newsics.com
ಲೀಡ್ಸ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ತೀವ್ರ ಮುಖಭಂಗ ಅನುಭವಿಸಿದೆ. ಬ್ಯಾಟಿಂಗ್, ಬೌಲಿಂಗ್ನಲ್ಲಿ ಗಿಲ್ ಪಡೆ ಎಡವಿದ್ದು ನಿಜ. ಜೈಸ್ವಾಲ್ ಮಾಡಿದ ಯಡವಟ್ಟು ತಂಡದ ಸೋಲಿಗೆ ಕಾರಣವಾಯ್ತು. ಶತಕ ವೀರ ಜೈಸ್ವಾಲ್ ಟೀಮ್ ಇಂಡಿಯಾದ ನಂಬರ್ 1 ವಿಲನ್ ಆದರು.
ಜೈಸ್ವಾಲ್ ಒಂದೆರಡು ಕ್ಯಾಚ್ ಬಿಟ್ಟಿದ್ರೆ ಹೋಗ್ಲಿ ಬಿಡು ಅನ್ನಬಹುದಿತ್ತು. ಜೈಸ್ವಾಲ್ ಬಿಟ್ಟಿದ್ದು ಬರೋಬ್ಬರಿ ನಾಲ್ಕು ಕ್ಯಾಚ್ಗಳು.ತಂಡದ ಸೋಲಿಗೆ ಜೈಸ್ವಾಲ್ ಪ್ರಮುಖ ಕಾರಣ. ಅದು ಕೋಚ್ ಗೌತಮ್ ಗಂಭೀರ್ಗೂ ಗೊತ್ತು. ಆದ್ರೆ ಪ್ರೆಸ್ ಕಾನ್ಫರೆನ್ಸ್ರಲ್ಲಿ ಕೋಚ್ ಹೇಳಿಕೆ ನೋ ಪ್ರಾಬ್ಲಂ ಹೇಳಿಕೆ ಅಚ್ಚರಿ ಮೂಡಿಸಿತು. ಬ್ಯಾಟ್ಸ್ಮನ್ಗಳು ಪಂದ್ಯ ಗೆಲ್ಲಿಸಿಕೊಡದೇ ಇರಬಹುದು. ಬೌಲರ್ಗಳಿಗೂ ಪಂದ್ಯ ಗೆಲ್ಲಿಸಿಕೊಡೋ ಸಾಮರ್ಥ್ಯ ಇಲ್ಲದೇ ಇರಬಹುದು. ಬೆಸ್ಟ್ ಫೀಲ್ಡಿಂಗ್ನಿಂದ ಪಂದ್ಯ ಸೋತಿದ್ದೂ, ತೀರಾ ಕಡಿಮೆ.
ಪಂದ್ಯದ ಕೊನೆಯ ದಿನವೂ ಜೈಸ್ವಾಲ್ ಕಳಪೆ ಫೀಲ್ಡಿಂಗ್ ಮುಂದುವರೆಯಿತು. ಕೊನೆಯ ದಿನದ 2ನೇ ಸೆಷನ್ನಲ್ಲಿ ಜೈಸ್ವಾಲ್, ಡಕೆಟ್ ಕ್ಯಾಚ್ ಬಿಟ್ಟರು. ಸಿರಾಜ್ ಬೌಲಿಂಗ್ನಲ್ಲಿ ಸ್ಕೇರ್ ಲೆಗ್ನಲ್ಲಿದ್ದ ಜೈಸ್ವಾಲ್, ಸುಲಭದ ಕ್ಯಾಚ್ ಕೈಚೆಲ್ಲಿದ್ರು. 98 ರನ್ಗಳಿದ್ದಾಗ ಲೈಫ್ ಪಡೆದ ಡಕೆಟ್, 149 ರನ್ ಸಿಡಿಸಿದ್ರು.