newsics.com
ಬಹುಭಾಷಾ ನಟಿ ನಿವೇತಾ ಥಾಮಸ್ ಅವರು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚಿದ್ದಾರೆ. ನಿವೇತಾ ಅವರಿಗೆ ಅಭಿಮಾನಿಗಳ ಸಂಖ್ಯೆ ಕೂಡ ಜಾಸ್ತಿಯೇ ಇದೆ. ಆದರೆ ಅವರು ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಇದರಿಂದ ನಟಿಗೆ ಏನಾಯ್ತು ಎಂದು ಅವರ ಅಭಿಮಾನಿಗಳು ಆಗಾಗ ಪ್ರಶ್ನೆಗಳನ್ನು ಕೇಳುತ್ತಿದ್ದರು.
ಅವರು ಇತ್ತೀಚೆಗೆ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಪ್ರತ್ಯಕ್ಷವಾಗಿದ್ದಾರೆ. ನಿವೇತಾ ಅವರ ಸ್ಟೈಲಿಶ್ ಹೊಸ ನೋಟ ಮತ್ತು ರೂಪಾಂತರವು ಎಲ್ಲರ ಗಮನ ಸೆಳೆದಿದೆ. ಗುರುತೇ ಸಿಗದಷ್ಟು ನಿವೇತಾ ಬದಲಾಗಿದ್ದು, ಮೊದಲಿಗಿಂತಲೂ ತೂಕ ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
2025ರ ಗದ್ದರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ನಿವೇತಾ ಭಾಗವಹಿಸಿದ್ದರು. ಅಲ್ಲಿ ಅವರ ಕೊನೆಯ ಸಿನಿಮಾ 35-ಚಿನ್ನ ಕಥಾ ಕಾಡು ಪಾತ್ರಕ್ಕಾಗಿ ಅತ್ಯುತ್ತಮ ಪ್ರಮುಖ ನಟಿ ಪ್ರಶಸ್ತಿ ನೀಡಲಾಯಿತು. ಈ ವೇಳೆ ನಟಿ ಮೊದಲಿಗಿಂತಲೂ ವಿಭಿನ್ನವಾಗಿ ಕಾಣಿಸಿಕೊಂಡು ಪ್ರಶಸ್ತಿ ಸ್ವೀಕರಿಸಿದರು. ಇದರ ಬೆನ್ನಲ್ಲೇ ನಟಿಯ ಇತ್ತೀಚಿನ ಫೋಟೋಗಳು ವೈರಲ್ ಆಗಿವೆ.
ಇನ್ನು ದಿಢೀರ್ ತೂಕ ಹೆಚ್ಚಿಸಿಕೊಂಡ ಕಾರಣಕ್ಕೆ ನಿವೇತಾ ಥಾಮಸ್ ಅವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗುತ್ತಿವೆ ಎಂಬ ವದಂತಿಯೂ ಇದೆ. ಇದೇ ಕಾರಣಕ್ಕೆ ಅವರು ಇತ್ತೀಚೆಗೆ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ವಿಜಯ್ ಸೇತುಪತಿ ಅವರ ಮುಂದಿನ ಚಿತ್ರ, ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಮಾತಿದೆ.
https://www.instagram.com/reel/DK5P55Dzq-r/?igsh=MjFuYTNjdm93ang4