newsics.com
ಇಟಾವಾ: ಡಬಲ್ ಡೆಕ್ಕರ್ ಬಸ್ ಪಲ್ಟಿಯಾಗಿ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, 50ಜನರು ಗಂಭೀರವಾಗಿ ಗಾಯಗೊಂಡಿ ರುವ ಘಟನೆ ಲಖನೌ-ಆಗ್ರಾ ಎಕ್ಸ್ ಪ್ರೆಸ್ ವೇನಲ್ಲಿ ನಡೆದಿದೆ.
ಮೃತರನ್ನು ನೇಪಾಳದ ಬರ್ದಾ ನಿವಾಸಿ ಶೈದಾ (22) ಮತ್ತು ಬೊಹಾರದ ಮನೋಜ್ ಕುಮಾರ್ (52) ಎಂದು ಗುರುತಿಸಲಾಗಿದೆ.
ಬಿಹಾರದಿಂದ ದೆಹಲಿಗೆ ತೆರಳುತ್ತಿದ್ದ ಡಬಲ್ ಡೆಕ್ಕರ್ ಬಸ್ ಪಲ್ಟಿಯಾಗಿ ಕಂದಕ್ಕಕೆ ಉರುಳಿ ಬಿದ್ದಿದೆ.
ಟ್ರಕ್ ಹಿಂದಿಕ್ಕಲು ಹೋಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದಿದೆ. ಬಸ್ಸಿನಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗೆ ಪೊಲೀಸರು ಹಾಗೂ ಹೆದ್ದಾರಿ ಭದ್ರತಾ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.