newsics.com
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಆಡುತ್ತಿರುವುದು, ಅಲ್ಲದೆ ಜುಲೈ 2ನೇ ವಾರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಹೊಸ ಅಧ್ಯಕ್ಷರ ನೇಮಕ ಮಾಡುವ ಸಾಧ್ಯತೆ ಇದೆ. ಈ ವಿಚಾರವಾಗಿ ಬಿಜೆಪಿ ರೆಬೆಲ್ ಟೀಮ್ ಫುಲ್ ಆಕ್ಟಿವ್ ಆಗಿದ್ದು ಬೆಂಗಳೂರಿನಲ್ಲಿ ಸಾಲು ಸಾಲು ಮೀಟಿಂಗ್ ನಡೆಸುತ್ತಿದೆ.
ಹೌದು ಬೆಂಗಳೂರಿನಲ್ಲಿ ಅತೃಪ್ತರ ತಂಡ ಮತ್ತೆ ಸಾಲು ಸಾಲು ಸಭೆ ನಡೆಸಿದೆ. ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ನಿವಾಸದಲ್ಲಿ ಸಭೆ ನಡೆಸುತ್ತಿದೆ. ಬಿಜೆಪಿ ಶಾಸಕರಾದ ರಮೇಶ್ ಜಾರಕಿಹೊಳಿ, ಬಿಪಿ ಹರೀಶ್ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸೇರಿದಂತೆ ಹಲವು ನಾಯಕರು ಈ ಒಂದು ಸಭೆಯಲ್ಲಿ ಭಾಗಿಯಾಗಿದ್ದಾರೆ. ವಿಜಯೇಂದ್ರ ವಿರುದ್ಧ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಅಸಮಾಧಾನಿತರಿಂದ ಹೈಕಮಾಂಡ್ ಭೇಟಿಗೆ ಪ್ರಯತ್ನಿಸಲಾಗುತ್ತಿದೆ. ಜುಲೈ 2ನೇ ವಾರದಲ್ಲಿ ಈ ಒಂದು ತಂಡ ದೆಹಲಿ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಬಿಜೆಪಿ ಹೈಕಮಾಂಡ್ ನಾಯಕರು ಬೇಟಿಗೆ ಈ ಒಂದು ಸಮಾಧಾನ ಮಾಡಿದೆ ವರಿಷ್ಠರ ಜೊತೆ ಸಮಯ ಕೇಳಿ ದೆಹಲಿಗೆ ತೆರಳೋಕೆ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
Toll Tax ಜುಲೈ 15 ರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ತೆರಿಗೆ ಪಾವತಿ ಕಡ್ಡಾಯ.!