newsics.com
ಶ್ರುತಿ ನಾಯ್ಡು ಸಂಸ್ಥೆಯಿಂದ ಮೂಡಿ ಬರ್ತಿರೋ ಬಹು ನಿರೀಕ್ಷಿತ ಧಾರಾವಾಹಿ ಕರ್ಣ. ಕಿರಣ್ ರಾಜ್ಗೆ ನಾಯಕಿಯರಾಗಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಕನ್ನಡ ಕಿರುತೆರೆಯ ವೀಕ್ಷಕರು ಇಂದು ರಾತ್ರಿ 8 ಗಂಟೆಗೆ ಪ್ರಸಾರವಾಗಬೇಕಿದ್ದ ಕರ್ಣ ಸೀರಿಯಲ್‌ಗೋಸ್ಕರ ಕಾಯ್ತಾ ಇದ್ದರು. ಕೊಟ್ಟ ಮಾತಿನಂತೆ ‘ಕರ್ಣ’ ಬಂದೇ ಬರ್ತಾನೆ ಅನ್ನೋದು ಮುಂದೂಡಿಕೆಯಾಗಿದೆ.
ಭವ್ಯಾ ಹಾಗೂ ಕಿರಣ್ ರಾಜ್ ಜೋಡಿ ಆಗಿರೋ ಕ್ಯೂಟ್ ಪ್ರೋಮೋ ಈಗಾಗಲೇ ಸಖತ್ ಹಿಟ್ ಆಗಿದೆ. ರಿಲೀಸ್ ಆದ ಪ್ರೋಮೋಗೆ ವೀಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕರ್ಣ ಧಾರಾವಾಹಿ ಕನ್ನಡ ಕಿರುತೆರೆಯಲ್ಲೇ ಹೈ ಬಜೆಟ್ ಧಾರಾವಾಹಿ ಎಂದೇ ಹೇಳಲಾಗಿತ್ತು
ಇನ್ನು, ಹುಟ್ಟುವ ಮೊದಲೇ ಶಾಪಗ್ರಸ್ಥ. ತನ್ನದಲ್ಲದ ತಪ್ಪಿಗೆ ಜೀವನ ಪೂರ್ತಿ ಪರಿತಪಿಸಿದವನು. ಹೆಜ್ಜೆ ಹೆಜ್ಜೆಗೂ ದ್ವೇಷ, ಅಸೂಯೆ, ಹತಾಶೆ, ನಿರಾಶೆ, ನೋವು, ಅವಮಾನಗಳಿಗೆ ಗುರಿಯಾದವನು. ಆದರೆ ಎಲ್ಲಾ ಸವಾಲುಗಳನ್ನೂ ಹಿಮ್ಮೆಟ್ಟಿ ಜನರ ಪ್ರೀತಿ ಗಳಿಸಿದವನು.
ನಿಷ್ಠೆ, ನಿಯತ್ತು, ತ್ಯಾಗ, ಧೈರ್ಯಕ್ಕೆ ಇನ್ನೊಂದು ಹೆಸರು ಅವನು. ಯುಗ ಯುಗಗಳೇ ಕಳೆದರೂ ದಾನಶೂರನಾಗಿ ಎಲ್ಲರ ಮನದಲ್ಲಿ ನೆಲೆಯಾದವನು. ಕರ್ಣ ಬರೋದನ್ನ ತಡ ಆಗುವಂತೆ ಮಾಡಬಹುದು, ಆದ್ರೆ ಬರೋದನ್ನ ತಡೆಯೋದಕ್ಕೆ ಸಾಧ್ಯವೇ ಇಲ್ಲ. ಇಡೀ ಕರ್ನಾಟಕ ಕಾಯ್ತಾ ಇದೆ ಅನ್ನೋದು ಗೊತ್ತು. ಕೊಟ್ಟ ಮಾತಿನಂತೆ ಕರ್ಣ ಬಂದೇ ಬರ್ತಾನೆ ಎಂದು ಜೀ ಕನ್ನಡ ವಾಹಿನಿ ಸ್ಪಷ್ಟಪಡಿಸಿದೆ.