newsics.com
28 ವರ್ಷಗಳ ಹಿಂದಿನ ಭೂ ಹಗರಣಕ್ಕೆ ಸಂಬಂಧಿಸಿದಂತೆ ತಾಯಿ-ಮಗನ ವಿರುದ್ಧ ಪಂಜಾಬ್ನ ಫಿರೋಜ್ಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
1962, 1965 ಮತ್ತು 1971ರ ಯುದ್ಧಗಳಲ್ಲಿ ಬಳಸಲಾಗಿದ್ದ ಐತಿಹಾಸಿಕ ಭಾರತೀಯ ವಾಯುಪಡೆಯ ವಾಯುನೆಲೆಯನ್ನು ಕಂದಾಯ ಅಧಿಕಾರಿಗಳ ಸಹಕಾರದೊಂದಿಗೆ ತಾಯಿ-ಮಗನ ಜೋಡಿ ವಾಯುನೆಲೆಯನ್ನೇ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
1997ರಲ್ಲಿ ದುಮ್ನಿ ವಾಲಾ ಗ್ರಾಮದ ನಿವಾಸಿಗಳಾದ ಉಷಾ ಅನ್ಸಾಲ್ ಮತ್ತು ಅವರ ಮಗ ನವೀನ್ ಚಂದ್ ಈ ಭೂಮಿಯನ್ನು ಮಾರಾಟ ಮಾಡಿದ್ದರು. ನಿವೃತ್ತ ಕಂದಾಯ ಅಧಿಕಾರಿ ನಿಶಾನ್ ಸಿಂಗ್ ಅವರು ವಿಜಿಲೆನ್ಸ್ ಬ್ಯೂರೋಗೆ ದೂರು ನೀಡಿದ ನಂತರ ಈ ವಿಷಯ ಮೊದಲು ಬೆಳಕಿಗೆ ಬಂದಿತು. ಬಳಿಕ ಪ್ರಾಥಮಿಕ ತನಿಖೆ ನಡೆಸಲಾಗಿದ್ದರೂ ಹಲವು ವರ್ಷಗಳವರೆಗೆ ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ವಾಗ್ದಂಡನೆ ಮೇರೆಗೆ ವಿಜಿಲೆನ್ಸ್ ಇಲಾಖೆ ನಡೆಸಿದ ತನಿಖೆಯ ಪರಿಣಾಮವಾಗಿ, ಈ ವಂಚನೆ ನಡೆದ 28 ವರ್ಷಗಳ ನಂತರ ಜೂನ್ 20, 2025ರಂದು ಇಬ್ಬರ ವಿರುದ್ಧ ನ್ಯಾಯಾಲಯದ ಹಸ್ತಕ್ಷೇಪದ ನಂತರ ಇತ್ತೀಚೆಗೆ ಅಂತಿಮವಾಗಿ ಎಫ್ಐಆರ್ ದಾಖಲಾಗಿದೆ.