newsics.com
ದಾವಣಗೆರೆ: ಬಿಜೆಪಿಯ ಮಾಜಿ ಕಾರ್ಪೋರೇಟರ್ ಮನೆಯಲ್ಲಿ ಯುಪಿಎಸ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ದಾವಣಗೆರೆ ನಗರದ ಕಾಯಿಪೇಟೆಯಲ್ಲಿ ನಡೆದಿದೆ.
ಕುಮಾರ್ ಜೈನ್ (36) ಹಾಗೂ ವಿಮಲಾಬಾಯಿ (68) ಮೃತಪಟ್ಟಿವರು. ಇವರು ಕಾಯಿಪೇಟೆಯಲ್ಲಿರುವ ಬಿಜೆಪಿಯ ಮಾಜಿ ಕಾರ್ಪೋರೇಟರ್ ರುದ್ರಮುನಿ ಅವರ ಮನೆಯಲ್ಲಿ ಇದ್ದರು. ರಾತ್ರಿ ಸಂದರ್ಭದಲ್ಲಿ ಎಲ್ಲರೂ ಮಲಗಿರುವಾಗ ಯುಪಿಎಸ್ ದೊಡ್ಡ ಮಟ್ಟದಲ್ಲಿ ಸ್ಫೋಟಗೊಂಡಿದೆ.
ಇದರಿಂದ ರಾತ್ರಿ ಮನೆಯಲ್ಲಿ ದಟ್ಟ ಹೊಗೆ ಆವರಿಸಿ ಬಿಟ್ಟಿದೆ. ಹೀಗಾಗಿ ಒಳಗಿದ್ದವರಿಗೆ ಉಸಿರಾಟದ ತೊಂದರೆ ಆಗಿದೆ. ಆದರೂ ಮನೆಯಲ್ಲಿದ್ದ ಆರು ಜನರ ಪೈಕಿ ನಾಲ್ವರು ದಟ್ಟ ಹೊಗೆಯಲ್ಲಿ ಹೊರಗಡೆ ಓಡಿ ಬಂದಿದ್ದಾರೆ. ಉಳಿದ ಇಬ್ಬರು ಆಚೆ ಬರಲು ಆಗದೇ ದಟ್ಟವಾದ ಹೊಗೆಯಿಂದ ಉಸಿರಾಡಲು ಆಗದೇ ಜೀವ ಬಿಟ್ಟಿದ್ದಾರೆ. ಈ ಬಗ್ಗೆ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.