newsics.com
ಚೆನ್ನೈ: ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತಮಿಳು ಖ್ಯಾತ ನಟ ಕೃಷ್ಣ ಅವರನ್ನು ಬಂಧಿಸಲಾಗಿದೆ.
ಡ್ರಗ್ ಕೇಸ್ ನಲ್ಲಿ ಈ ಹಿಂದೆ ನಟ ಶ್ರೀಕಾಂತ್, ನಿರ್ಮಾಪಕ ಪ್ರಸಾದ್ ಅವರನ್ನು ಬಂಧಿಸಲಾಗಿತ್ತು. ಈ ವೇಳೆ ಕೃಷ್ಣ ಅವರು ತಲೆಮರೆಸಿಕೊಂಡಿದ್ದರು. ಇದೀಗ ಕೃಷ್ಣ ಅವರನ್ನು ಬಂಧಿಸಿ ನುಂಗಬಾಕಂ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ನಟ ಕೃಷ್ಣ ಡ್ರಗ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು. ಇದರಲ್ಲಿ ಅವರು ಭಾಗಿಯಾಗಿದ್ದಾರು ಎನ್ನಲಾಗಿದೆ. ಇನ್ನು ಡ್ರಗ್ ಪ್ರಕರಣ ಸಂಬಂಧ ಈಗಾಗಲೇ 22 ಜನರನ್ನು ಬಂಧಿಸಲಾಗಿದೆ. ಪೊಲೀಸರು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.