Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > cab aggregators ಪೀಕ್ ಅವರ್​​ನಲ್ಲಿ ದರವನ್ನು ಹೆಚ್ಚಿಸಲು ಕ್ಯಾಬ್ ಅಗ್ರಿಗೇಟರ್​​ಗಳಿಗೆ ಸರ್ಕಾರ ಅನುಮತಿ
ದೇಶ

cab aggregators ಪೀಕ್ ಅವರ್​​ನಲ್ಲಿ ದರವನ್ನು ಹೆಚ್ಚಿಸಲು ಕ್ಯಾಬ್ ಅಗ್ರಿಗೇಟರ್​​ಗಳಿಗೆ ಸರ್ಕಾರ ಅನುಮತಿ

Share
2 Min Read
SHARE

newsics.com

ಪೀಕ್ ಅವರ್​​ನಲ್ಲಿ ದರವನ್ನು ಎರಡು ಪಟ್ಟು ಏರಿಸಲು ಮತ್ತು ಬೇಡಿಕೆ ಕಡಿಮೆ ಇರುವ ವೇಳೆಯಲ್ಲಿ ದರವನ್ನು ಅರ್ಧದಷ್ಟು ಇಳಿಸಲು ಕ್ಯಾಬ್ ಅಗ್ರಿಗೇಟರ್​​ಗಳಿಗೆ ಅನುಮತಿ ನೀಡಿದೆ.ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬೈಕ್ ಟ್ಯಾಕ್ಸಿ, ಕ್ಯಾಬ್ ಅಗ್ರಿಗೇಟರ್​​ಗಳ ಸೇವೆ ಸಂಬಂಧ ಕಾನೂನು ರೂಪಿಸಲು ರಾಜ್ಯ ಸರ್ಕಾರಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಈ ಮಾರ್ಗಸೂಚಿಯಲ್ಲಿ ಕ್ಯಾಬ್ ಅಗ್ರಿಗೇಟರ್​​ಗಳಿಗೆ ಡೈನಮಿಕ್ ಪ್ರೈಸಿಂಗ್​​ಗೆ ಅನುಮತಿ ನೀಡಲಾಗಿದೆ. ರಾಜ್ಯ ಸರ್ಕಾರಗಳು ನಿಗದಿ ಮಾಡುವ ಮೂಲ ದರ ಅಥವಾ ಬೇಸ್ ಫೇರ್​​ಗೆ ಡೈನಮಿಕ್ ಪ್ರೈಸಿಂಗ್ ಅಳವಡಿಕೆ ಮಾಡಬಹುದು. ಅಂದರೆ, ಕ್ಯಾಬ್​​ಗಳಿಗೆ ಬೇಡಿಕೆ ಕಡಿಮೆ ಇದ್ದಾಗ ಮೂಲ ದರಕ್ಕಿಂತ ಶೇ. 50ರವರೆಗೂ ದರ ಕಡಿಮೆ ಮಾಡಬಹುದು. ಬೇಡಿಕೆ ಹೆಚ್ಚಿದ್ದಾಗ, ಅಂದರೆ ಪೀಕ್ ಅವರ್​​​ನಲ್ಲಿ ಮೂಲದರಕ್ಕಿಂತ ಎರಡು ಪಟ್ಟು ಹೆಚ್ಚು ದರ ಹೆಚ್ಚಿಸಲು ಸ್ವಾತಂತ್ರ್ಯ ಇರುತ್ತದೆ.

 

  • ಖಾಸಗಿ ಮೋಟಾರುಸೈಕಲ್​​ಗಳನ್ನು ಬೈಕ್ ಟ್ಯಾಕ್ಸಿಗೆ ಬಳಸಬಹುದು. ಇದಕ್ಕೆ ಅನುಮತಿ ನೀಡುವುದು ಬಿಡುವುದು ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದು
  • ಖಾಸಗಿ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಸೇವೆಗೆ ಬಳಸುವ ಅಗ್ರಿಗೇಟರ್​ಗಳಿಗೆ ರಾಜ್ಯ ಸರ್ಕಾರಗಳು ಶುಲ್ಕ ವಿಧಿಸಬಹುದು.
  • ಎಲ್ಲಾ ಚಾಲಕರ ಪೊಲೀಸ್ ವೆರಿಫಿಕೇಶನ್ ಆಗಿರಬೇಕು. ಕಣ್ಣಿನ ಪರೀಕ್ಷೆಯೂ ಸೇರಿ ಎಲ್ಲಾ ದೈಹಿಕ ಆರೋಗ್ಯ ತಪಾಸಣೆ ಮತ್ತು ಮಾನಸಿಕ ಆರೋಗ್ಯ ತಪಾಸಣೆ ಆಗಿರಬೇಕು. ಆಧಾರ್ ದಾಖಲೆಯ ದೃಢೀಕರಣ ಪಡೆಯಬೇಕು
  • ಪ್ರತಿಯೊಬ್ಬ ಚಾಲಕನಿಗೂ 10 ಲಕ್ಷ ರೂ ಟರ್ಮ್ ಇನ್ಷೂರೆನ್ಸ್, ಮತ್ತು 5 ಲಕ್ಷ ರೂ ಹೆಲ್ತ್ ಇನ್ಷೂರೆನ್ಸ್ ಕವರೇಜ್ ಮಾಡಿಸಿರಬೇಕು.
  • ಚಾಲಕರನ್ನು ನೊಂದಾಯಿಸಿಕೊಳ್ಳುವಾಗ ಅವರಿಗೆ 40 ಗಂಟೆ ತರಬೇತಿ ಕೊಟ್ಟಿರಬೇಕು. ಅಗತ್ಯಬಿದ್ದರೆ ಮೂರು ತಿಂಗಳಿಗೊಮ್ಮೆಯೋ, ವರ್ಷಕ್ಕೊಮ್ಮೆಯೋ ರೀಫ್ರೆಶರ್ ಕೋರ್ಸ್ ನೀಡಬೇಕು.
  • ಕ್ಯಾಬ್ ಅಗ್ರಿಗೇಟರ್​​ಗಳು CERT-in ಸೈಬರ್ ಸೆಕ್ಯೂರಿಟಿ ಗೈಡ್​ಲೈನ್ಸ್ ಪಾಲಿಸಬೇಕು. ಎಐಎಸ್-140 ಟ್ರ್ಯಾಕಿಂಗ್ ಸಿಸ್ಟಮ್ಸ್ ಬಳಸಬೇಕು; ಪ್ಯಾನಿಕ್ ಬಟನ್, ಕಂಟ್ರೋಲ್ ಸೆಂಟರ್ ಇತ್ಯಾದಿ ವ್ಯವಸ್ಥೆ ಇರಬೇಕು. ಇಂಗ್ಲೀಷ್, ಹಿಂದಿ ಅಥವಾ ಸ್ಥಳೀಯ ಭಾಷೆಯಲ್ಲಿನ ಯೂಸರ್ ಇಂಟರ್​​ಫೇಸ್ ಹೊಂದಿರಬೇಕು.
  • ಅಗ್ರಿಗೇಟರ್​​ಗಳು ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿಸಲು ಗಮನ ಕೊಡಬೇಕು.
  • ವಾಹನವು ಡ್ರೈವರ್​​ಗಳ ಸ್ವಂತದ್ದಾಗಿದ್ದರೆ ಡ್ರೈವರ್​​ಗಳಿಗೆ ದರದಲ್ಲಿ ಕನಿಷ್ಠ ಶೇ. 80 ಪಾಲು ಹೋಗಬೇಕು. ಅಗ್ರಿಗೇಟರ್​​ಗಳಿಗೆ ವಾಹನ ಸೇರಿದ್ದಾದರೆ ಕನಿಷ್ಠ ಶೇ. 60ರಷ್ಟು ದರವು ಡ್ರೈವರ್​​ಗೆ ಸಂದಾಯವಾಗಬೇಕು
  • ಆ್ಯಪ್ ಮೂಲಕ ಎಲ್ಲಾ ಸೇವೆ ನಡೆಯಬೇಕು. ಲೈವ್ ಟ್ರ್ಯಾಕಿಂಗ್, ಡ್ರೈವರ್ ರೇಟಿಂಗ್, ಎಮರ್ಜೆನ್ಸಿ ಬಟನ್ ಇತ್ಯಾದಿ ಸೌಲಭ್ಯ ಇರಬೇಕು.
  • ಅಗ್ರಿಗೇಟರ್​​ಗಳು ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆ್ಯಕ್ಟ್​ನ ನಿಯಮಾವಳಿಗೆ ಬದ್ಧವಾಗಿರಬೇಕು.
  • ಕ್ಯಾಬ್ ಅಗ್ರಿಗೇಟರ್​​ಗಳ ವಾಹನಗಳಲ್ಲಿ ಎಷ್ಟು ವಾಹನಗಳು ದಿವ್ಯಾಂಗ ಸ್ನೇಹಿಯಾಗಿರಬೇಕು ಎಂಬುದನ್ನು ರಾಜ್ಯ ಸರ್ಕಾರಗಳು ನಿರ್ಧರಿಸಬಹುದು.
  • ಅಗ್ರಿಗೇಟರ್​​ಗಳು ಹೊಸ ಪರವಾನಿಗೆ ಪಡೆಯಲು 5 ಲಕ್ಷ ರೂ, ಲೈಸೆನ್ಸ್ ನವೀಕರಣಕ್ಕೆ 25,000 ರೂ ಶುಲ್ಕ ನೀಡಬೇಕು.
  • ಕ್ಯಾಬ್ ಅಗ್ರಿಗೇಟರ್​​ಗಳು 100 ಬಸ್ ಅಥವಾ 1,000 ಇತರ ವಾಹನಗಳನ್ನು ಚಲಾಯಿಸುತ್ತಿದ್ದರೆ ಸೆಕ್ಯೂರಿಟಿ ಡೆಪಾಸಿಟ್ ಆಗಿ 10 ಲಕ್ಷ ರೂ ನೀಡಬೇಕು. ಅದೇ ಪ್ರಮಾಣದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದಂತೆ ಸೆಕ್ಯೂರಿಟಿ ಡೆಪಾಸಿಟ್ ಪ್ರಮಾಣವೂ ಹೆಚ್ಚು
TAGGED:#cab #aggregators #government #increase #tax
Share This Article
Facebook Twitter Copy Link Print
Previous Article ಜಪಾನ್ ನಲ್ಲಿ 192 ಪ್ರಯಾಣಿಕರಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ- ವಿಡಿಯೋ ನೋಡಿ
Next Article ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಜೀವ ಕಳೆದುಕೊಂಡ ಯುವಕ – ಸಾಯುವ ಮುನ್ನ ವಿಡಿಯೋ ಮಾಡಿ ಸ್ಟೇಟಸ್​​ಗೆ ಹಾಕಿದ ಸಂತೋಷ್​!

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read
ದೇಶಪ್ರಮುಖಮನರಂಜನೆ

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?