newsics.com
ಬೆಂಗಳುರು: ಎದೆನೋವು’ ಎಂದು ಓಡಿಕೊಂಡು ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಲು ಹಾಸಿಗೆ ಮೇಲೆ ಮಲಗಿಸಿದ ಕೆಲವೇ ನಿಮಿಷಗಳಲ್ಲಿ ಕಾರ್ಡಿಯಾಕ್ ಅರೆಸ್ಟ್ ಆಗುವ ಮೂಲಕ ಮೆದುಳು ಬ್ರೈನ್ ಡೆಡ್ ಆಗಿ ಸಾವನ್ನಪ್ಪಿದ ಘಟನೆ ಹೊಸಕೋಟೆಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಇಂದು ಬೆಳಿಗ್ಗೆ 52 ವರ್ಷದ ಕೋನಪ್ಪ ಎಂಬವರು ಎದೆ ನೋವಿನಿಂದ ಬಳಲುತ್ತಾ ಸ್ವತಃ ನಡೆದುಕೊಂಡು ಆಸ್ಪತ್ರೆಗೆ ಬಂದಿದ್ದರು. ಆದರೆ, ಆಸ್ಪತ್ರೆಯ ಭದ್ರತಾ ಕ್ಯಾಮೆರಾದ ದೃಶ್ಯಗಳ ಪ್ರಕಾರ, ಅವರು ಒಳಗೆ ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ ಕಾರ್ಡಿಯಾಕ್ ಅರೆಸ್ಟ್ (ಹೃದಯ ನಿಲ್ಲುವಿಕೆ) ಉಂಟಾಗಿ, ಅವರು ಕುಸಿದು ಬಿದ್ದರು. ವೈದ್ಯರು ತಕ್ಷಣವೇ ಚಿಕಿತ್ಸೆ ನೀಡಲು ಮುಂದಾದರೂ, ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ರವಾನಿಸಲು ಯತ್ನಿಸುವಷ್ಟರಲ್ಲಿ ಕೋನಪ್ಪ ಅವರ ಮೆದುಳು ನಿಷ್ಕ್ರಿಯವಾಗಿದ್ದು, ಬ್ರೈನ್ ಡೆಡ್ ಘೋಷಿಸಲಾಯಿತು.
ಈ ಘಟನೆ ಆತನ ಕುಟುಂಬಸ್ಥರಲ್ಲಿ ಆಘಾತ ಉಂಟುಮಾಡಿದ್ದು, ವೈದ್ಯರ ಪ್ರಕಾರ ಇತ್ತೀಚೆಗೆ ಇಂತಹ ತೀವ್ರ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಘಟನೆಗಳು ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂಬ ಸಂದೇಶವನ್ನು ಪುನಃ ನೆನಪಿಸುತ್ತವೆ. ಎದೆನೋವು, ಉಸಿರಾಟದ ತೊಂದರೆ, ಅಥವಾ ಶರೀರದ ಎಡಭಾಗದಲ್ಲಿ ತೀವ್ರ ನೋವು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಬ್ರೈನ್ ಡೆಡ್ ಎಂದರೇನು?
ಬ್ರೈನ್ ಡೆಡ್ ಎಂದರೆ ಮೆದುಳು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದರ್ಥ. ಮೆದುಳಿನಲ್ಲಿ ಉಂಟಾದ ಗಂಭೀರ ಗಾಯ, ಆಮ್ಲಜನಕದ ಕೊರತೆ ಮತ್ತು ಅತಿಯಾದ ರಕ್ತದ ಹರಿವಿನಂತಹ ಪ್ರಮುಖ ಅಂಶಗಳು ಈ ಸ್ಥಿತಿಗೆ ಕಾರಣವಾಗುತ್ತದೆ. ವ್ಯಕ್ತಿ ಮೆದುಳು ನಿಷ್ಕ್ರಿಯಗೊಂಡಾಗ ಮೆದುಳು ಹೊರತುಪಡಿಸಿ ಇಡೀ ದೇಹ ಕೆಲಸ ಮಾಡುತ್ತೆ. ಒಂದು ರೀತಿಯಲ್ಲಿ ಮನುಷ್ಯ ಬದುಕಿದ್ದು ಸತ್ತ ಸ್ಥಿತಿ. ರೋಗಿಯು ಉಸಿರಾಡದ ಕಾರಣ, ಕೃತಕ ಉಸಿರಾಟ ಅಂದರೆ ವೆಂಟಿಲೇಟರ್ನಲ್ಲಿ ಇರಿಸಲಾಗುತ್ತದೆ.
ಅಡ್ವಾಣಿ ಮೇಲೆ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿದ್ದ ಉಗ್ರ ಅಬೂಬಕರ್ ಅರೆಸ್ಟ್