newsics.com
ಬೆಂಗಳೂರು :ತಲೆಬುರುಡೆ, ಅಸ್ತಿಪಂಜರ, ಮೂಳೆ ಸೇರಿದಂತೆ ಮನುಷ್ಯನ ಹಲವು ಭಾಗಗಳು ಪತ್ತೆಯಾಗಿರುವ ಬೆಂಗಳೂರಿನ ಎಂಎನ್ ಕೆಡೆನ್ಸ್ ಪ್ಲೋರಾ ಅಪಾರ್ಟೆಂಟ್ ಸಂಕೀರ್ಣದಲ್ಲಿ ಘಟನೆ ನಡೆದಿದೆ.
ಶೌಚಗುಂಡಿ ಸ್ವಚ್ಛಗೊಳಿಸುವಾಗ ಕಾರ್ಮಿಕರಿಗೆ ಅಸ್ತಿಪಂಜರ ಸಿಕ್ಕಿದ್ದು, ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಪೂರ್ವ ವಿಭಾಗದ ಜಂಟಿ ಆಯುಕ್ತ ರಮೇಶ್ ಬಾನೋತ್ ಪ್ರತಿಕ್ರಿಯೆ ನೀಡಿದ್ದು, ಅಪಾರ್ಟೆಂಟಿನ ಇಂಗು ಗುಂಡಿಯಲ್ಲಿ ಅಸ್ತಿಪಂಜರ ಸಿಕ್ಕಿದೆ. ಮೇಲ್ನೋಟಕ್ಕೆ ಇದು ಪುರುಷರ ಅಸ್ತಿಪಂಜರದ ರೀತಿ ಕಾಣಿಸುತ್ತಿದೆ. ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ರಮೇಶ್ ಬಾನೂತ್ ಹೇಳಿದರು . ಪೊಲೀಸರು ಅಸ್ತಿಪಂಜರವನ್ನ ಸದ್ಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.