಿ ವಿದೇಶಿ ಪ್ರಬೇಧದ ಬಾತುಕೋಳಿ ಗಳನ್ನು ವಶವಡಿಸಿಕೊಂಡಿದ್ದರು. ಈ ಬಾತುಕೋಳಿಗಳನ್ನು ನನಗೆ ನಮ್ಮ ಸ್ನೇಹಿತರು ನೀಡಿದ್ದಾಗಿ ನಟ ದರ್ಶನ್ ಅವರು ದಾಳಿಯ ವೇಳೆ ತಿಳಿಸಿದ್ದರು. ಇಂದು ಈ ಬಗ್ಗೆ ಕೋರ್ಟ್ ವಿಚಾರಣೆ ಇತ್ತು. ಆದರೀಗ ಸೆ.4ಕ್ಕೆ ದರ್ಶನ್ ದಂಪತಿ ವಿಚಾರಣೆ ಮುಂದೂಡಿಕೆ ಆಗಿದೆ.