newsics.com
ಬಾಗಲಕೋಟೆ: ನರೇಗಾ ಯೋಜಯ ಬಿಲ್ ಪಡೆದುಕೊಳ್ಳಲು ಪುರುಷನೊಬ್ಬ ಸೀರೆ ಉಟ್ಟುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದು, ಮಾತ್ರವಲ್ಲ ಅದೇ ಫೋಟೋವನ್ನು ಬಿಲ್‌ನ ಹಣ ಪಡೆಯಲು ಅಪ್ಲೋಡ್ ಕೂಡ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಚಿಕನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಪ್ಲಾಂಟೇಷನ್ ಕಾಮಗಾರಿಗೆ ಮಂಗಳಮ್ಮ ಆರಿ ಹೆಸರಿನಲ್ಲಿ ಸೀರೆ ಉಟ್ಟು ವ್ಯಕ್ತಿಯೊಬ್ಬ ಪೋಸ್ ನೀಡಿದ್ದಾನೆ. ಪಂಚಾಯತ್ ರಾಜ್ ಹಾಗೂ ಗ್ರಾಮ ಪಂಚಾಯ್ತಿಗಳಿಂದ ನಿಯಮ ಮೀರಿದ ಕಾಮಗಾರಿ ಇದಾಗಿದೆ.
ಅಂಗನವಾಡಿ ಕಟ್ಟಡಕ್ಕೆ ನರೇಗಾ ಕಾರ್ಮಿಕರನ್ನು ಬಳಕೆ ಮಾಡಿಕೊಂಡಿರುವುದು ಹುನಗುಂದ ಪಂಚಾಯತ್ ರಾಜ್ ಇಲಾಖೆ ವತಿಯಿಂದ ನಡೆದಿದೆ. ಪಂಚಾಯತ್ ರಾಜ್ ಇಲಾಖೆಯಿಂದ ನಡೆದ ಅಂಗನವಾಡಿ ಕಟ್ಟಡ ಕಾಮಗಾರಿ. ಅಂಗನವಾಡಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನರೇಗಾ ಕೂಲಿ ಕಾರ್ಮಿಕರ ಬಳಕೆಯಲ್ಲಿ ಅಕ್ರಮ ನಡೆದಿದೆ.