newsics.com
ನವದೆಹಲಿ : ಟಾಮಿ ಜೆನೆಸಿಸ್ ಎಂದೇ ಜನಪ್ರಿಯರಾಗಿರುವ ಕೆನಡಾದ ರ್ಯಾಪರ್ ಮತ್ತು ಮಾಡೆಲ್ ಜೆನೆಸಿಸ್ ಯಾಸ್ಮಿನ್ ಮೋಹನರಾಜ್ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಹಿಂದೂ ದೇವತೆ ಕಾಳಿಯನ್ನು ಚಿತ್ರಿಸಿರುವ ಟ್ರೂ ಬ್ಲೂ ಹೆಸರಿನ ಆಲ್ಬಂ ಸಾಂಗ್ ರಿಲೀಸ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.
ಟ್ರ್ಯೂ ಬ್ಯೂʼ ಹೆಸರಿನ ರ‍್ಯಾಪ್ ಆಲ್ಬಂ ರಿಲೀಸ್ ಆಗಿದ್ದು ಇದೀಗ ಈ ಹಾಡನ್ನ ರಿಪೋರ್ಟ್ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಹೆಚ್ಚಾಗಿದೆ. ಇಂಥಹ ವಿಕೃತಿಯನ್ನ ಪೋಷಿಸದಂತೆ ತಡೆಯಲು ಕರೆ ಕೊಡಲಾಗುತ್ತಿದೆ.
ವೀಡಿಯೊದಲ್ಲಿ, ಜೆನೆಸಿಸ್ ತನ್ನ ದೇಹವನ್ನು ನೀಲಿ ಬಣ್ಣದಿಂದ ಅಲಂಕರಿಸಿಕೊಂಡು, ಕೆಂಪು ಬಿಂದಿ ಮತ್ತು ಬಳೆಗಳು, ಮತ್ತು ಚಿನ್ನದ ಬಿಕಿನಿ ಒಳಗೊಂಡಂತೆ ಸಾಂಪ್ರದಾಯಿಕ ಚಿನ್ನದ ಆಭರಣಗಳನ್ನು ಧರಿಸಿ ಕಾಣಿಸಿಕೊಂಡಿದ್ದಾಳೆ.ಕಾಳಿ ಅವತಾರದಲ್ಲಿದ್ದುಕೊಂಡು ಧೂಮಪಾನ ಮಾಡುವುದು, ಕ್ರಿಶ್ಚಿಯನ್ ಕ್ರಾಸ್‌ನ್ನು ಪ್ರಾಪ್ ರೀತಿಯಲ್ಲಿ ಬಳಸಿ ನೆಕ್ಕಿದ್ದಾರೆ.
ಪ್ರತಿಭೆ ತೋರಿಸೋ ನೆಪದಲ್ಲಿ ವಿಕೃತಿ ಮನಸ್ಸನ್ನ ಪ್ರದರ್ಶಿಸಿದ ಟಾಮಿ ವಿರುದ್ಧ ಆಕ್ರೋಶ ಜೋರಾಗಿದ್ದು ಈ ರ‍್ಯಾಪರ್ ಹಿಂದೂ ಹಾಗೂ ಕ್ರಿಶ್ಚಿಯನ್ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿರುವ ಆರೋಪ ಮಾಡಲಾಗುತ್ತಿದೆ.