newsics.com
ಬೆಂಗಳೂರು: ಐಪಿಎಲ್ 2025 ರ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಕ್ಷಣ ಇದಾಗಿದೆ.
18 ವರ್ಷಗಳ ಬಳಿಕ ಕೋಟ್ಯಾಂತರ ಕನಸುಗಳು ಒಂದೇ ಘಳಿಗೆಯಲ್ಲಿ ನನಸಾಗಿದ ಕ್ಷಣ ಇದು. ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಕಣ್ಣೀರು ಹಾಕಿದ್ದಾರೆ.
ಆರ್‌ಸಿಬಿ ಜೊತೆ ಶಾಶ್ವತ ಸಂಬಂಧ ಹೊಂದಿರುವ ಕೊಹ್ಲಿ, ತಮ್ಮ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಸಂದರ್ಭದಲ್ಲಿ ಭಾವನೆಗಳನ್ನು ತಡೆಯಲಾರದೆ ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ.
ಆರ್ಸಿಬಿ ಟ್ರೋಫಿಗೆ ಮುತ್ತಿಡುತ್ತಿದ್ದಂತೆಯೇ ಆರ್ಸಿಬಿ ದಂತಕತೆ ಕಿಂಗ್ ವಿರಾಟ್ ಕೊಹ್ಲಿ ಅವರು ಮೈದಾನದಲ್ಲಿ ಕಣ್ಣೀರು ಇಟ್ಟಿದ್ದಾರೆ. ಭಾವುಕರಾದ ಕೊಹ್ಲಿ, ತಮ್ಮ ಮುಖವನ್ನು ಮುಚ್ಚಿಕೊಂಡು ಮೈದಾನದಲ್ಲೇ ನಿಂತಿದ್ದರು. ಸದ್ಯ ಕೊಹ್ಲಿ ಅವರು ಭಾವುಕರಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ವಿರಾಟ್ ಕೊಹ್ಲಿ ಹೇಳಿದ್ದೇನು?
ಗೆಲುವಿನ ನಂತರ ಭಾವುಕರಾಗಿ ಮಾತನಾಡಿದ ವಿರಾಟ್, ‘ಈ ಗೆಲುವು ತಂಡಕ್ಕೆ ಎಷ್ಟು ಮುಖ್ಯವಾಗಿತ್ತೋ, ಅಭಿಮಾನಿಗಳಿಗೂ ಅಷ್ಟೇ ಮುಖ್ಯವಾಗಿತ್ತು. ನಾನು ನನ್ನ ಯೌವನ, ನನ್ನ ಅತ್ಯುತ್ತಮ ಮತ್ತು ನನ್ನ ಅನುಭವವನ್ನು ಈ ತಂಡಕ್ಕೆ ನೀಡಿದ್ದೇನೆ. ಪ್ರತಿ ಸೀಸನ್‌ನಲ್ಲಿ ಟ್ರೋಫಿ ಗೆಲ್ಲಲು ಪ್ರಯತ್ನಿಸಿದೆ, ನನ್ನ ಅತ್ಯುತ್ತಮವನ್ನು ನೀಡಿದೆ.
ಈ ದಿನ ಬರುತ್ತದೆ ಎಂದು ಎಂದಿಗೂ ಭಾವಿಸಿರಲಿಲ್ಲ, ಗೆದ್ದ ನಂತರ ನಾನು ಭಾವುಕನಾದೆ. ಎಬಿ ಡಿವಿಲಿಯರ್ಸ್ ಫ್ರಾಂಚೈಸಿಗಾಗಿ ಮಾಡಿದ್ದು ಅದ್ಭುತವಾಗಿದೆ. ಹೀಗಾಗಿ ನಾನು ಅವರಿಗೆ ಈ ಕಪ್ ನಮ್ಮದ್ದು ಮಾತ್ರವಲ್ಲ ಬದಲಿಗೆ ನಿಮ್ಮದೂ ಕೂಡ ಎಂದು ಹೇಳಿದೆ. ನಾಲ್ಕು ವರ್ಷಗಳ ಹಿಂದೆಯೇ ಡಿವಿಲಿಯರ್ಸ್ ಐಪಿಎಲ್ನಿಂದ ನಿವೃತ್ತರಾಗಿದ್ದರೂ, ಅವರು ಫ್ರಾಂಚೈಸಿಯಲ್ಲಿ ಹೆಚ್ಚಿನ ಬಾರಿ ಪಿಒಟಿಎಂ ಆಗಿದ್ದಾರೆ. ಅವರು ವೇದಿಕೆಯ ಮೇಲೆ ಇದ್ದು ಕಪ್ ಎತ್ತಲು ಅರ್ಹರು. ಈ ಗೆಲುವು ಅವರಿಗೆ ದೊಡ್ಡ ಗೆಲುವು. ನನ್ನ ಹೃದಯ ಬೆಂಗಳೂರಿನೊಂದಿಗೆ ಇದೆ, ನನ್ನ ಆತ್ಮ ಬೆಂಗಳೂರಿನೊಂದಿಗೆ ಇದೆ. ನಾನು ದೊಡ್ಡ ಪಂದ್ಯಾವಳಿಗಳು ಮತ್ತು ಕ್ಷಣಗಳನ್ನು ಗೆಲ್ಲಲು ಬಯಸುತ್ತೇನೆ. ಈ ರಾತ್ರಿ ನಾನು ಮಗುವಿನಂತೆ ಮಲಗುತ್ತೇನೆ ಎಂದಿದ್ದಾರೆ.
RCB Boys ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೂ ಇಂದು ‘RCB’ ಬಾಯ್ಸ್ ನಿಂದ ‘ವಿಜಯಯಾತ್ರೆ’