newsics.com
ಕೇರಳದ ಕೊಣ್ಣುರು ಸಮೀಪದಲ್ಲಿರುವ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ನವರಸ ನಾಯಕ ಜಗ್ಗೇಶ್ ಭೇಟಿ ನೀಡಿದ್ದಾರೆ.
ಕೇರಳದ ಪುಣ್ಯಕ್ಷೇತ್ರಕ್ಕೆ ನಟ ಜಗ್ಗೇಶ್ ಭೇಟಿ ಕೊಟ್ಟು ವಿಶೇಷ ಪೂಜೆ ಪುನಸ್ಕಾರ ಮಾಡಿಸಿದ್ದಾರೆ. ಈ ವಿಡಿಯೋವನ್ನು ನಟ ಜಗ್ಗೇಶ್ ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ವಿಡಿಯೋ ಜೊತೆಗೆ ಶ್ರೀ ಕೊಟ್ಟಿಯೂರು ಶಿವನ ಆಲಯಕ್ಕೆ ಭೇಟಿ ನೀಡಿದ ಆಧ್ಯಾತ್ಮಿಕ ಕ್ಷಣ. ದಕ್ಷಬ್ರಹ್ಮನ ಶಿರಚ್ಛೇದ ಮಾಡಿದ ಶಿವನ ಅಂಶ ವೀರಭದ್ರನ ಐತಿಹಾಸಿಕ ಕ್ಷೇತ್ರ ಎಂಬ ದೃಡನಂಬಿಕೆಯ.
ವರ್ಷಕ್ಕೆ 28ದಿನಗಳು ಮಾತ್ರ ಪೂಜಾ ಕಾರ್ಯ ನಡೆಯುತ್ತದೆ ಈ ಕ್ಷೇತ್ರದಲ್ಲಿ. ಹಿಂದೆ ಕಾಡಿನ ಸುತ್ತಮುತ್ತ ವಾಸಮಾಡುತ್ತಿದ್ದ ಜನರ ಆರಾಧನ ಕ್ಷೇತ್ರವಾಗಿತ್ತು. ಇಂದು ಶಬರಿಮಲೆ ಅಯ್ಯಪ್ಪನ ಆಲಯದಂತೆ ಪ್ರಸಿದ್ಧಿ ಪಡೆದಿದೆ. ನನ್ನ ಆತ್ಮೀಯ ಮಿತ್ರ ಕೇರಳ ರಾಜ್ಯದ (DIG) ಪೋಲಿಸ್ ಆಧಿಕಾರಿ ಶ್ರೀ ಯತೀಶ್ ಚಂದ್ರರವರು ನನ್ನ ಬರಮಾಡಿಕೊಂಡು ದರ್ಶನಕ್ಕೆ ಸಹಕಾರಿಯಾದರು ಅಂತ ಬರೆದುಕೊಂಡಿದ್ದಾರೆ.
https://www.instagram.com/reel/DLmp_XWzG-c/?igsh=MThhem9tMmRodXFzdw==